ಆರ್ಡರ್ ಮಾಡಿದ್ದು 1.85 ಲಕ್ಷ ರೂ. ಮೌಲ್ಯದ ಫೋನ್! – ಗ್ರಾಹಕನ ಕೈ ಸೇರಿದ್ದು ಏನು ಗೊತ್ತಾ?

ಇದು ಆನ್ಲೈನ್ ಯುಗ. ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ರೆ ಸಾಕು.. ನಾವು ಕೂತಲ್ಲಿಗೆ ಎಲ್ಲವೂ ಬರುತ್ತೆ. ಇದೀಗ ಇಲ್ಲೊಬ್ಬರು ಆನ್ಲೈನ್ನಲ್ಲಿ ಫೋನ್ ಆರ್ಡರ್ ಮಾಡಿದ್ದು, ಡೆಲಿವರಿ ಬಾಕ್ಸ್ ಓಪನ್ ಮಾಡಿದಾಗ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ ಗೆ ಕಾನೂನು ಸಂಕಷ್ಟ! – ಧ್ರುವ ಸರ್ಜಾ ವಿರುದ್ಧ ದೂರು ದಾಖಲು!
ಮೊಬೈಲ್ ಬದಲು ಬಂದಿದ್ದೇನು?
ಅಂದ್ಹಾಗೆ ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಸಾಫ್ಟ್ವೇರ್ ಎಂಜಿನಿಯರ್ ಪ್ರೇಮಾನಂದ್ ಇತ್ತೀಚೆಗೆ 1.85 ಲಕ್ಷ ರೂ. ಮೌಲ್ಯದ ಫೋನ್ ಅನ್ನು ಅಮೆಜಾನ್ನಲ್ಲಿ ಬುಕ್ ಮಾಡಿದ್ದರು. ನಿಗದಿ ದಿನಾಂಕದಂತೆ ಆರ್ಡರ್ ಡೆಲಿವರಿಯಾಗಿತ್ತು. ಆದ್ರೆ ಬಾಕ್ಸ್ ಓಪನ್ ಮಾಡಿ ನೋಡಿದ ಟೆಕ್ಕಿಗೆ ಶಾಕ್ ಆಗಿದೆ. ಮೊಬೈಲ್ ಬಾಕ್ಸ್ನಲ್ಲಿ ಚೌಕಾಕಾರದ ಕಲ್ಲನ್ನು ಇಟ್ಟು ವಂಚಿಸಲಾಗಿದೆ.
ಅಂದ್ಹಾಗೆ ಪ್ರೇಮಾನಂದ್ ಅವರು ಫೋನ್ಗಾಗಿ ಸಂಪೂರ್ಣ ಹಣ ಪಾವತಿ ಮಾಡಿದ್ದರು. ಆದ್ರೆ ಫೋನ್ ಬಾಕ್ಸ್ನಲ್ಲಿ ಮೊಬೈಲ್ ಭಾರ ಇರುವಷ್ಟೇ ತೂಕದ ಚೌಕಾಕಾರದ ಕಲ್ಲನ್ನು ಬಾಕ್ಸ್ನಲ್ಲಿಟ್ಟು ಟೆಕ್ಕಿಗೆ ವಂಚಿಸಲಾಗಿದೆ. ಡೆಲಿವರಿ ಬಾಯ್ಗೆ ಕರೆ ಮಾಡಿದರೆ ರೆಸ್ಪಾನ್ಸ್ ಸಿಕ್ಕಿಲ್ಲ. ಕೊನೆಗೆ ಎನ್ಸಿಆರ್ಪಿ ಪೋರ್ಟಲ್ನಲ್ಲಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನೋಡಿರಿ

