ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್- ಇನ್ಮುಂದೆ ಬೆಳಗ್ಗೆ ಬಿರಿಯಾನಿ ಸಿಗುವುದು ಡೌಟ್

ಹೊಸಕೋಟೆ ಬಿರಿಯಾನಿ ತುಂಬಾ ಫೇಮಸ್. ಮುಂಜಾನೆ 4 ಗಂಟೆಗೆ ಸಿಗೋ ಹೊಸಕೋಟೆ ಬಿರಿಯಾನಿ ತಿನ್ನಲು ಬಿರಿಯಾನಿ ಪ್ರಿಯರು ಕ್ಯೂ ನಿಲ್ಲುತ್ತಾರೆ.. ಆದರೆ, ಬಿರಿಯಾನಿ ಪ್ರಿಯರಿಗೆ ಒಂದು ಶಾಕಿಂಗ್ ನ್ಯೂಸ್ ಇದೆ. ಇನ್ಮುಂದೆ ಹೊಸಕೋಟೆ ಬಿರಿಯಾನಿ ಬೆಳಗ್ಗೆಯೇ ಸಿಗೋದೇ ಡೌಟ್ ಆಗಿದೆ.
ಇದನ್ನೂ ಓದಿ:ನಂದಿನಿ ಬೂತ್ ಮಾಲೀಕನಿಗೆ ಶಾಕ್ ಕೊಟ್ಟ ವಾಣಿಜ್ಯ ತೆರಿಗೆ ಇಲಾಖೆ – 1 ಕೋಟಿ 3 ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೋಟಿಸ್!
ಬೆಸ್ಟ್ ಬಿರಿಯಾನಿ ತಿನ್ನಲು ನಮ್ಮ ಬೆಂಗಳೂರು ಜನಕ್ಕೆ ಅದೇನೋ ಕ್ರೇಜ್. ಬಿರಿಯಾನಿಗಾಗಿ ಎಷ್ಟುದೂರ ಬೇಕಾದರೂ, ಯಾವ ಟೈಮ್ಗೆ ಬೇಕಾದರೂ ಹೋಗಿ ತಿನ್ನುವುದೇ ಒಂಥರಾ ಮಜಾ. ಅದರಲ್ಲೂ ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಂಗಳೂರು ಸೇರಿದಂತೆ ವಿವಿದೆಡೆಗಳಿಂದ ಬೆಳಗ್ಗೆ 4 ಗಂಟೆಗೆ ಹೋಟೆಲ್ ಮುಂದೆ ಕ್ಯೂ ನಿಲ್ತಾರೆ. ಆದರೆ, ಇದೀಗ ಹೊಸಕೋಟೆ ಬಿರಿಯಾನಿ ಮಾಲೀಕರು ಹಾಗೂ ಗ್ರಾಹಕರಿಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ.
ಹೌದು, ಇನ್ಮುಂದೆ ಹೊಸಕೋಟೆ ಬಿರಿಯಾನಿ ಬೆಳಗಿನ ಜಾವ 4 ಗಂಟೆಗೆ ಸಿಗೋದೇ ಡೌಟ್ ಆಗಿದೆ. 4 ಗಂಟೆಗೆ ಹೋಟೆಲ್ ತೆರೆದು ಬಿರಿಯಾನಿ ಮಾರಾಟ ಮಾಡೋದ್ರಿಂದ ಜನರು ಮಧ್ಯಾಹ್ಯ ರಾತ್ರಿ, ನಸುಕಿನ ಮಂಜಿನಲ್ಲಿ ಡ್ರೈವ್ ಮಾಡ್ತಾ ಹೋಟೆಲ್ಗಳಿಗೆ ಬರ್ತಾರೆ. ಯುವಕರು ಲಾಂಗ್ ಡ್ರೈವ್ ನೆಪದಲ್ಲಿ ಬಿರಿಯಾನಿಗೆ ಕ್ಯೂ ನಿಲ್ತಿದ್ದಾರೆ. ಇದ್ರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಮಾಲೀಕರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಯುವಕರು ಲಾಂಗ್ ಡ್ರೈವ್ ಅಂತ ಸ್ಪೀಡ್ ಆಗಿ ವಾಹನ ಚಲಿಸೋದ್ರಿಂದ ಅಪಘಾತ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಇನ್ಮುಂದೆ ನೀವು 4 ಗಂಟೆಗೆ ಬಿರಿಯಾನಿ ಹೋಟೆಲ್ ತೆರೆಯುವಂತಿಲ್ಲ ಎಂದು ಮಾಲೀಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

ನೋಡಿರಿ

