IND ಅಲ್ಲ ENGಗೆ ದ್ರಾವಿಡ್ COACH? – TOSS ಗೆದ್ರೂ ಮ್ಯಾಚ್ ಗೆಲ್ಲದ ಶ್ರೇಯಸ್

IND ಅಲ್ಲ ENGಗೆ ದ್ರಾವಿಡ್ COACH? – TOSS ಗೆದ್ರೂ ಮ್ಯಾಚ್ ಗೆಲ್ಲದ ಶ್ರೇಯಸ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2012 ರಲ್ಲಿ ಇಂಗ್ಲೆಂಡ್‌ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಮೆಕಲಮ್ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್​ಗೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದ ಮೆಕಲಮ್  ತಮ್ಮ ಹದಿನಾಲ್ಕು ವರ್ಷದ ಪಯಣಕ್ಕೆ ಮೆಕಲಮ್ ಅಂತ್ಯ ಹಾಡಿದ್ದಾರೆ.

ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚಿಂಗ್ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಆ ಸ್ಥಾನಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಮೆಕಲಮ್ ನಿರ್ಗಮನದಿಂದ ತೆರವಾಗಿರುವ ಈ ಪ್ರತಿಷ್ಠಿತ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಗೆ ಬಂದಿದೆ. ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಶೀಘ್ರದಲ್ಲೇ ಹೊಸ ಕೋಚ್ ಹೆಸರನ್ನು ಅಂತಿಮಗೊಳಿಸಲಿದೆ.

ಇದನ್ನೂ ಓದಿ: ರೋಹಿತ್ ಓಪನರ್.. KL ಕೀಪರ್ – ಬೌಲಿಂಗ್ ಯುನಿಟ್ ಗೆ ಬುಮ್ರಾ ಬ್ರಹ್ಮಾಸ್ತ್ರ

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಟೆಸ್ಟ್ ಪಂದ್ಯದ 3ನೇ ದಿನದಾಟವು ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ರಿಚಾ ಘೋಷ್ ಹಿಡಿದ  ಕ್ಯಾಚ್  ಸಖತ್ ವೈರಲ್ ಆಗ್ತಿದೆ. ಸ್ನೇಹ್ ರಾಣಾ ಎಸೆದ ಚೆಂಡನ್ನು ಇಂಗ್ಲೆಂಡ್‌ನ ಮ್ಯಾಡಿ ವಿಲಿಯರ್ಸ್ ಅತ್ಯಂತ ಬಲವಾಗಿ ಹೊಡೆದ್ರು. ಈ ವೇಳೆ ತನ್ನ ಕಡೆ ಬಂದ ರಾಕೆಟ್ ವೇಗದ ಚೆಂಡನ್ನ ರಿಚಾ ಹಿಡಿದು ಎಲ್ಲರು ಶಾಕ್ ಆಗುವಂತೆ ಮಾಡಿದ್ರು.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಯಾಸ್ತಿಕಾ ಭಾಟಿಯಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ, ಕ್ರಿಕೆಟ್‌ನ ಕಾಶಿ ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಬಾರಿಸಿ ಅಲ್ಲಿನ ಪ್ರತಿಷ್ಠಿತ ‘ಆನರ್ಸ್ ಬೋರ್ಡ್’  ಸೇರಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್ ಹೆಗ್ಗಳಿಕೆಗೆ ಎಡಗೈ ಭಾಟಿಯಾ ಪಾತ್ರರಾಗಿದ್ದಾರೆ.  ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 12 ರನ್ ಗಳಿಸಿ ಔಟಾಗಿದ್ದ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಅಮೋಘ 113 ರನ್ ಗಳಿಸಿದರು.

ವಿಶ್ವದ ಅತ್ಯುತ್ತಮ ಟಿ20 ಫ್ರಾಂಚೈಸಿ ತಂಡಗಳನ್ನು ಒಳಗೊಂಡ ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಅನ್ನು ಪುನರಾರಂಭಿಸಲು ಐಸಿಸಿ ಗಂಭೀರ ಚಿಂತನೆ ನಡೆಸಿದೆ. ಚಾಂಪಿಯನ್ಸ್ ಲೀಗ್ ಟಿ20’ ಟೂರ್ನಮೆಂಟ್ ವಾಣಿಜ್ಯದ ಕೊರತೆಯಿಂದಾಗಿ 2014 ರಲ್ಲಿ ಸ್ಥಗಿತಗೊಂಡಿತ್ತು. ಈಗ ಅದೇ ಮಾದರಿಯಲ್ಲಿ, ಆದರೆ ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ವಿಶ್ವದ ಪ್ರಮುಖ ಲೀಗ್‌ಗಳ ಚಾಂಪಿಯನ್ ತಂಡಗಳನ್ನು ಒಂದೇ ವೇದಿಕೆಗೆ ತರಲು ಐಸಿಸಿ ಸಜ್ಜಾಗುತ್ತಿದೆ. ಅಲ್ಲದೆ ಚಾಂಪಿಯನ್​ ತಂಡಗಳ ಈ ಲೀಗ್​ಗೆ ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್ ಸರಣಿ ಬಗ್ಗೆ ಟೀಂ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮುಕ್ತವಾಗಿ ಮಾತನಾಡಿದ್ದಾರೆ. ಇದು ತಂಡದ ಪರಿವರ್ತನೆಯ ಅವಧಿಯಾಗಿದ್ದು ತಪ್ಪುಗಳು ಸಹಜ ಎಂದಿದ್ದಾರೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾನು ಯಾರೊಬ್ಬರ ಕಡೆಗೂ ಬೆರಳು ತೋರಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸೋತಿದ್ದೇವೆ ಮತ್ತು ಒಟ್ಟಾಗಿಯೇ ಇದರಿಂದ ಕಲಿಯುತ್ತೇವೆ ಎಂದು ತಂಡಕ್ಕೆ ಬೆಂಬಲ ನೀಡಿದ್ದಾರೆ.

