ಡಿ. 4 ರಂದು ಶೋಭಿತಾ ನಾಗಾಚೈತನ್ಯ ಮದುವೆ – ಆಮಂತ್ರಣ ಪತ್ರಿಕೆ ವೈರಲ್‌

ಡಿ. 4 ರಂದು ಶೋಭಿತಾ ನಾಗಾಚೈತನ್ಯ ಮದುವೆ – ಆಮಂತ್ರಣ ಪತ್ರಿಕೆ ವೈರಲ್‌

ಟಾಲಿವುಡ್‌ ನಟ ನಾಗಾಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಈಗಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನಿಶ್ಚಿತಾರ್ಥ ವಿಚಾರ ಜಗತ್ತಿಗೆ ಗೊತ್ತಾಗಿದ್ರು, ಮದುವೆ ದಿನಾಂಕವನ್ನ ಸೀಕ್ರೆಟ್‌ ಆಗೇ ಇಟ್ಟಿದ್ದಾರೆ. ಆದ್ರೀಗ ಶೋಭಿತಾ ನಾಗಚೈತನ್ಯ ಮದುವೆಯ ಆಮಂತ್ರಣ ಪತ್ರಿಕೆ ವೈರಲ್‌ ಆಗಿದೆ.

ಇದನ್ನೂ ಓದಿ: ಬಿಟ್‌ಕಾಯಿನ್‌ಗೆ ಬಂಗಾರದ ಬೆಲೆ.. 6 ಸಾವಿರದಿಂದ 78 ಲಕ್ಷಕ್ಕೆ ಹೋಗಿದ್ದೇಗೆ? – ಭಾರತದಲ್ಲಿ ಹೂಡಿಕೆಗೆ ಅವಕಾಶವಿದ್ಯಾ?

ನಟ ನಾಗಚೈತನ್ಯ ಹಾಗೂ ಶೋಭಿತಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಯಾವಾಗ ಅಂತಾ ಫ್ಯಾನ್ಸ್‌ ಕೇಳುತ್ತಾ ಬಂದಿದ್ದಾರೆ. ಆದ್ರೆ ಶೋಭಿತಾ ಆಗ್ಲಿ, ನಾಗಚೈತನ್ಯ ಮದುವೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.. ಆದ್ರೀಗ ಮದುವೆಯ ಆಮಂತ್ರಣ ಪತ್ರಿಕೆ ವೈರಲ್‌ ಆಗಿದೆ.  ಡಿ.4ರಂದು ನಾಗಚೈತನ್ಯ ಮದುವೆ ಡೇಟ್ ನಿಗದಿಯಾಗಿದೆ. ಬಂಜಾರಾ ಹಿಲ್ಸ್‌ ನಲ್ಲಿರುವ ಅನುಪಮಾ ಸ್ಟುಡಿಯೋದಲ್ಲಿ ಮದುವೆಯಾಗುತ್ತಿದ್ದಾರೆ. ಇದು ನಾಗಾರ್ಜುನ ಅಕ್ಕಿನೇನಿ ಅವರ ಒಡೆತನದಲ್ಲಿದೆ. ಈ ಮದುವೆಗೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಅಂದಹಾಗೆ, ನಟಿ ಸಮಂತಾ ಜೊತೆ ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ರಲ್ಲಿ ಇಬ್ಬರೂ ಡಿವೋರ್ಸ್ ಘೋಷಿಸಿದರು. ಹಲವು ವರ್ಷಗಳು ಪ್ರೀತಿ, ಮದುವೆಯ ಮುದ್ರೆ ಒತ್ತಿದ್ದ ಜೋಡಿ ಆ ನಂತರ ಡಿವೋರ್ಸ್ ಮೂಲಕ ವೈವಾಹಿಕ ಬದುಕಿಗೆ ಪೂರ್ಣ ವಿರಾಮವಿಟ್ಟರು.

Shwetha M

Leave a Reply

Your email address will not be published. Required fields are marked *