ಸಿನಿಮಾ ಮಾಡ್ತಾರಾ ಶಿವಣ್ಣ?  – ಸರ್ಜರಿ ಬಳಿಕ ಲೈಫ್ ಸ್ಟೈಲ್ ಹೇಗೆ?

ಸಿನಿಮಾ ಮಾಡ್ತಾರಾ ಶಿವಣ್ಣ?  – ಸರ್ಜರಿ ಬಳಿಕ ಲೈಫ್ ಸ್ಟೈಲ್ ಹೇಗೆ?

ಕೋಟಿ ಕೋಟಿ ಅಭಿಮಾನಿಗಳ ಪೂಜೆ, ಕನ್ನಡ ಚಿತ್ರರಂಗದ ಹಾರೈಕೆಯಂತೆಯೇ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್ ಅವ್ರ ಶಸ್ತ್ರ ಚಿಕಿತ್ಸೆ ಸಕ್ಸಸ್ ಆಗಿದೆ. ಅಮೆರಿಕದಲ್ಲೇ ಇರುವ ಶಿವಣ್ಣ ಚೇತರಿಸಿಕೊಳ್ತಿದ್ದಾರೆ. ದೊಡ್ಮನೆ ಫ್ಯಾನ್ಸ್ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ಬಟ್ ಎಷ್ಟೋ ಜನ್ರಿಗೆ ಸರ್ಜರಿ ಬಳಿಕ ಶಿವಣ್ಣ ಸಿನಿಮಾ ಮಾಡ್ತಾರೋ ಇಲ್ವೋ ಅನ್ನೋ ಅನುಮಾನ ಕಾಡ್ತಿದೆ. ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದ್ದ ಶಿವಣ್ಣಗೆ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಡಿಸೆಂಬರ್ 24ರಂದು ಆಪರೇಷನ್ ನಡೆದಿದೆ. ಕ್ಯಾನ್ಸರ್ ತಗುಲಿದ್ದ ಮೂತ್ರಕೋಶವನ್ನ ಕಟ್ ಮಾಡಿ ಅವ್ರದ್ದೇ ಕರುಳಿನ ಮೂಲಕ ಕೃತಕ ಮೂತ್ರಕೋಶವನ್ನ ಅಳವಡಿಸಲಾಗಿದೆ. ಹತ್ತು ದಿನಗಳ ಕಾಲ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

ತುಂಬಾ ಜನ್ರಿಗೆ ಕ್ಯಾನ್ಸರ್ ಅನ್ನೋ ಪದ ಕೇಳುತ್ತಲೇ ಆತಂಕ ಶುರುವಾಗುತ್ತೆ. ಯಾಕಂದ್ರೆ ಈ ಕ್ಯಾನ್ಸರ್​ನ ಸ್ವಲ್ಪ ಕೇರ್​ಲೆಸ್ ಮಾಡುದ್ರೂ ಕೂಡ ಜೀವಕ್ಕೇ ಕುತ್ತು ತಂದು ಬಿಡುತ್ತೆ. ಹಾಗಂತ ವಾಸಿ ಮಾಡೋಕೆ ಆಗೋದೇ ಇಲ್ಲ ಎನ್ನುವಂಥ ರೋಗನೂ ಅಲ್ಲ. ಬಟ್ ಸ್ಟಾರ್ಟಿಂಗ್ ಸ್ಟೇಜ್​ನಲ್ಲಿ ಕ್ಯಾನ್ಸರ್​ನ ಪತ್ತೆ ಹಚ್ಚಬೇಕು ಅಷ್ಟೇ. ಇದೇ ಕಾರಣಕ್ಕೆ ಶಿವಣ್ಣಗೆ ಮೂತ್ರಕೋಶ ಕ್ಯಾನ್ಸರ್ ಇದೆ ಅಂತಾ ಗೊತ್ತಾದಾದ ಫ್ಯಾನ್ಸ್ ಸಿಕ್ಕಾಪಟ್ಟೆ ಟೆನ್ಷನ್ ಆಗಿದ್ರು. ಸದ್ಯ ಆಪರೇಷನ್ ಎಲ್ಲಾ ಮುಗಿದಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಮಾಡ್ತಾರೋ ಇಲ್ವೋ ಅಂತಾ ಒಂದಷ್ಟು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ಫೈಟ್‌ – ಉಗ್ರಂ ಮಂಜು ತೆಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ!

