ತಮಿಳು ನಟ ಧನುಷ್ ಅಣ್ಣನಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ
ಕ್ಯಾಪ್ಟನ್ ಮಿಲ್ಲರ್’ ತಮಿಳು ಸಿನಿಮಾದಲ್ಲಿ ವಿಶೇಷ ಪಾತ್ರ

ತಮಿಳು ನಟ ಧನುಷ್ ಅಣ್ಣನಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣಕ್ಯಾಪ್ಟನ್ ಮಿಲ್ಲರ್’  ತಮಿಳು ಸಿನಿಮಾದಲ್ಲಿ ವಿಶೇಷ ಪಾತ್ರ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಶೂಟಿಂಗ್‌ನಲ್ಲೂ ಭಾಗಿಯಾಗಿದ್ದರು. ಇದರ ಮಧ್ಯೆಯೇ ಈಗ ನಟ ಧನುಷ್ ಅವರ ಸಿನಿಮಾದಲ್ಲೂ ಶಿವಣ್ಣ ನಟಿಸಲಿದ್ದಾರೆ. ತಮಿಳು ಚಿತ್ರ ಕ್ಯಾಪ್ಟನ್ ಮಿಲ್ಲರ್ ನಲ್ಲಿ ಶಿವಣ್ಣನ ಪಾತ್ರ ಫೈನಲ್ ಆಗಿದ್ದು, ಧನುಷ್ ಅಣ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲಿ ಚಿತ್ರದ ಚಿತ್ರೀಕರಣದಲ್ಲೂ ಶಿವಣ್ಣ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ :  ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿಅಕ್ಷಯ್ ಕುಮಾರ್ – ಮರಾಠಿ ಸಿನಿಮಾದ ಫಸ್ಟ್ ಲುಕ್ ರಿಲೀಸ್

ತಮಿಳು ನಟ ಧನುಷ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕಥೆಯನ್ನು ಸ್ವಾತಂತ್ರ್ಯಪೂರ್ವದ ಎಳೆಯೊಂದನ್ನ ಇಟ್ಟುಕೊಂಡು ಹೆಣೆಯಲಾಗಿದೆ. ಈ ಚಿತ್ರವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಇನ್ನು ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದನ್ನ ಸ್ವತಃ ಶಿವಣ್ಣನೇ ಹೇಳಿಕೊಂಡಿದ್ದಾರೆ.  ನಿರ್ದೇಶಕ ಅರುಣ್ ಮಾದೇಶ್ವರನ್ ಬೆಂಗಳೂರಿಗೆ ಬಂದು ನನ್ನ ಭೇಟಿ ಮಾಡಿದ್ದಾರೆ. ಕಥೆ ಹೇಳಿದಾಗ ನಟಿಸಲು ಒಪ್ಪಿಕೊಂಡಿದ್ದೇನೆ. ಚಿತ್ರದಲ್ಲಿ ಅವರು ಹೇಳಿದಂತೆ ನನ್ನ ಪಾತ್ರವೂ ವಿಭಿನ್ನವಾಗಿದೆ. ಡೇಟ್ಸ್ ಹೊಂದಿಕೆಯಾದಾಗ ಶೂಟಿಂಗ್‌ನಲ್ಲಿ ಭಾಗವಹಿಸುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ. ಈಗಾಗಲೇ ಶಿವಣ್ಣನ ಕೈಯಲ್ಲಿ ಕನ್ನಡದ ನಾಲ್ಕೈದು ಸಿನಿಮಾಗಳಿವೆ. ಆದರೆ, ಧನುಷ್ ಜೊತೆ ನಟಿಸಲು ಆಫರ್ ಬಂದಿದ್ದು ಕೂಡಾ ಖುಷಿಯಾಗಿದೆ ಅಂತಾ ಶಿವಣ್ಣ ಹೇಳಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಜಿತ್ರದಲ್ಲಿ ನಟ ಧನುಷ್ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿದ್ದು, ಶಿವಣ್ಣನ ಪಾತ್ರವೂ ಬಹಳ ವಿಶೇಷವಾಗಿದೆ ಎನ್ನಲಾಗ್ತಿದೆ.

suddiyaana