ದೊಡ್ಮನೆ ಮಗನಿಗೆ ನೆರವೇರಿದ ಸರ್ಜರಿ – 1 ತಿಂಗಳು ರೆಸ್ಟ್.. ಯಾವಾಗ ವಾಪಸ್?
ಕೋಟಿ ಕೋಟಿ ಅಭಿಮಾನಿಗಳ ಹಾರೈಕೆ.. ದೇಗುಲಗಳಲ್ಲೂ ವಿಶೇಷ ಪೂಜೆ.. ದೊಡ್ಮನೆಯ ದೊಡ್ಡ ಮಗ ಶಿವರಾಜ್ಕುಮಾರ್ ಗುಣಮುಖರಾಗಿ ಬರ್ಲಿ ಅಂತಾ ಇಡೀ ಕರುನಾಡೇ ಪ್ರಾರ್ಥಿಸುತ್ತಿದೆ. ಮಂಗಳವಾರ ಅಮೆರಿಕದಲ್ಲಿ ಶಿವಣ್ಣಗೆ ಸರ್ಜರಿ ನಡೆಯುತ್ತಿದ್ದು, ರಿಕವರ್ ಆಗ್ಲಿ ಅಂತಾ ಅಭಿಮಾನಿಗಳೆಲ್ಲಾ ದೇವರ ಮೊರೆ ಹೋಗಿದ್ರು. ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವಣ್ಣಗೆ ಮಂಗಳವಾರ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಅಮೆರಿಕಗೆ ತೆರಳೋ ಮುನ್ನ ಶಿವಣ್ಣ ಫ್ಯಾಮಿಲಿ ಸಮೇತ ತಿರುಪತಿಗೆ ತೆರಳಿ ಮುಡಿ ಕೊಟ್ಟಿದ್ದರು. ಇದೀಗ ಅವ್ರ ಸರ್ಜರಿ ಸಕ್ಸಸ್ ಆಗ್ಲಿ ಅಂತಾ ಅವರ ಅಭಿಮಾನಿಗಳು ರಾಜ್ಯದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೈಸೂರು, ಚಾಮರಾಜಪೇಟೆ, ಬೆಂಗಳೂರು ಇನ್ನೂ ಹಲವು ನಗರಗಳ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಮತ್ತು ಹೋಮಗಳನ್ನು ಮಾಡಿಸಿದ್ದಾರೆ. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಿವಣ್ಣ ಚಿಕಿತ್ಸೆ ಪಡೆಯುತ್ತಿದ್ದು, ಜನವರಿ 25 ರವರೆಗೆ ಶಿವಣ್ಣ ಅಮೆರಿಕದಲ್ಲಿಯೇ ಇರಲಿದ್ದಾರೆ.
ಇದನ್ನೂ ಓದಿ : D ಬಾಸ್ ಬಾಳಲ್ಲಿ ಮತ್ತೆ ಸುಂಟರಗಾಳಿ – ಪವಿತ್ರಾ, ದಾಸ ಭೇಟಿಗೆ ಮುಹೂರ್ತ ಫಿಕ್ಸ್!
ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ನಡೆದಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಶಿವಣ್ಣನ ಹಾರೈಕೆಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ ನಡೆದಿದೆ. ಮುಡಿಕೊಟ್ಟು, ಉರುಳು ಸೇವೆ ಮಾಡಿದ ಶಿವಣ್ಣ ಫ್ಯಾನ್ಸ್ ಶಿವಣ್ಣ ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ. ಶಿವಣ್ಣರ ಅಭಿಮಾನಿ ಎನ್ ಆರ್ ನಾಗೇಶ್ ನೇತೃತ್ವದಲ್ಲಿ ಪೂಜೆ ನಡೆದಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಲಾಗಿದ್ದು, ಹನುಮಂತನಲ್ಲಿ ಶಿವಣ್ಣ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಲಾಗಿದೆ. ಈಡುಗಾಯಿ ಸೇವೆ ಸಲ್ಲಿಸಿ ಶಿವರಾಜ್ ಕುಮಾರ್ ಗುಣಮುಖರಾಗುವಂತೆ ಪೂಜೆ ಮಾಡಲಾಗಿದೆ.
