ಸಿಡಿಲಮರಿಗಳ ಸಂಭ್ರಮಕ್ಕೆ PAK ಕೆಂಡ – ಸೆಲೆಬ್ರೇಷನ್ ಅತಿರೇಕವೆಂದು ನೀತಿ ಪಾಠ
ದೀಪಾವಳಿ ಗೆಲುವಿನ ಹುಚ್ಚಾಟ ಮರೆತ್ರಾ?

ಎಂಥಾ ಮ್ಯಾಚ್. ಅದೆಂಥಾ ಕ್ಲೈಮ್ಯಾಕ್ಸ್. ಅಂಡರ್ 19 ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸಿಡಿಲಮರಿಗಳ ಕೆಚ್ಚೆದೆಯ ಗೆಲುವನ್ನ ಇಡೀ ಇಂಡಿಯಾನೇ ಕೊಂಡಾಡ್ತಿದೆ. ಸಂಭ್ರಮಿಸ್ತಾ ಇದೆ. ಆದ್ರೆ ಲಾಸ್ಟ್ ಮೂಮೆಂಟ್ವರೆಗೂ ನಾವೇ ಗೆಲ್ಲೋದು ಅಂತಾ ಮೆರೀತಿದ್ದ ಪಾಕಿಗಳಿಗೆ ಮಾತ್ರ ಇದನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಭಾರತದ ಗೆಲುವಿನ ಬಳಿಕ ಹೊಸ ವರಸೆ ತೆಗೆದಿದ್ದಾರೆ.
ಇದನ್ನೂ ಓದಿ : KL ಬ್ಯಾಟರ್ ಅಲ್ಲ ಆಪತ್ಬಾಂಧವ – ವಿಶ್ವಕಪ್ ಗಾದ್ರೂ SLOT ಫಿಕ್ಸ್ ಇದ್ಯಾ?
ನವೆಂಬರ್ 14ರಂದು ಅಲ್ ಅಮೆರಾತ್ನಲ್ಲಿ ನಡೆದ 2026ರ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಭಾರತದ ಮರಿಹುಲಿಗಳು ಪಾಕಿಸ್ತಾನವನ್ನ ಬೇಟೆಯಾಡಿ ಚಾಂಪಿಯನ್ ಪಟ್ಟಕ್ಕೇರಿದ್ರು. ಅದು ಅಂತಿಂಥಾ ಗೆಲುವಲ್ಲ. ಲಾಸ್ಟ್ ಬಾಲ್ ಥ್ರಿಲ್ಲರ್. 338 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೊನೇ ಎಸೆತದಲ್ಲಿ 3 ರನ್ಗಳು ಬೇಕಿದ್ದಾಗ ಬೌಂಡರಿ ಬಾರಿಸಿ ಐತಿಹಾಸಿಕ ಗೆಲುವನ್ನ ಸಾಧಿಸಿದ್ರು. ಫೈನಲ್ ಪಂದ್ಯ ಗೆದ್ದ ಖುಷಿ, ಅದೂ ಕೂಡ ಪಾಕ್ ವಿರುದ್ಧದ ಗೆಲುವು ಅಂದ್ಮೇಲೆ ಸೆಲೆಬ್ರೇಷನ್ ಕೂಡ ನೆಕ್ಸ್ಟ್ ಲೆವೆಲ್ನಲ್ಲೇ ಇರ್ಬೇಕಲ್ವ. ಹೀಗಾಗಿ ಟ್ರೋಫಿ ಗೆಲುವಿನ ಬೆನ್ನಲ್ಲೇ ಭಾರತೀಯ ಆಟಗಾರರು ಅಗ್ರೆಸ್ಸಿವ್ ಮೋಡ್ನಲ್ಲೇ ಕುಣಿದು ಕುಪ್ಪಳಿಸಿದ್ರು. ಆದ್ರೆ ಇದನ್ನ ಸಹಿಸಿಕೊಳ್ಳೋಕಾಗದ ಪಾಕ್ನ ಕೆಲ ಮಾಜಿ ಆಟಗಾರರು ಹೊಸ ಕಿರಿಕ್ ತೆಗೆದಿದ್ದಾರೆ.
ಭಾರತದ ಸೆಲೆಬ್ರೇಷನ್ ಟೀಕಿಸಿದ ಶೋಯೆಬ್ ಅಖ್ತರ್!
