ಕರುನಾಡ ಚಕ್ರವರ್ತಿ ಶಿವಣ್ಣನಿಗೆ 63ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳ ಅಭಿಮಾನಕ್ಕೆ ಬೆರಗಾದ ಶಿವರಾಜ್ ಕುಮಾರ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಜುಲೈ 12ಕ್ಕೆ ಜನ್ಮದಿನದ ಸಂಭ್ರಮ. ಶಿವಣ್ಣನಿಗೆ ಈಗ 63ನೇ ವಸಂತ. ಬೆಂಗಳೂರಿನಲ್ಲಿರುವ ಹ್ಯಾಟ್ರಿಕ್ ಹೀರೋ ಅವರ ನಿವಾಸದ ಎದುರು ರಾತ್ರಿಯೇ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ಅಭಿಮಾನದಿಂದ ತಂದ ಕೇಕ್ ನ್ನು ಶಿವಣ್ಣ ಕತ್ತರಿಸಿ, ಸಂಭ್ರಮಿಸಿದ್ದಾರೆ. ಮಕ್ಕಳಾದ ಯುವರಾಜ್ ಕುಮಾರ್, ವಿನಯ್ ರಾಜ್ಕುಮಾರ್ ಕೂಡಾ ರಾತ್ರಿಯೇ ಬಂದು ದೊಡ್ಡಪ್ಪನಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.
ಇದನ್ನೂ ಓದಿ:ನಟ ದರ್ಶನ್ಗೆ ಮಾದರಿಯಾದ ಹಾಸ್ಯನಟ – ಪತ್ನಿಗೆ ಅಶ್ಲೀಲ ಫೋಟೋ ಕಳಿಸಿದವನಿಗೆ ಬುದ್ಧಿ ಹೇಳಿದ ಸಂಜು ಬಸಯ್ಯ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನದ ಸಂಭ್ರಮ ರಾತ್ರಿಯಿಂದಲೇ ಶುರು ಆಗಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿರೋ ಶಿವಣ್ಣನ “ಶ್ರೀಮುತ್ತು” ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಎರಡು ವರ್ಷದಿಂದಲೂ ಶಿವಣ್ಣ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡೇ ಇಲ್ಲ. ಈ ಬಾರಿ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡರು.
ಶಿವಣ್ಣ ಹುಟ್ಟುಹಬ್ಬಕ್ಕೆ ಸ್ಯಾಂಡಲ್ವುಡ್ ಕೂಡಾ ಸರ್ಪ್ರೈಸ್ ಗಿಫ್ಟ್ ನೀಡಿದೆ. ಶಿವರಾಜ್ ಕುಮಾರ್ ಅಭಿನಯದ 131 ಚಿತ್ರದ ವಿಶೇಷ ಪೋಸ್ಟರ್ ರಿಲೀಸ್ ಆಗಿದೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಉತ್ತರಕಾಂಡ ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಕೆ.ಪಿ.ಶ್ರೀಕಾಂತ್ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. 45 ಚಿತ್ರದ ಹೊಸ ಪೋಸ್ಟರ್ ಕೂಡ ರಿಲೀಸ್ ಆಗುತ್ತಿದೆ.
ಶಿವರಾಜ್ ಕುಮಾರ್ ಅವರು ತಮ್ಮ 63ನೇ ವಯಸ್ಸಿನಲ್ಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ಹಲವು ಹೊಸ ಚಿತ್ರಗಳು ಘೋಷಣೆಯಾಗಿವೆ. ‘ಟಗರು 2’, ‘ಜೈಲರ್ 2’ ಮುಂತಾದ ಸೀಕ್ವೆಲ್ಗಳ ಜೊತೆಗೆ ಹೊಸ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ಅವರು ಬ್ಯುಸಿ ಇದ್ದಾರೆ. ಶಿವರಾಜ್ಕುಮಾರ್ ಮೊದಲ ಸಿನಿಮಾ ಆರಂಭಿಸಿದ್ದು 23ನೇ ವಯಸ್ಸಿಗೆ. ಈಗ ಅವರಿಗೆ 63 ವರ್ಷ. ಕಳೆದ, 40 ವರ್ಷಗಳಿಂದ ಅವರು ನಿರಂತರವಾಗಿ ಸಿನಿಮಾಗಳು ಮಾಡುತ್ತಾ ಬರುತ್ತಿದ್ದಾರೆ. ನೂರಾರು ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಪೈಕಿ ಅನೇಕ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡಿವೆ.

ನೋಡಿರಿ