ಶ್ರೇಯಸ್ ಅಯ್ಯರ್ ಟಿ20ಐ ಕ್ಯಾಪ್ಟನ್ ಆಗಿ ಪಂದ್ಯ ಗೆಲ್ಲದಿದ್ರೂ ಕ್ಯಾಪ್ಟನ್ ಆಗಿ ಹೊಸ ದಾಖಲೆ ಬರೆದಿದ್ದಾರೆ. ಶ್ರೇಯಸ್ ಮುನ್ನಡಿಸಿದ ಐರ್ಲ್ಯಾಂಡ್ ವಿರುದ್ಧ 2 ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯ ಸೇರಿ ಒಟ್ಟು7 ಪಂದ್ಯದಲ್ಲೂ  ಟಾಸ್ ಗೆದ್ದಿದ್ದಾರೆ. ಈ ಮೂಲಕ ಧೋನಿ ದಾಖಲೆಯನ್ನ ಸರಿಗಟ್ಟಿದ್ದಾರೆ. ಸತತವಾಗಿ ಟಾಸ್‌ ಗೆದ್ರೂ ಅಷ್ಟು ಪಂದ್ಯದಲ್ಲಿ ಸೋತಿರುವುದು ಟೀಂ ಇಂಡಿಯಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ವಿಂಬಲ್ಡನ್‌ನ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿದ್ದು, ಇವರ ನ್ಯೂ ಲುಕ್ ಸಖತ್ ವೈರಲ್ ಆಗ್ತಿದೆ.  ಈ ಬಗ್ಗೆ ವೈಭವ್‌ನ ಕೇಳಿದಾಗ ನಾನು ಏನನ್ನೂ ಮೊದಲೇ ಪ್ಲಾನ್ ಮಾಡಿರಲಿಲ್ಲ. ಸಿಕ್ಕಿದ್ದನ್ನು ಧರಿಸಿದೆ. ಆದರೆ ಅಭಿಷೇಕ್ ಶರ್ಮಾ ಅಣ್ಣ ನಾನು ರೆಡಿಯಾಗಲು ತುಂಬಾ ಸಹಾಯ ಮಾಡಿದರು ಎಂದು ನಗುತ್ತಾ ಉತ್ತರಿಸಿದ್ದಾರೆ.

CSK ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್  ಕೆಳಗಿಳಿದಿದ್ದಾರೆ. ಈ ಮೂಲಕ ಸ್ಟೀಫನ್ ಫ್ಲೆಮಿಂಗ್ ಅವರ 17 ವರ್ಷಗಳ ಸಿಎಸ್‌ಕೆ ಪ್ರಯಾಣ ಕೊನೆಯಾಗಿದೆ. ಫ್ಲೆಮಿಂಗ್ ಕಳೆಗಿಳಿದಿದ್ದರಿಂದ ಅವರ ಬದಲಿಗೆ ಎಂಎಸ್ ಧೋನಿ ಬರಬಹುದು ಅನ್ನೋ ಚರ್ಚೆ ನಡೆಯುತ್ತಿದೆ. ಐಪಿಎಲ್ ಸೀಸನ್ 19ರಲ್ಲಿ ಧೋನಿ ಒಂದೇ ಒಂದು ಪಂದ್ಯ ಆಡಿರಲಿಲ್ಲ. ಹೀಗಾಗಿ 2027ರ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಧೋನಿ ಕೋಚ್ ಆಗಬಹುದು ಎನ್ನಲಾಗ್ತಿದೆ.

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2026ರ ರೋಚಕ ಫೈನಲ್ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಶಿವಮೊಗ್ಗ ಯೋಧಾಸ್ ಅದ್ಭುತ ಪ್ರದರ್ಶನ ನೀಡಿ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.  ಬೆಂಗಳೂರು ಬ್ಲಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಈ ಸವಾಲಿನ ಗುರಿಯನ್ನು ದಿಟ್ಟವಾಗಿ ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ 19.4 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಚಾಪಿಂಯನ್ ಪಟ್ಟ ಅಲಂಕರಿಸಿದೆ.

Kishor KV