ಪಾಕಿಸ್ತಾನ ವಿರುದ್ಧ ಭಾರತ ಫೈನಲ್ ಗೆದ್ದು ಆ ನಂತ್ರ ಸೆಲೆಬ್ರೇಷನ್ ಮಾಡಿದ್ದರ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ರಿಯಾಕ್ಟ್ ಮಾಡಿದ್ದಾರೆ. ಭಾರತೀಯರ ಗೆಲುವುನ್ನ ಒಪ್ಪಿಕೊಂಡ್ರೂ ಕೂಡ ಮೈದಾನದಲ್ಲಿನ ಪಂದ್ಯಗಳ ವೇಳೆ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಅಂದ್ರೆ ಪ್ರೊಫೆಷನಲ್ ಬಿಹೇವಿಯರ್ ಮತ್ತು ಕ್ರೀಡಾ ಮನೋಭಾವದ ಬಗ್ಗೆ ಹೇಳಿದ್ದಾರೆ. ನಾವು ಕ್ರಿಕೆಟ್ ಆಡುವುದಷ್ಟೇ ಅಲ್ಲ, ಮೌಲ್ಯಗಳೊಂದಿಗೆ ಸಾಗಬೇಕು. ಇಂದಿಗೂ ನಾನು ಸಚಿನ್ ತೆಂಡೂಲ್ಕರ್ ಬಗ್ಗೆ ಒಳ್ಳೆಯದನ್ನೇ ಹೇಳುತ್ತೇನೆ. ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ನಾನು ಇನ್ನೂ ಭಾವಿಸುತ್ತೇನೆ. ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ, ನಾವೆಲ್ಲರೂ ಒಳ್ಳೆಯ ಸ್ನೇಹಿತರು. ನಾವು ಎಂದಿಗೂ ಪರಸ್ಪರ ವಿರುದ್ಧವಾಗಿ ರಿಯಾಕ್ಟ್ ಮಾಡಲ್ಲ. ಆದ್ರೆ ಭಾರತದ U19 ಹುಡುಗರ ಆಟ, ಸೆಲೆಬ್ರೇಷನ್ ಕೂಡ ಇಷ್ಟವಾಯಿತು. ಆದರೆ ಪಾಕಿಸ್ತಾನ ತಂಡವು ಟೂರ್ನಮೆಂಟ್ನಲ್ಲಿ ತುಂಬಾ ಶ್ರೇಷ್ಠ ತಂಡವಾಗಿತ್ತು. ಉತ್ತಮ ಪ್ರದರ್ಶನವನ್ನೇ ನೀಡಿದ್ರು. ಆದ್ರೆ ಫೈನಲ್ನಲ್ಲಿ ಅವರಿಗೆ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಭಾರತಕ್ಕೆ ಮಾತ್ರ ಟಫ್ ಸಿಚುಯೇಷನ್ಗಳಲ್ಲಿ ಪ್ರೆಶರ್ ಹೇಗೆ ಹ್ಯಾಂಡಲ್ ಮಾಡ್ಬೇಕು ಅನ್ನೋದು ಗೊತ್ತಿದೆ. ಆದ್ರೆ ಮೈದಾನದಲ್ಲಿ ಅತಿಯಾದ ಆಕ್ರಮಣಶೀಲತೆ ಒಳ್ಳೆಯದಲ್ಲ ಎಂದಿದ್ದಾರೆ. ರಿಯಾಲಿಟಿ ಏನಂದ್ರೆ ಭಾರತೀಯದ ಈ ಆರ್ಭಟದ ಸಂಭ್ರಮಾಚರಣೆಗೆ ಕಾರಣವೂ ಇದೆ.
ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲೇ ಗ್ರೂಪ್ ಹಂತದಲ್ಲಿ ನವೆಂಬರ್ 8ರಂದು ಅಂದ್ರೆ ದೀಪಾವಳಿ ಹಬ್ಬದ ದಿನ ಭಾರತ-ಪಾಕ್ ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ 46.3 ಓವರ್ಗಳಲ್ಲಿ 208 ರನ್ಗಳಿಗೆ ಆಲೌಟ್ ಆಗಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ 48.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಗಿ ಗೆದ್ದು ಬೀಗಿತ್ತು. ಭಾರತದ ವಿರುದ್ಧ ಪ್ರತೀ ಸಲವೂ ಸೋತು ಸೋತು ಸುಣ್ಣವಾಗಿದ್ದ ಪಾಕಿಸ್ತಾನಕ್ಕೆ ಇದೊಂದು ಗೆಲುವು ಸಿಗುತ್ತಿದ್ದಂತೆ ಜಗತ್ತನ್ನೇ ಗೆದ್ದ ರೇಂಜ್ಗೆ ಕುಣಿದು ಕುಪ್ಪಳಿಸಿದ್ರು. ಭಾರತೀಯ ಆಟಗಾರರ ಎದುರಲ್ಲಿ ಅಗ್ರೆಸ್ಸಿವ್ ಆಗೇ ಸೆಲೆಬ್ರೇಟ್ ಮಾಡಿದ್ರು. ಅಷ್ಟಕ್ಕೂ ಸುಮ್ಮನಾಗದೆ ಭಾರತೀಯರ ಡಗೌಟ್ ಕಡೆ ಪೇಪರ್ ಚೀಟಿ ತೋರಿಸಿ ಟಾಂಟ್ ಕೊಟ್ಟಿದ್ರು. ಗ್ರೂಪ್ ಸ್ಟೇಜಲ್ಲಿ ಅಪರೂಪಕ್ಕೊಂದು ಪಂದ್ಯ ಗೆದ್ದು ಅವ್ರೇ ಈ ರೇಂಜ್ಗೆ ಬಿಲ್ಡಪ್ ಕೊಟ್ರೆ ಮೆನ್ಸ್, ವುಮೆನ್ಸ್ ಸೀನಿಯರ್ಸ್ ಏಷ್ಯಾಕಪ್ನಲ್ಲಿ ಹಾಲಿ ಚಾಂಪಿಯನ್ಸ್, ಈಗ ಅಂಡರ್ 19ನಲ್ಲೂ ಫೈನಲ್ ಗೆದ್ರೆ ಬಿಡ್ತಾರಾ. ಇದೇ ಕಾರಣಕ್ಕೇ ಪಾಕಿಸ್ತಾನ ಆಟಗಾರರ ಮುಂದೆಯೇ ಹೋಗಿ ಭಾರತೀಯ ಪ್ಲೇಯರ್ಸ್ ಕೂಡ ಸಿಟ್ಟಿನಿಂದಲೇ ಕಿರುಚಾಡಿ ಟಾಂಟ್ ಕೊಟ್ಟಿದ್ದು. ಅದೆಷ್ಟರ ಮಟ್ಟಿಗೆ ಅಂದ್ರೆ ಕೊನೆಗೆ ಬಿಸಿಸಿಐ ಸ್ಟಾಫ್ಗಳೇ ಬಂದು ತಮ್ಮ ಮರಿಹುಲಿಗಳನ್ನ ಕರ್ಕೊಂಡ್ ಹೋಗೋ ಮಟ್ಟಿಗೆ ತಿರುಗೇಟು ಕೊಟ್ಟಿದ್ರು. ಅಂದ್ರೆ ಅವ್ರ ಌಕ್ಷನ್ಗೆ ನಮ್ಮ ರಿಯಾಕ್ಷನ್ ಅನ್ನೋ ಥರದಲ್ಲೇ ಕೌಂಟರ್ ಕೊಟ್ಟಿದ್ದು.
ಹಾಗಂತ ಪ್ಲೇಯರ್ಸ್ ಅಷ್ಟೇ ಅಲ್ಲ ಭಾರತದ ಅಭಿಮಾನಿಗಳು ಭಾರತದ ಗೆಲುವನ್ನ ಅದೆಷ್ಟರ ಮಟ್ಟಿಗೆ ಸಂಭ್ರಮಿಸಿದ್ರು ಅನ್ನೋದಕ್ಕೆ ಈ ವಿಡಿಯೋ ನೋಡಿ. ಲಾಸ್ಟ್ ಬಾಲ್ವರೆಗೂ ಮ್ಯಾಚ್ ಆ ಕಡೆನಾ ಈ ಕಡೆನಾ ಅಂತಾ ಕಾಯ್ತಾ ಇದ್ದಾಗ ಮೋಹಿಲ್ ಉಲ್ವಾ ಕೇವಲ 26 ಬಾಲಲ್ಲೇ ಅಜೇಯ 49 ರನ್ಸ್ ಗಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವನ್ನ ತಂದುಕೊಟ್ಟಿದ್ರು. ಲಾಸ್ಟ್ ಬಾಲ್ನಲ್ಲಿ ಬೌಂಡರಿ ಸಿಡೀತಿದ್ದಂತೆ ಇಡೀ ಸ್ಡೇಡಿಯಂನಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. ಌಂಡ್ ಟಿವಿ ಮುಂದೆ ಕೂತಿದ್ದ ಫ್ಯಾನ್ಸ್ ಕೂಡ ಕುಣಿದು ಕುಪ್ಪಳಿಸಿದ್ರು.