ಚಾಮರಾಜನಗರದಲ್ಲಿ ನಟನ ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದಾರೆ. ಮಲೆ ಮಹದೇಶ್ವರ ಸ್ವಾಮಿ ಮೊರೆಹೋದ ಅಭಿಮಾನಿಗಳು ಕೇಶ ಮುಂಡನ ಅಂದ್ರೆ ಮುಡಿಸೇವೆ ಕೊಟ್ಟ ವಿಶೇಷ ಹರಕೆ ತೀರಿಸಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ಶಿವಣ್ಣ ಅಭಿಮಾನಿಗಳು ಉರುಳು ಸೇವೆ ಮಾಡಿದ್ದಾರೆ. ಮೈಸೂರಿನ ಕೆಜಿ ಕೊಪ್ಪಲು ಅಭಿಮಾನಿಗಳಿಂದ ವಿಶೇಷ ಪೂಜೆ ನಡೆದಿದೆ. ಹಾಗೇ ಶಿವಣ್ಣನಿಗೆ ಸರ್ಜರಿ ಹಿನ್ನೆಲೆಯಲ್ಲಿ ಚಿಕಿತ್ಸೆ ಯಶಸ್ವಿಯಾಗಲೆಂದು ಶಿವಣ್ಣರ ಕಾರ್ ಡ್ರೈವರ್ ಆಗಿರೋ ಗೋವಿಂದಣ್ಣ ವಿಶೇಷ ಪೂಜೆ, ಹೋಮಗಳು ಮಾಡಿದ್ದಾರೆ. 32 ವರ್ಷಗಳಿಂದ ಶಿವಣ್ಣ ಕಾರ್ ಡ್ರೈವರ್ ಆಗಿದ್ದಾರೆ ಗೋವಿಂದಣ್ಣ ಮಲ್ಲೇಶ್ವರಂನಲ್ಲಿರೋ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಶಿವಣ್ಣ ಅಭಿಮಾನಿಗಳಿಂದ ಪೂಜೆ ಮಾಡಲಾಗಿದೆ. ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಕೆ ಮಾಡಲಾಗಿದೆ. ಅಭಯ ಪೂಜೆ ನೆರವೇರಿಸಿದ ಅಭಿಮಾನಿಗಳು ನಾಗೇಶ್ – ಚನ್ನೇಗೌಡರಿಂದ ಪೂಜೆ ಸಲ್ಲಿಕೆಯಾಗಿದೆ. ಶಿವಣ್ಣನ ಹೆಸರಿನಲ್ಲಿ ಪೂಜೆ, ಈಡುಗಾಯಿ ಹೊಡೆದು, ಪ್ರಸಾದ ಹಂಚಿಕೆ ಮಾಡಿದ್ರು.
ಇನ್ನು ಅಮೇರಿಕಾದ ಕಾಲಮಾನ ಪ್ರಕಾರ ಬೆಳಗ್ಗೆ 9ರಿಂದ10 ಗಂಟೆ ವೇಳೆಗೆ ಮಂಗಳವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ಅಂದ್ರೆ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆ ವೇಳೆಗೆ ಶಿವಣ್ಣನಿಗೆ ಸರ್ಜರಿ ನಡೆಯಲಿದೆ. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರು ಶಸ್ತ್ರಚಿಕಿತ್ಸೆಗಾಗಿ ಡಿಸೆಂಬರ್ 18 ರಂದು ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣ ಮಾಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಶಿವರಾಜ್ಕುಮಾರ್ ಅವರು ಒಂದು ತಿಂಗಳ ಕಾಲ ಅಮೇರಿಕಾದಲ್ಲೇ ರೆಸ್ಟ್ ಮಾಡಲಿದ್ದಾರೆ. 2025 ಜನವರಿ 25 ತಾರೀಕು ಅಮೇರಿಕಾದಿಂದ ಹೊರಡಲಿದ್ದು ಜನವರಿ 26 ಕ್ಕೆ ಅವರು ಬೆಂಗಳೂರು ತಲುಪಲಿದ್ದಾರೆ.
ಸದ್ಯ ಸೆಂಚುರಿ ಸ್ಟಾರ್ ಶಿವಣ್ಣ ಬೇಗ ಗುಣಮುಖರಾಗಿ ಬರ್ಲಿ ಅಂತಾ ಇಡೀ ಸ್ಯಾಂಡಲ್ವುಡ್ ಪ್ರಾರ್ಥನೆ ಮಾಡ್ತಿದೆ. ಸರ್ಜರಿಗೆ ಹೋಗೋ ಮುನ್ನ ಭೇಟಿಯಾಗಿ ಧೈರ್ಯವನ್ನೂ ತುಂಬಿದ್ದಾರೆ. ಹಾಗೇ ಅಭಿಮಾನಿಗಳೂ ಕೂಡ ದೇವರ ಮೊರೆ ಹೋಗಿದ್ದಾರೆ. ಶಿವಣ್ಣನ ಪ್ರತೀ ಹೆಜ್ಜೆಯಲ್ಲೂ ಜೊತೆಯಾಗಿರುವ ಪತ್ನಿ ಗೀತಕ್ಕ ಕೂಡ ಜೊತೆಯಲ್ಲೇ ಇದ್ದು ಪುಟ್ಟ ಮಗುವಿನಂತೆ ಜೋಪಾನ ಮಾಡ್ತಿದ್ದಾರೆ.