ಜನರ ಧ್ವನಿಯಾಗಿದ್ದ ರಾಘವ್ ಚಡ್ಡಾಗೆ ಶಾಕ್ – ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ಕೊಕ್ !

ಜನರ ಧ್ವನಿಯಾಗಿದ್ದ ರಾಘವ್ ಚಡ್ಡಾಗೆ ಶಾಕ್ – ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ಕೊಕ್ !

ರಾಜ್ಯಸಭೆಯಲ್ಲಿ ಪ್ರತಿ ಬಾರಿ ಜನರ ಪರವಾಹಿ ಧ್ವನಿ ಎತ್ತಿದ ಸಂಸದನಾಗಿ ಗುರುತಿಸಿಕೊಂಡಿರುವ ರಾಘವ್ ಚಡ್ಡಾಗೆ ಆಮ್ ಆದ್ಮಿ ಪಾರ್ಟಿ ಶಾಕ್ ಕೊಟ್ಟಿದೆ. ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾರನ್ನು ಕಿತ್ತು ಹಾಕಿದೆ. ಇಷ್ಟೇ ಅಲ್ಲ, ರಾಜ್ಯಸಭೆಯಲ್ಲಿ ರಾಘವ್ ಚಡ್ಡಾಗೆ ಮಾತನಾಡಲು ಸಮಯ ನೀಡಿದಂತೆ ಆಫ್ ಸಭೆಗೆ ಸೂಚಿಸಿದೆ.

ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಕಿತ್ತು ಹಾಕಿದ ಆಮ್ ಆದ್ಮಿ ಪಾರ್ಟಿ, ಇದೀಗ ಈ ಸ್ಥಾನಕ್ಕೆ ಅಶೋಕ್ ಮಿತ್ತಲ್ ಹೆಸರನ್ನು ನಾಮನಿರ್ದೇಶಿಸಿದೆ. ರಾಘವ್ ಚಡ್ಡಾ ಇತ್ತೀಚೆಗೆ ಆಪ್ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಜೈಲಿಗೆ ಹೋದಾಗ, ಜೈಲಿನಿಂದ ಬಿಡುಗಡೆಯಾದಾಗಲೂ ಕೇಂದ್ರದ ವಿರುದ್ದ ಬಿಜೆಪಿ ವಿರುದ್ಧ ಯಾವುದೇ ಮಾತು ಆಡಲಿಲ್ಲ. ಇಷ್ಟೇ ಅಲ್ಲ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರ ಪರವಾಗಿ ಒಂದು ಮಾತು ಆಡಿಲ್ಲ ಎಂದು ಆಪ್ ಆಕ್ರೋಶಗೊಂಡಿತ್ತು. ಆಪ್ ನಾಯಕರಿಂದ ದೂರ ಉಳಿದುಕೊಂಡಿರುವ ರಾಘವ್ ಚಡ್ಡಾ ನಡೆಯಿಂದ ಆಪ್ ಕೆರಳಿ ಕೆಂಡಾಮಂಡಲವಾಗಿದೆ ಎಂಬ ಮಾತುಗಳ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಪ್ ನಡೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಕೆಕೆಆರ್ ?- ರೋಚಕ ಹಣಾಹಣಿಗೆ ಕಾಯುತ್ತಿದ್ದಾರೆ ಫ್ಯಾನ್ಸ್

ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಜನರ ಪರವಾಗಿ ಮಾತನಾಡಿ ಸರ್ಕಾರದ ಗಮನ ಮಾತ್ರವಲ್ಲ, ಜನಸಾಮಾನ್ಯರ ಗಮನ ಸೆಳೆದಿದ್ದಾರೆ.ಇತ್ತೀಚೆಗೆ ರಾಜ್ಯಸಭೆಯಲ್ಲಿ ಟೆಲಿಕಾಂ ನಡೆಸುತ್ತಿರುವ ನಿಯಮ ಬಾಹಿರ ನೀತಿಗಳ ಕುರಿತು ಮಾತನಾಡಿದ್ದರು. ರೀಚಾರ್ಜ್ ಮಾಡದೇ ಇದ್ದರೆ ಇನ್‌ಕಮಿಂಗ್ ಕಾಲ್ ತಡೆಯುವುದೇಕೆ ಎಂದು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ 28 ದಿನ ರೀಚಾರ್ಜ್ ಯಾಕೆ 30 ದಿನ ಇರಬೇಕು ಎಂದು ಜನರ ಪರವಾಗಿ ಮಾತನಾಡಿದ್ದರು. ರಾಘವ್ ಚಡ್ಡಾ ಮಾತಿನ ಬಳಿಕ ಕೇಂದ್ರ ಸರ್ಕಾರ ಈ ಕುರಿತು ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ದೇಶಾದ್ಯಂತ ರಾಘವ್ ಚಡ್ಡಾ ಪರ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

Kishor KV