ಇನ್ನು ಫೈನಲ್ ಗೆದ್ದ ಬಳಿಕ ಭಾರತೀಯ ಅಂಡರ್-19 ಕ್ರಿಕೆಟ್ ತಂಡದ ಆಟಗಾರರು ಮೈದಾನದಲ್ಲಿ ಕುಳಿತು ಶಿವನ ಧ್ಯಾನದ ಭಂಗಿಯಲ್ಲಿ ಸಂಭ್ರಮಾಚರಣೆ ಮಾಡಿದ್ದ ವಿಡಿಯೋಸ್ ಕೂಡ ವೈರಲ್ ಆಗಿದೆ. ಭಾರತದ ಟಿ20ಐ ತಂಡದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಶತಕ ಸಿಡಿಸಿದಾಗ ಮೈದಾನದಲ್ಲಿ ಕುಳಿತು ಮಾಡುವ ಶಿವನ ಧ್ಯಾನದ ಶೈಲಿಯನ್ನು ಯುವ ಆಟಗಾರರು ಕೂಡ ಅನುಕರಿಸಿದ್ರು. ಮೋಹಿತ್ ಉಲ್ವಾ ಕೂಡ ಪಂದ್ಯದ ನಂತರ “ಹರ ಹರ ಮಹಾದೇವ” ಎಂದು ಘೋಷಣೆ ಕೂಗುವ ಮೂಲಕ ತಮ್ಮ ಗೆಲುವನ್ನು ಶಿವನಿಗೆ ಅರ್ಪಿಸಿದರು.
ಮ್ಯಾಚ್ ಗೆಲ್ಲಿಸಿದ ಮೋಹಿತ್ ಗೆ ಬಂಪರ್ ಲಾಟರಿ!
ಅಷ್ಟಕ್ಕೂ ಪಾಕ್ ವಿರುದ್ಧದ ಭಾರತದ ಗೆಲುವಿಗೆ ಮುಖ್ಯ ಕಾರಣವೇ ಮೋಹಿತ್ ಉಲ್ವಾ. 18 ವರ್ಷದ ಮೋಹಿತ್ ಉಲ್ವಾ ಗುಜರಾತ್ನ ಸುಂದರನಗರದ ರೈಲ್ವೆ ರಕ್ಷಣಾ ಪಡೆದ ಸಿಬ್ಬಂದಿಯ ಪುತ್ರ. ತಂದೆಗೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇದ್ರೂ ತಮಗೆ ಕ್ರಿಕೆಟರ್ ಆಗಲು ಆಗದಿದ್ದಕ್ಕೆ ಮಗನನ್ನ ಕ್ರಿಕೆಟರ್ ಆಗಿ ಮಾಡಿದ್ರು. ಈಗ ಪಾಕ್ ವಿರುದ್ಧವೇ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಮೋಹಿತ್ ಉಲ್ವಾ ಅವರಿಗೆ ಸೌರಾಷ್ಟ್ರ ಹಿರಿಯರ ತಂಡದಿಂದಲೂ ಚೊಚ್ಚಲ ಬುಲಾವ್ ಬಂದಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಅವರು ನೇರವಾಗಿ ಆಯ್ಕೆಯಾಗಿದ್ದಾರೆ. ಒಟ್ನಲ್ಲಿ ಭಾರತ-ಪಾಕ್ ಪಂದ್ಯಗಳು ಅಂದ್ರೆ ಅಲ್ಲಿ ಜಸ್ಟ್ ಸೋಲು ಗೆಲುವು ಮ್ಯಾಟ್ರ್ ಆಗಲ್ಲ. ಎಮೊಷನ್ಸ್ ಕೂಡ ಮಿಕ್ಸ್ ಆಗಿರುತ್ತೆ. ಹೀಗಾಗೇ ಕ್ರಿಕೆಟ್ ಜಗತ್ತಿನ ಗ್ರೇಟೆಸ್ಟ್ ರೈವಲ್ರಿ ಅನ್ನೋದು.

ನೋಡಿರಿ

