ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಶಾಕ್! – ನೋಟ್ ಬುಕ್ಸ್ ಗೆ ಶೇ. 30 ರಿಂದ 40 ರಷ್ಟು ಬೆಲೆ ಏರಿಕೆ

ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಶಾಕ್! – ನೋಟ್ ಬುಕ್ಸ್ ಗೆ ಶೇ. 30 ರಿಂದ 40 ರಷ್ಟು ಬೆಲೆ ಏರಿಕೆ

ಬೆಂಗಳೂರು: ಶಾಲಾ – ಕಾಲೇಜು ಆರಂಭಕ್ಕೂ ಮೊದಲೇ ಪೋಷಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಕ್ಕಳ ಪಠ್ಯ ಪುಸ್ತಕ, ಶಾಲಾ ಶುಲ್ಕ ಏರಿಕೆ ಆಯ್ತು. ಈಗ ಮಕ್ಕಳ ನೋಟ್ ಬುಕ್ಸ್, ವರ್ಕ್ ಬುಕ್ಸ್ ಹಾಗೂ ಪೇಪರ್ ಗಳ ಬೆಲೆ ಏರಿಕೆಯಾಗಿದೆ. ಇದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಮೇ 10 ರಂದು ಪ್ರವಾಸಿ ತಾಣಗಳು ಬಂದ್! – ಕಾರಣವೇನು ಗೊತ್ತಾ?

ಮಾರುಕಟ್ಟೆಯಲ್ಲಿ ನೋಟ್ ಬುಕ್ಸ್ ಗಳ ಸ್ಟಾಕ್ಸ್ ಕಡಿಮೆ ಇದೆ. ಮಾರುಕಟ್ಟೆಯಲ್ಲಿ ನೋಟ್ ಬುಕ್ಸ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ನೋಟ್ ಬುಕ್ಸ್, ವರ್ಕ್ ಬುಕ್ಸ್, ಪೇಪರ್ ಗಳ ಬೆಲೆ 30-40% ಏರಿಕೆಯಾಗಿದ್ದು ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ.

ಕಳೆದ ಒಂದು ವರ್ಷದಿಂದ ಉಕ್ರೇನ್ ರಷ್ಯಾ ಯುದ್ಧ ನಡೆಯುತ್ತಿದೆ. ಯುದ್ಧದ ಪರಿಣಾಮ ಭಾರತಕ್ಕೆ ಕಚ್ಚಾ ಪೇಪರ್​ ಬರುತ್ತಿಲ್ಲ. ಇದರಿಂದಾಗಿ ಪೇಪರ್ ಗಳ ಅಭಾವ ಉಂಟಾಗಿದ್ದು, ಪುಸ್ತಕಗಳ ಉತ್ಪಾದನೆ ಕಡಿಮೆಯಾಗಿದೆ. ಪೇಪರ್ ಕೊರತೆ ಹಿನ್ನಲೆ ಶಿಕ್ಷಣ ಇಲಾಖೆ ಈಗಾಗಲೇ ಶೇಕಡಾ 25ರಷ್ಟು ಪಠ್ಯಪುಸ್ತಕ ಗಳ ಖರೀದಿಯ ದರ ಏರಿಕೆ ಮಾಡಿ ಪೋಷಕರಿಗೆ ಶಾಕ್ ನೀಡಿದೆ .ಇದರ ಜೊತೆಗೆ ಈಗ 28 ರೂಪಾಯಿ ಇದ್ದ ನೋಟ್ ಬುಕ್ಸ್ , ವರ್ಕ್ ಬುಕ್ಸ್, ಪೇಪರ್ ಗೆ ಶೇಕಡಾ 30/40 ರೂಪಾಯಿಗೆ ಮಾರುಕಟ್ಟೆಯಲ್ಲಿ ರೇಟ್ ಏರಿಕೆಯಾಗಿದ್ದು ದುಬಾರಿಯಾಗಿದೆ.

suddiyaana