ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಶಾಕ್! – ನೋಟ್ ಬುಕ್ ಬೆಲೆ ಮತ್ತಷ್ಟು ಏರಿಕೆ?
ಬೆಂಗಳೂರು: ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಒಂದಲ್ಲ, ಡಬ್ಬಲ್ ಶಾಕ್ ಸಿಕ್ಕಿದೆ. ಪಠ್ಯ ಪುಸ್ತಕ ಆಯ್ತು, ಮಕ್ಕಳ ಶುಲ್ಕ ಏರಿಕೆ ಆಯ್ತು ಈಗ ಮಕ್ಕಳ ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಎಲ್ಲದರ ಬೆಲೆ ಏರಿಕೆಯಾಗುತ್ತಿದೆ. ಇದರಿಂದಾಗಿ ಮಕ್ಕಳ ಶಿಕ್ಷಣದ ಬಜೆಟ್ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಲಿದ್ದು, ಇದನ್ನು ಎದುರಿಸಲು ಮಾನಸಿಕವಾಗಿ ಮತ್ತು ಹಣಕಾಸು ದೃಷ್ಟಿಯಲ್ಲಿ ಪೋಷಕರು ಸಿದ್ಧರಾಗಬೇಕಿದೆ.
ಈ ಬಾರಿ ಶಾಲಾ ಶುಲ್ಕ, ಪಠ್ಯಪುಸ್ತಕಗಳ ದರ ಮಾತ್ರವಲ್ಲದೇ, ನೋಟ್ಸ್ ಬುಕ್ ಬೆಲೆ ಕೂಡ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಕಳೆದ ಐದಾರು ತಿಂಗಳಿಂದೀಚೆಗೆ ನೋಟ್ ಬುಕ್ ಗಳ ದರ 25% ರಿಂದ 40% ರ ತನಕ ಹೆಚ್ಚಳವಾಗಿದ್ದು, ಪೋಷಕರಿಗೆ ದರ ಏರಿಕೆಯಿಂದ ಟೆನ್ಶನ್ ಶುರುವಾಗಿದೆ.
ಇದನ್ನೂ ಓದಿ: 40 ಚೂಯಿಂಗ್ ಗಮ್ ನುಂಗಿದ್ದ 5 ವರ್ಷದ ಬಾಲಕ – ತೀವ್ರ ಹೊಟ್ಟೆನೋವು.. ಮುಂದೇನಾಯ್ತು ಗೊತ್ತಾ..?
ಕಳೆದ ಶೈಕ್ಷಣಿಕ ವರ್ಷದ ಆರಂಭದ ಪುಸ್ತಕಗಳ ದರಕ್ಕೂ ಶೈಕ್ಷಣಿಕ ವರ್ಷದ ಅಂತ್ಯದ ದರಕ್ಕೂ ಹೋಲಿಸಿದರೆ ದರದ ವ್ಯತ್ಯಾಸ 50% ರಿಂದ 60% ರಷ್ಟು ಹೆಚ್ಚಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ಬೇಡಿಕೆ ಇನ್ನೂ 10% ರಿಂದ 20% ರಷ್ಟು ದರ ಏರಿಕೆ ಆಗುವ ಸಂಭವವಿದೆ ಎಂದು ಸ್ಟೇಷನರಿ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರೆ.
ಒಂದು ಕಡೆ ಪೇಪರ್ ಬೆಲೆ ಏರಿಕೆ ಹಾಗೂ ಕಚ್ಚಾ ಸಾಮಗ್ರಿಗಳ ಬೆಲೆಗಳಲ್ಲೂ ಸಹ ಅಪಾರ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೀಗಾಗಿ ಟೆಕ್ಸ್ಟ್ ಬುಕ್ ಬೆಲೆ ಏರಿಕೆ ಆಗಿದೆ. ಕಳೆದ ವರ್ಷ 100 ಪುಟದ ಖಾಲಿ ಅಥವಾ ಗೆರೆ ಪುಸ್ತಕಕ್ಕೆ 20 ರೂ. ನಿಂದ ಈ ಬಾರಿ 25 ರೂ. ಗಳಿಗೆ ಏರಿದೆ. ಇನ್ನು 200 ಪುಟದ ಪುಸ್ತಕಕ್ಕೆ 30 ರೂ.ಗಳಿದ್ದ ದರ ಈ ವರ್ಷ 37 ರೂ.ಗಳಿಗೆ ಏರಿಕೆಯಾಗಿದೆ.