ಮೂತ್ರಕೋಶದ ಕ್ಯಾನ್ಸರ್ ಆಪರೇಷನ್ ಬಳಿಕ ರೆಸ್ಟ್ ಮೂಡ್​ನಲ್ಲಿರೋ ಶಿವಣ್ಣ ಇನ್ನು ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದಲೇ ವೀಡಿಯೋ ಮೂಲಕ ಮಾತನಾಡಲಿದ್ದಾರೆ ಎಂದು ಪತ್ನಿ ಗೀತಾ ಹೇಳಿದ್ದರು. ನಾಲ್ಕು ವಾರಗಳ ಕಾಲ ಅಮೆರಿಕದಲ್ಲಿ ವಿಶ್ರಾಂತಿ ಪಡೆದು ಜನವರಿ 25ರಂದು ಹೊರಟು 26ರಂದು ಭಾರತಕ್ಕೆ ಬರಲಿದ್ದಾರೆ. ಆ ಬಳಿಕ ಎಂದಿನಂತೆ ತಮ್ಮ ನಟನೆ, ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಲ್ಲಿ ಶಿವಣ್ಣಗೆ ಸರ್ಜರಿ ಆಗಿದ್ರೂ ಕೂಡ ಸಿನಿಮಾಗಳನ್ನ ಮಾಡಬಹುದು. ಆದರೆ ಮೊದಲಿನಿಂತೆ ಅಷ್ಟೊಂದು ಌಕ್ಟಿವ್ ಆಗಿ ಇರೋದು ಕಷ್ಟವಾಗಬಹುದು. ಯಾಕಂದ್ರೆ ಮೂತ್ರಕೋಶ ತೆಗೆದಿರೋದ್ರಿಂದ ಒಂದಷ್ಟು ಎಫೆಕ್ಟ್ ಗಳೂ ಆಗಲಿವೆ.

ಮೂತ್ರಕೋಶ ಸರ್ಜರಿ ವೇಳೆ ಸೋಂಕು ಕಾಣಿಸಿಕೊಳ್ಳೋ ಆತಂಕ ಇರುತ್ತೆ. ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ, ಹತ್ತಿರದ ಅಂಗಗಳು ಅಥವಾ ಅಂಗಾಂಶಗಳಿಗೆ ಹಾನಿಯಾಗೋ ಸಾಧ್ಯತೆಯೂ ಇರುತ್ತೆ. ಅಲ್ದೇ ಮೂತ್ರಕೋಶವನ್ನೇ ತೆಗೆದು ಹಾಕೋದ್ರಿಂದ ಮೂತ್ರದ ಶೇಖರಣೆ ಮತ್ತು ಹೊರಹಾಕುವಿಕೆಗೆ ಹೊಸ ಮಾರ್ಗವನ್ನು ರಚಿಸುವುದು ಅವಶ್ಯಕ. ಯುರೊಸ್ಟೊಮಿ ನಿಯೋಬ್ಲಾಡರ್ ನಂತಹ ವಿಭಿನ್ನ ಆಯ್ಕೆಗಳಿವೆ. ಸದ್ಯ ವೈದ್ಯರು ಶಿವಣ್ಣಗೆ ಅವ್ರದ್ದೇ ಕರುಳಿನ ಮೂಲಕ ಕೃತಕ ಮೂತ್ರಕೋಶ ಮತ್ತೆ ಅಳವಡಿಸಿದ್ದಾರೆ. ಆದ್ರೆ ಕೃತಕ ಮೂತ್ರಕೋಶ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದನ್ನೂ ಕೂಡ ವೈದ್ಯರು ಮಾನಿಟರ್ ಮಾಡಬೇಕಾಗುತ್ತೆ.

ಇತ್ತೀಚೆಗಷ್ಟೇ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗಿತ್ತು. ಹಾಗೇ ಡಾಲಿ ಧನಂಜಯ ಮತ್ತು ಶಿವಣ್ಣ ಅಭಿನಯದ ಉತ್ತರಕಾಂಡ ಕೂಡ ತೆರೆಗೆ ಬರಬೇಕಿತ್ತು. ಬಟ್ ಕಾರಣಾಂತರಗಳಿಂದ ಶೂಟಿಂಗ್ ನಿಂತಿದೆ. ಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿವರಾಜ್ ಕುಮಾರ್ ಜತೆಯಾಗಿ ಶಿವಗಣ ಸಿನಿಮಾ ಮಾಡುವ ನಿರೀಕ್ಷೆ ಇದೆ. ಇನ್ನು ನೀ ಸಿಗೊವರೆಗೂ ಸಿನಿಮಾದಲ್ಲಿ ಶಿವಣ್ಣ ನಾಯಕನಾಗಿ ನಟಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ನಿರ್ದೇಶನದ 45 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಬೇಕಿದೆ. ಸಚಿನ್ ರವಿ ಕಥೆ ಮತ್ತು ನಿರ್ದೇಶನದ ಸಿನಿಮಾ ಅಶ್ವತ್ತಾಮ ಕೂಡ ಶಿವಣ್ಣ ಕೈಯಲ್ಲಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಪುಷ್ಕರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ರವಿ ಅರಸು ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟನೆಯೆ ಆರ್‌ಡಿಎಕ್ಸ್ ಎಂಬ ಸಿನಿಮಾವು ತೆರೆಗೆ ಬರಲು ಸರದಿಯಲ್ಲಿದೆ.

ಬಹುಶಃ ಶಿವಣ್ಣ ಇರುವ ಸ್ಥಿತಿಯಲ್ಲಿ ಬಹುಶ: ಬೇರೆ ಯಾರೇ ಇದ್ದರೂ ಅದು ಅವರನ್ನು ಕುಗ್ಗಿಸಿಬಿಡುತ್ತೇನೋ/ ಆದರೆ, ಶಿವಣ್ಣ ಧೈರ್ಯಕ್ಕೆ ಚಿತ್ರರಂಗ ಅಷ್ಟೇ ಅಲ್ಲ. ಅವರ ಅಭಿಮಾನಿಗಳೂ ಫಿದಾ ಆಗಿದ್ದಾರೆ. ತಮಗೆ ಕ್ಯಾನ್ಸರ್ ಅಂತಾ ಗೊತ್ತಾದ್ರೂ ಸುಮ್ಮನೆ ಮನೆಯಲ್ಲಿ ಕೂತಿರಲಿಲ್ಲ. ಶಿವಣ್ಣ ತಮ್ಮ ದೈನಂದಿನ ಕೆಲಸವನ್ನು ಮಾಡ್ತಿದ್ರು.  ವಾಕಿಂಗ್, ಸಿನಿಮಾ ಆಕ್ಟಿವಿಟಿ ಎಲ್ಲವೂ ಸಹಜವಾಗಿಯೇ ನಡೆಯುತ್ತಿದೆ. ಶಿವರಾಜ್‌ಕುಮಾರ್ ಪ್ರತಿ ದಿನ 8 ರಿಂದ 10 ಕಿಲೋ ಮೀಟರ್ ವಾಕಿಂಗ್ ಮಾಡ್ತಿದ್ರು. ಚಿಕಿತ್ಸೆಯ ಹಂತದಲ್ಲಿಯೂ ಶಿವಣ್ಣ ವಾಕಿಂಗ್  ಬಿಟ್ಟಿರಲಿಲ್ಲ. ಸ್ನೇಹಿತರೊಂದಿಗೆ ಏಳೆಂಟು ಕಿಲೋ ಮೀಟರ್ ವಾಕಿಂಗ್ ಮಾಡ್ತಿದ್ರು. ಹೀಗಾಗೇ ಕ್ಯಾನ್ಸರ್ ಅಂದ್ರೂ ಹೆಚ್ಚು ಆತಂಕಗೊಳ್ಳಲಿಲ್ಲ.

ಸದ್ಯ ಸರ್ಜರಿ ಬಳಿಕ ರಿಕವರ್ ಆಗ್ತಿರೋ ಶಿವಣ್ಣಗೆ ಇಡೀ ಫ್ಯಾಮಿಲಿ ಸಪೋರ್ಟಿವ್ ಆಗಿ ನಿಂತಿದೆ. ಪತ್ನಿ, ಮಗಳು ಹಾಗೇ ಡಾಕ್ಟರ್ಸ್ ಕೂಡ ಧೈರ್ಯ ತುಂಬುತ್ತಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮಂಥ ಅಭಿಮಾನಿಗಳ ಹಾರೈಕೆ ಕೂಡ ಶಿವಣ್ಣರನ್ನ ಕಾಪಾಡ್ತಿದೆ. ಆದಷ್ಟು ಬೇಗ ಚೇತರಿಸಿಕೊಂಡು ಬಂದ ಮತ್ತೆ ಸಿನಿಮಾಗಳನ್ನ ಮಾಡ್ತಾರೆ. ಬಟ್ ಮುಂದಿನ ದಿನಗಳಲ್ಲಿ ಫೈಟಿಂಗ್ ಸೀನ್ಸ್ ಮತ್ತು ಡ್ಯಾನ್ಸ್ ಹಿಂದಿನಂತೆ ಇರೋದಿಲ್ಲ. ಅವ್ರು ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ರೂ ಕೂಡ ಸರ್ಜರಿ ಅದಕ್ಕೆ ಸಪೋರ್ಟ್ ಮಾಡೋದಿಲ್ಲ.

Shantha Kumari

Leave a Reply

Your email address will not be published. Required fields are marked *