ಯುಗಾದಿ ಹಬ್ಬಕ್ಕೆ ಶಿವಣ್ಣ, ಉಪೇಂದ್ರ, ರಾಜ್ ಶೆಟ್ಟಿ ಗುಡ್‌ನ್ಯೂಸ್ – ‘45’ ಚಿತ್ರದ ಟೀಸರ್ ಹಬ್ಬದ ದಿನ ರಿಲೀಸ್

ಸ್ಯಾಂಡಲ್‌ವುಡ್ ನಲ್ಲಿ ಒಂದೊಳ್ಳೇ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯ್ತಿದ್ದಾರೆ. ಇದೀಗ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸ್ಯಾಂಡಲ್‌ವುಡ್ ನ ಖ್ಯಾತ ನಟರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರದ ಟೀಸರ್ ಶೀಘ್ರದಲ್ಲೇ ರಿಲೀಸ್ ಆಗಲಿದೆ.
ಇದನ್ನೂ ಓದಿ:20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ – ನಾಲ್ವರು ಅರೆಸ್ಟ್
45 ಚಿತ್ರವನ್ನ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಇದೀಗ ಈ ಚಿತ್ರದ ಟೀಸರ್ ಮಾರ್ಚ್ 30 ರಂದು ರಿಲೀಸ್ ಆಗಲಿದೆ. ಯುಗಾದಿ ಹಬ್ಬದ ದಿನ ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ನಡೆಸಿಕೊಂಡಿದೆ. ಹಾಲಿವುಡ್ ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ‘45’ ಚಿತ್ರದ ವಿವಿಧ ಪೋಸ್ಟರ್ಗಳು ರಿಲೀಸ್ ಆಗಿವೆ. ಎಲ್ಲರ ಅವತಾರವೂ ಭಿನ್ನವಾಗಿದೆ. ಇದರಲ್ಲಿ ವಿಲನ್ ಯಾರು, ಹೀರೋ ಯಾರು ಎಂಬಿತ್ಯಾದಿ ಕುತೂಹಲಕ್ಕೆ ಟೀಸರ್ ನಲ್ಲಿ ಉತ್ತರ ಸಿಗಬಹುದು. ಅರ್ಜುನ್ ಜನ್ಯ ಅವರಿಗೆ ಇದು ನಿರ್ದೇಶನದಲ್ಲಿ ಮೊದಲ ಅನುಭವ. ಸಂಗೀತದ ಮೂಲಕ ಮೋಡಿ ಮಾಡಿದ ಅವರು, ಈಗ ಸಿನಿಮಾ ನಿರ್ದೇಶನದಲ್ಲಿ ಯಾವ ರೀತಿಯಲ್ಲಿ ಕೈ ಚಳಕ ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್ ’ ಬ್ಯಾನರ್ ಅಡಿಯಲ್ಲಿ ‘45’ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ವರ್ಷ ಆಗಸ್ಟ್ 15ರಂದು ‘45’ ಚಿತ್ರ ತೆರೆಗೆ ಬರಲಿದೆ.