ಶಿವಮೊಗ್ಗದಲ್ಲಿ ಪತ್ತೆಯಾಗಿರುವುದು ಬಾಂಬ್ ಅಲ್ಲ! – ಆ ನಿಗೂಢ ವಸ್ತು ಯಾವುದು ಗೊತ್ತಾ?
ಶಿವಮೊಗ್ಗದ ರೈಲು ನಿಲ್ದಾಣದ ಬಳಿ ಭಾನುವಾರ ಅನುಮಾನಾಸ್ಪದ ಬಾಕ್ಸ್‌ಗಳು ಪತ್ತೆಯಾಗಿತ್ತು. ಇದರಿಂದಾಗಿ ಬಾಂಬ್ ಭೀತಿ ನಿರ್ಮಾಣವಾಗಿತ್ತು. ಇದೀಗ ಬಾಕ್ಸ್‌ನಲ್ಲಿ ಪತ್ತೆಯಾಗಿದ್ದು ಸ್ಪೋಟಕ ವಸ್ತುವಲ್ಲ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.
ಶಿವಮೊಗ್ಗ ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಎರಡು ಅನುಮಾನಾಸ್ಪದ ಬಾಕ್ಸ್‌ಗಳು ಪತ್ತೆಯಾಗಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರ ಪರಿಶೀಲನೆ ಬಳಿಕ ಈ ಭೀತಿ ಇದೀಗ ತಿಳಿಗೊಂಡಿದೆ. ಅನುಮಾನಾಸ್ಪದ ಬಾಕ್ಸ್ ಗಳು ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳದಲ್ಲಿ ವಿಸ್ತೃತ ಶೋಧ ಕಾರ್ಯಾಚರಣೆಯನ್ನು ತಡರಾತ್ರಿಯವರೆಗೆ ನಡೆಸಲಾಯಿತು. ಬಳಿಕ ಇದು ಬಾಂಬ್ ಅಲ್ಲ.. ಬದಲಿಗೆ ಉಪ್ಪಿನ ಪುಡಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೀಗ ಸ್ಥಳೀಯರು ನಿಟ್ಟುಸಿರು ಬಿಡುವಂತೆ ಆಗಿದೆ.
ಇದನ್ನೂ ಓದಿ: ನಾಯಿ ಇಷ್ಟ ಅಂತಾ ಇನ್ನುಮುಂದೆ ಬೇಕಾಬಿಟ್ಟಿ ಸಾಕುವಂತಿಲ್ಲ! – ಶ್ವಾನ ಮಾಲೀಕರಿಗೆ ಹೊಸ ರೂಲ್ಸ್!
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್ ಜಿ ಕೆ ಅವರು, ಬೆಂಗಳೂರಿನ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ತಜ್ಞರ ತಂಡ ಬಾಕ್ಸ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಅವರ ಸೂಕ್ಷ್ಮ ಪರೀಕ್ಷೆಯ ನಂತರ, ಅವರು ಯಾವುದೇ ಸ್ಫೋಟಕ ವಸ್ತು ಇಲ್ಲ ಎಂದು ಪ್ರಮಾಣೀಕರಿಸಿದ್ದಾರೆ. ತರುವಾಯ, ಪೆಟ್ಟಿಗೆಗಳನ್ನು ತೆರೆಯಲಾಯಿತು, ಅವುಗಳು ನಿರುಪದ್ರವ ತ್ಯಾಜ್ಯವಸ್ತುಗಳಾಗಿದ್ದವು. ಇದನ್ನು ಪ್ರಾಥಮಿಕವಾಗಿ ಉಪ್ಪು ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.