ಹುಲಿಕಲ್ ಘಾಟ್ ದುರಂತ – ಕರಾವಳಿ, ಮಲೆನಾಡು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಬಂದ್!

ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಮೂವರು ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ. ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ: ಗಂಡ ಕಪ್ಪಾಗಿದ್ದಾನೆ ಎಂದು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಲು ಪಾಪಿ ಹೆಂಡ್ತಿ!
ಹುಲಿಕಲ್ ಘಾಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾದ ಕಾರಣದಿಂದ ಮುಂದಿನ ಆದೇಶದವರೆಗೆ ಹುಲಿಕಲ್ ಘಾಟ್ ಮಾರ್ಗವನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಗುರುಲಿಂಗ ಕವಳಿಮಠ ಆದೇಶ ಹೊರಡಿಸಿದ್ದಾರೆ. ಕರಾವಳಿ ಮತ್ತು ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಈ ರಸ್ತೆಯ ಬಂದ್‌ನಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಾಹನ ಸವಾರರು ತೀರ್ಥಹಳ್ಳಿಯ ಆಗುಂಬೆ ಘಾಟ್ ಹಾಗೂ ಹೊಸನಗರ ತಾಲೂಕಿನ ನಿಟ್ಟೂರು-ನಾಗೋಡಿ ಘಾಟ್ ಮಾರ್ಗಗಳನ್ನು ಪರ್ಯಾಯವಾಗಿ ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಏನಿದು ಘಟನೆ?
ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಹುಲಿಕಲ್ ಘಾಟ್ ಮುಖ್ಯ ಸಂಪರ್ಕ ಸೇತುವೆಯಾಗಿದೆ. ರಾತ್ರಿ ವೇಳೆ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಎಲ್ಲ ರೀತಿಯ ವಾಹನಗಳು ಹುಲಿಕಲ್ ಘಾಟ್‌ನಲ್ಲೇ ಸಂಚರಿಸುತ್ತವೆ. ಗುರುವಾರ ಸಂಜೆಯಿಂದಲೇ ಘಾಟಿ ಮಾರ್ಗ ಬಂದ್ ಮಾಡಿದ್ದರಿಂದ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿವಮೊಗ್ಗದಿಂದ ಗುರುವಾರ ಸಂಜೆ ಹುಲಿಕಲ್ ಘಾಟ್ ಮಾರ್ಗವಾಗಿ ಕರಾವಳಿ ಕಡೆಗೆ ಹೊರಟ ಸಾವಿರಾರು ವಾಹನಗಳು ಘಾಟಿವರೆಗೆ ಬಂದು ಬಳಿಕ ನಾಗೋಡಿ – ಕೊಲ್ಲೂರು ಮಾರ್ಗವಾಗಿ ಕರಾವಳಿ ಕಡೆಗೆ ಸಂಚರಿಸಿದವು. ಹುಲಿಕಲ್ ಘಾಟ್‌ನಲ್ಲಿ ಕಾಮಗಾರಿ ವೇಳೆ ಧರೆ ಕುಸಿತವಾಗಿತ್ತು. ಮಣ್ಣಿನ ಅಡಿಯಲ್ಲಿ ಸಿಲುಕಿ ಕಾಮಗಾರಿ ಮೇಲ್ವಿಚಾರಕ ನಗರ ನಿವಾಸಿ ರಾಘವೇಂದ್ರ ಸೇರಿ ಮೂವರು ಸಾವನ್ನಪ್ಪಿದ್ದರು.

ನೋಡಿರಿ

