ಶೊಯಿಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ – ಬಿಪಿಎಲ್‌ನಿಂದ ಶೋಯೆಬ್ ಕಿಕ್ ಔಟ್

ಶೊಯಿಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ – ಬಿಪಿಎಲ್‌ನಿಂದ ಶೋಯೆಬ್ ಕಿಕ್ ಔಟ್

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗ ಶೊಯಿಬ್ ಮಲಿಕ್ ಈಗ ತಂಡದಿಂದ ಕಿಕ್‌ಔಟ್ ಆಗಿದ್ದಾರೆ. ಮೂರನೇ ಮದುವೆಯ ಬಳಿಕ ಸಖತ್ ಸುದ್ದಿಯಾಗಿದ್ದ ಶೊಯಿಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಮೊದಲ ದಿನ ಭಾರತದ ಬೌಲರ್ಸ್ ಮೋಡಿ – ಇಂಗ್ಲೆಂಡ್‌ನ ಒಂದು ರನ್ ಕಟ್ ಮಾಡಿದ್ದು ಯಾಕೆ?

ಪಾಕಿಸ್ತಾನದ ಮಾಜಿ ನಾಯಕ ಮತ್ತು ಆಲ್ರೌಂಡರ್ ಶೋಯೆಬ್ ಮಲಿಕ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಕಳೆದ ವಾರವಷ್ಟೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದ ವಿಚ್ಛೇದನ ಪಡೆದು ಮೂರನೇ ಮದುವೆಯಾಗುವ ಮೂಲಕ ಶೋಯೆಬ್ ಮಲಿಕ್ ಎಲ್ಲೆಡೆ ಸುದ್ದಿಯಾಗಿದ್ದರು. ಮೂರನೇ ಮದುವೆಯ ಬಳಿಕ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ   ಶೋಯೆಬ್ ಕಣಕ್ಕಿಳಿದಿದ್ದರು. ಆದರೆ ಲೀಗ್‌ನಲ್ಲಿ ಫಾರ್ಚೂನ್ ಬಾರಿಶಾಲ್ ತಂಡದ ಪರ ಕಣಕ್ಕಿಳಿಯುತ್ತಿರುವ ಶೋಯೆಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ  ಫ್ರಾಂಚೈಸ್ ಫಾರ್ಚೂನ್ ಬಾರಿಶಾಲ್, ಫಿಕ್ಸಿಂಗ್ ಆರೋಪ ಕೇಳಿಬಂದ ನಂತರ ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು ಸೀಸನ್ನ ಮಧ್ಯದಲ್ಲಿ ಕೊನೆಗೊಳಿಸಿದೆ. ಹಾಗೆಯೇ ಮಲಿಕ್ ಅವರನ್ನು ತಂಡದಿಂದ ಹೊರಹಾಕಲಾಗಿದ್ದು ಅವರು ಇದ್ದಕ್ಕಿದ್ದಂತೆ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ದುಬೈಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಸಾನಿಯಾ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಇತ್ತೀಚೆಗಷ್ಟೇ ಶೋಯೆಬ್ ಮಲಿಕ್ ಮೂರನೇ ಮದುವೆಯ ಮೂಲಕ ಸುದ್ದಿಯಾಗಿದ್ದರು. ನೋ ಬಾಲ್ ವಿವಾದಕ್ಕೆ ಎರಡು ದಿನಗಳ ಮೊದಲು, ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ಮದುವೆಯೊಂದಿಗೆ ಶೋಯೆಬ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಡುವಿನ 13 ವರ್ಷಗಳ ಸುದೀರ್ಘ ಸಂಬಂಧವೂ ಕೊನೆಗೊಂಡಿತ್ತು. ಶೋಯೆಬ್ ಮಲಿಕ್ ಕೂಡ ಸಾನಿಯಾಗೆ ಮೋಸ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.

Sulekha