ಯುವಕನನ್ನು ಕಿಡ್ನ್ಯಾಪ್ ಮಾಡಿ ಮತ್ತು ಬರುವ ಔಷಧಿ ನೀಡಿ ಮದುವೆ ಮಾಡಿಸಿದ ಹುಡುಗಿ ಮನೆಯವರು!

ಬಿಹಾರದಲ್ಲಿ ವಿಲಕ್ಷಣಕಾರಿ ಘಟನೆಯೊಂದು ನಡೆದಿದೆ. ಯುವಕ ಮದುವೆಗೆ ಒಪ್ಪಿಲ್ಲ ಎಂದು ಆತನನನ್ನು ಕಿಡ್ನ್ಯಾಪ್ ಮಾಡಿ, ಮತ್ತು ಬರುವ ಔಷಧಿ ನೀಡಿ ಯುವತಿ ಜೊತೆ ಮದುವೆ ಮಾಡಿಸಲಾಗಿದೆ. ಈ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಹೈಕಮಾಂಡ್ ಹೇಳಿದಂತೆ ನಾನು, ಡಿಕೆಶಿ ನಡೆದುಕೊಳ್ಳಬೇಕು! – ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು!
ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಈ ಬಲವಂತದ ಮದುವೆ ನಡೆದಿದೆ. ಬಿಹಾರ ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಹಂಬಲದಿಂದ ಅದಕ್ಕಾಗಿ ಸಿದ್ಧಗೊಳ್ಳುತ್ತಿದ್ದ ಯುವಕನನ್ನು ಹುಡುಗಿ ಕಡೆಯವರು ಅಪಹರಿಸಿ ಆತನಿಗೆ ಮತ್ತು ಬರುವ ಔಷಧ ನೀಡಿ ಮದುವೆ ಮಾಡಿಸಿದ್ದಾರೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅಷ್ಟಕ್ಕೂ ಆಗಿದ್ದೇನು?
ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ನಿತೀಶ್ ಎಂಬಾತನನ್ನು ದುಷ್ಕರ್ಮಿಗಳು ಅಪಹರಿಸಿ ಆತನಿಗೆ ಅಮಲು ಥಳಿಸಿ ಅಮಲು ಪದಾರ್ಥ ನೀಡಿ ಮದುವೆ ಮಾಡಿದ್ದಾರೆ. ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ರಜ್ ಅಲಿ ಗ್ರಾಮದಲ್ಲಿ ಮದುವೆ ನಡೆದಿದೆ. ಚಕ್ರಜ್ ಅಲಿ ಗ್ರಾಮದ ನಿವಾಸಿ ಶಂಕರ್ ರೈ ಅವರ ಪುತ್ರಿ ಲಕ್ಷ್ಮಿ ಕುಮಾರಿಯ ಜೊತೆ ಶಿಯುರಾ ಪಂಚಾಯತ್ನ ಜೋಡಿ ಪೋಖರ್ ಗ್ರಾಮದ ನಿವಾಸಿ ಕಾಲೇಶ್ವರ ರೈ ಅವರ ಪುತ್ರ ನಿತೀಶ್ ಕುಮಾರ್ ಅವರನ್ನು ಬಲವಂತವಾಗಿ ಮದುವೆ ಮಾಡಲಾಗಿದೆ. ಮದುವೆಯ ಸಮಯದಲ್ಲಿ ಯುವಕ ನಿತೀಶ್ ಪ್ರಜ್ಞೆಕಳೆದುಕೊಂಡು ಹಾರವನ್ನು ಕೂಡ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವುದನ್ನು ಕಾಣಬಹುದು. ಆದರೆ ಇನ್ನೊಬ್ಬ ಯುವಕ ಬಲವಂತವಾಗಿ ನಿತೀಶ್ ಕೈಯನ್ನು ಹಿಡಿದು ಹುಡುಗಿಯ ಕತ್ತಿಗೆ ಹಾರ ಹಾಕಿಸಿದ್ದಾನೆ. ಸಮಷ್ಟಿಪುರ ಜಿಲ್ಲೆಯ ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಈ ವಿಚಾರ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಫೆಬ್ರವರಿ 7 ರಂದು ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ ಗ್ರಾಮದ ಕೆಲವು ಯುವಕರು ನನ್ನನ್ನು ಬಲವಂತವಾಗಿ ಎತ್ತಿಕೊಂಡು ಹೋದರು. ನಂತರ ನನಗೆ ಅಮಲು ಪದಾರ್ಥ ನೀಡಿ ಥಳಿಸಿ, ನಂತರ ಮೋರ್ವಾ ಬ್ಲಾಕ್ನಲ್ಲಿರುವ ಖುದೇಶ್ವರ ಸ್ಥಾನ ದೇವಸ್ಥಾನದಲ್ಲಿ ಬಲವಂತವಾಗಿ ಮದುವೆ ಮಾಡಿದರು. ಮದುವೆಯ ನಂತರ, ಯಾರನ್ನೂ ಸಂಪರ್ಕಿಸಲು ಸಾಧ್ಯವಾಗದಂತೆ ಮನೆಯಲ್ಲಿ ಬೀಗ ಹಾಕಿ ಬಂಧನದಲ್ಲಿ ಇರಿಸಿದ್ದರು ಎಂದು ನಿತೀಶ್ಕುಮಾರ್ ಆರೋಪಿಸಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಈ ಮದುವೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯುವಕ ನಿತೀಶ್ ಕುಮಾರ್ ಅವರನ್ನು ಆತನನ್ನು ಅಡಗಿಸಿಟ್ಟಿದ ಅತ್ತೆ-ಮಾವನ ಮನೆಯಿಂದ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಇಡೀ ವಿಚಾರದ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಪಟ್ವಾರಿ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಮದುವೆ ಒಪ್ಪಿಗೆಯಿಂದಾಗಿದೆಯೇ ಅಥವಾ ಬಲವಂತದಿಂದಾಗಿದೆಯೇ ಎಂದು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನೋಡಿರಿ

