‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಶಿವಣ್ಣನ ಪಾತ್ರ ರಿವೀಲ್ – ಧನುಷ್ ಜೊತೆ ವಿಭಿನ್ನ ಗೆಟಪ್‌ನಲ್ಲಿ ಬರಲಿದ್ದಾರೆ ಶಿವರಾಜ್‌ ಕುಮಾರ್

‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಶಿವಣ್ಣನ ಪಾತ್ರ ರಿವೀಲ್ – ಧನುಷ್ ಜೊತೆ ವಿಭಿನ್ನ ಗೆಟಪ್‌ನಲ್ಲಿ ಬರಲಿದ್ದಾರೆ ಶಿವರಾಜ್‌ ಕುಮಾರ್

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮಿಳು ಚಿತ್ರರಂಗದ ಸ್ಟಾರ್ ಧನುಷ್ ಜೊತೆ ನಟಿಸುತ್ತಿದ್ದಾರೆ. ತಮಿಳಿನ ಎರಡು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದು, ಅದರಲ್ಲಿ ನಟ ಧನುಷ್ ಜೊತೆ ನಟಿಸುವ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟ ಧನುಷ್ ಜೊತೆ ಶಿವಣ್ಣ ನಟಿಸುತ್ತಿದ್ದು, ಕೆಲ ಅಪ್‌ಡೇಟ್ಸ್ ಲಭ್ಯವಾಗಿದೆ. ಇಷ್ಟು ದಿನ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವಣ್ಣನ ರೋಲ್ ಏನು?, ಧನುಷ್ ಜೊತೆ ಯಾವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು.

ಇದನ್ನೂ ಓದಿ:  ‘ಸಿಕ್ಸರ್ ರಿಂಕು ಸಿಂಗ್ ಸೂಪರ್ ಮ್ಯಾನ್’ -ಬಾಲಿವುಡ್ ಸೆಲೆಬ್ರಿಟಿಗಳ ಕಣ್ಣಲ್ಲಿ ರಿಯಲ್ ಹೀರೋ ಆದ ಕ್ರಿಕೆಟಿಗ

ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಕೆಲ ರೋಚಕ ವಿಚಾರಗಳು ಈಗ ರಿವೀಲ್ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕಥೆಯೊಂದರ ಸಾರಾಂಶ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಕತೆಯಾಗಿದೆ. ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟವನ್ನು ನಿರ್ದೇಶಕರು ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಕೇಶವಿನ್ಯಾಸ ಕೂಡಾ ಡಿಫರೆಂಟ್ ಆಗಿದೆ. ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಿಶನ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಮಲಯಾಳಂ ನಟ ಸುಮೇಶ್ ಮೂರ್ ಮತ್ತು ಜಾನ್ ಕೊಕ್ಕೆನ್ ಸಹ ನಟಿಸಿದ್ದಾರೆ.

suddiyaana