6ನೇ ಕ್ಲಾಸ್ ಬಾಲಕಿ ನೇಣು ಬಿಗಿದು ಸೂಸೈ*ಡ್ – ಅಪ್ಪ, ಅಮ್ಮ ಇಲ್ಲದಿದ್ದಾಗ ನಡೆದಿದ್ದೇನು?

6ನೇ ಕ್ಲಾಸ್ನಲ್ಲಿ ಓದುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ನಗರದ ಬೊಮ್ಮನ ಕಟ್ಟೆ ಬಡಾವಣೆಯ ಎ- ಬ್ಲಾಕ್ನಲ್ಲಿ ಯುವತಿ ತನ್ನ ಪೋಷಕರೊಂದಿಗೆ ವಾಸ ಮಾಡುತ್ತಿದ್ದಳು. ಆದರೆ ಈಗ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಅತ್ಯುತ್ತಮ ಸಿನಿಮಾ ಕಾಂತಾರ, ನಟ ರಿಷಭ್ ಶೆಟ್ಟಿ – ರಶ್ಮಿಕಾಗೂ ಅವಾರ್ಡ್, ಮಿರಾಯಿ ಸಿನಿಮಾಗೂ ಪ್ರಶಸ್ತಿಯ ಗರಿ
ಜೀವಿತಾ ಸಾವನ್ನಪ್ಪಿದ ಬಾಲಕಿ, 12 ವರ್ಷದ ಜೀವಿತಾ ಬೊಮ್ಮನ ಕಟ್ಟೆಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗೆ ಆಕೆಗೆ ಪರೀಕ್ಷೆ ಮುಗಿದು ರಜೆ ಇದ್ದ ಕಾರಣ ಮನೆಯಲ್ಲೇ ಒಬ್ಬಳೇ ಇದ್ದಳು. ಪೋಷಕರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಬಾಲಕಿ ಮನೆಯಲ್ಲಿ ಸಾವಿಗೆ ಶರಣಾಗಿದ್ದಾಳೆ ಸಂಜೆ ಪೋಷಕರು ಮನೆಗೆ ಮರಳಿದ ನಂತರವೇ ಘಟನೆ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಟ್ಟ ಮಗಳ ಈ ಹಠಾತ್ ಸಾವಿನಿಂದ ಪೋಷಕರು ಕಂಗಾಲಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೋಡಿರಿ

