ಜಾತಿ, ಧರ್ಮ ಮೀರಿದ ಪ್ರೇಮ – ಸಿನಿಮಾ ಕಥೆಯಂತಿದೆ ಶಿವಂ ದುಬೆ ಲವ್ ಸ್ಟೋರಿ

ಜಾತಿ, ಧರ್ಮ ಮೀರಿದ ಪ್ರೇಮ – ಸಿನಿಮಾ ಕಥೆಯಂತಿದೆ ಶಿವಂ ದುಬೆ ಲವ್ ಸ್ಟೋರಿ

ಐಪಿಎಲ್‌ನಲ್ಲಿ ಆಡಿದ ಎರಡೇ ಎರಡು ಪಂದ್ಯದಲ್ಲೇ ಸಾಕಷ್ಟು ಕ್ರೇಜ್ ಹುಟ್ಟಿಸಿದ ಪ್ಲೇಯರ್ ಅಂದ್ರೆ ಸಿಎಸ್‌ಕೆ ಆಟಗಾರ ಶಿವಂ ದುಬೆ. ಶಿವಂ ದುಬೆ ಬ್ಯಾಟ್‌ ಹಿಡಿಯುವ ರೀತಿ.. ಬಾರಿಸುವ ಸಿಕ್ಸರ್‌.. ಬೀಸುವ ಬೌಂಡರಿ.. ಬಾಲ್‌ ಲೀವ್‌ ಮಾಡುವ ಸ್ವರೂಪ.. ಎಲ್ಲವೂ ಸಿಕ್ಸರ್ ಸಿಂಗ್ ಎಂದೇ ಫೇಮಸ್ ಆಗಿರೋ ಯುವರಾಜ್ ಸಿಂಗ್ ಅವ್ರನ್ನ ಡಿಟ್ಟೋ ಕಾಪಿ ಪೇಸ್ಟ್‌ ಮಾಡಿದಂತಿದೆ.. ದುಬೆ ಬ್ಯಾಟಿಂಗ್‌ ಮಾಡ್ತಿದ್ದರೆ, ಅವರ ಮ್ಯಾನರಿಸಂ ನೋಡ್ತಿದ್ದರೆ, ನಿಜಕ್ಕೂ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಯಾವತ್ತೂ ಮಿಸ್‌ ಮಾಡ್ಕೊಳ್ಳುವ ಯುವರಾಜ್‌ ಸಿಂಗ್‌ ಯೆಲ್ಲೋ ಜರ್ಸಿಯಲ್ಲಿ ಪ್ಯಾಡ್‌ ಕಟ್ಕೊಂಡು ಬ್ಯಾಟ್‌ ಹಿಡಿದಂತೆಯೇ ಭಾಸವಾಗುತ್ತದೆ. ತನ್ನ ಸ್ಟೈಲ್, ಮ್ಯಾನರಿಸಂ, ಬ್ವಾಡಿಲ್ಯಾಂಗ್ವೇಜ್ ಮೂಲಕ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿರೋ ಈ ಶಿವಂ ದುಬೆ ಯಾರು, ಫೀಲ್ಡ್‌ನಲ್ಲಿ ಅಬ್ಬರಿಸೋ ಶಿವಂ ದುಬೆಯ ಲವ್ ಕಹಾನಿ ಹೇಗೆ ಶುರುವಾಯ್ತು ಎಂಬ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊಹ್ಲಿಗೆ ಮಾತ್ರನಾ ಮ್ಯಾಚ್? – ಉದ್ಧಟ ಗಂಭೀರ್ ಗೆ ಉತ್ತರವಿಲ್ವಾ?

ಸಿಎಸ್‌ಕೆ ಟೀಮ್‌ನಲ್ಲಿ ಸಿಕ್ಕಾಪಟ್ಟೆ ಶೈನ್ ಆಗ್ತಿರೋ ಬ್ಯಾಟ್ಸ್‌ಮನ್ ಅಂದ್ರೆ ಶಿವಂ ದುಬೆ. ಈ ಐಪಿಎಲ್ ಹೀರೋ ಪರ್ಸನಲ್ ಲೈಫ್ ಕೂಡಾ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ. ಒಂದು ಕಡೆ ಕ್ರಿಕೆಟ್, ಮತ್ತೊಂದು ಕಡೆ ಪ್ರೀತಿಸಿದ ಹುಡುಗಿ, ಜಾತಿ, ಧರ್ಮದ ಸಂಕೋಲೆ, ಜನರ ಚುಚ್ಚುಮಾತು ನಂತರ ಶಿವಂ ಪ್ರೀತಿಗೆ ಸಿಕ್ಕ ಹೆತ್ತವರ ಸಪೋರ್ಟ್. ಹೀಗೆ ಒಂದು ಫಿಲ್ಮ್ ಸ್ಟೋರಿ ರೀತಿಯಿದೆ ದುಬೆಯ ಲವ್ ಕಹಾನಿ. ಶಿವಂ ದುಬೆಗೆ ಕ್ರಿಕೆಟ್ ಅಂದ್ರೆ ಜೀವ. ಕ್ರೆಕೆಟ್‌ನಲ್ಲಿ ಇನ್ನೇನು ಕೆರಿಯರ್ ಬಿಲ್ಡ್ ಆಗ್ತಾಯಿತ್ತು ಅನ್ನೋವಾಗ ಶಿವಂ ಹೃದಯದ ಬಾಗಿಲು ತೆರೆದು ಒಳಗೆ ಬಂದವರೇ ಅಂಜುಮ್ ಖಾನ್.

ಅಂಜುಮ್ ಖಾನ್ ಉತ್ತರ ಪ್ರದೇಶದ ಅಲಿಘಢ ವಿಶ್ವ ವಿದ್ಯಾಲಯದಲ್ಲಿ ಲಲಿತ ಕಲೆ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ದುಬೆ ಮತ್ತು ಅಂಜುಮ್ ಲವ್ ನಲ್ಲಿ ಬೀಳ್ತಾರೆ. ಮನಸುಗಳ ಮಾತು ಮಧುರ ಎಂಬಂತೆ ಪರಸ್ಪರ ತುಂಬಾ ಹತ್ತಿರವಾಗ್ತಾರೆ. ಆಗಲೇ ಇಬ್ಬರಿಗೂ ಟೆನ್ಷನ್ ಶುರುವಾಗುತ್ತೆ. ಲವ್ ಮಾಡಿದ್ದಾಯ್ತು, ಆದರೆ, ಜಾತಿ ವಿಚಾರ ಬಿಡಿ, ಇದು ಧರ್ಮದ ವಿಚಾರ. ಹೀಗಾಗಿ ಲವ್ ಬರ್ಡ್ಸ್‌ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಲ್ಲೇ ಕಾಲ ಕಳೀತಾರೆ. ಇಬ್ಬರೂ ತಮ್ಮ ಪ್ರೀತಿಯನ್ನು ಎಲ್ಲರಿಂದ ಮುಚ್ಚಿಟ್ಟಿದ್ದರು. ಮದುವೆಗೂ ಮುನ್ನ ಇಬ್ಬರೂ ಒಂದು ವರ್ಷ ಡೇಟಿಂಗ್ ನಡೆಸಿದ್ದರು. ಆದರೆ, ಈ ಸಮಯದಲ್ಲಿ ಅವರ ಪ್ರೇಮಕಥೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. 2021ರಲ್ಲಿ ಕೊನೆಗೂ ಪೋಷಕರ ಬಳಿ ತಮ್ಮ ಪ್ರೀತಿಯನ್ನು ಹೇಳಿಕೊಳ್ತಾರೆ. ಎಲ್ಲಾ ಪ್ರೇಮಿಗಳಂತೆ ಆರಂಭದಲ್ಲಿ ಹೆತ್ತವರು ಪ್ರೀತಿಗೆ ಸಪೋರ್ಟ್ ಮಾಡಲಿಲ್ಲ. ಹೇಗೋ ಪೋಷಕರನ್ನು ಒಪ್ಪಿಸಿ ಕೊನೆಗೆ ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಆಗಂತೂ ಇಬ್ಬರೂ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಜನರ ಚುಚ್ಚುಮಾತು, ವ್ಯಾಪಕ ಟೀಕೆ ಎದುರಿಸಬೇಕಾಗುತ್ತೆ. ಇಂಥಾ ಟೈಮಲ್ಲಿ ಈ ಲವ್​ಬರ್ಡ್ಸ್​​ಗೆ ಸಿಕ್ಕಿದ್ದೇ ಪೇರೆಂಟ್ಸ್ ಸಪೋರ್ಟ್. ಹೆತ್ತವರ ಸಂಪೂರ್ಣ ಒಪ್ಪಿಗೆಯೊಂದಿಗೆ ಶಿವಂ ದುಬೆ ಮತ್ತು ಅಂಜುಂಖಾನ್. 2021ರ ಜುಲೈನಲ್ಲಿ ಅದ್ಧೂರಿಯಾಗಿಯೇ ಮದುವೆ ಆಗ್ತಾರೆ.  ಶಿವಂ ದುಬೆ ಹಿಂದೂ ಆದರೆ ಅಂಜುಂ ಖಾನ್ ಮುಸ್ಲಿಂ ಆಗಿರೋ ಕಾರಣ ಎರಡೂ ಸಂಪ್ರದಾಯದ ರೀತಿಯಲ್ಲಿ ದಾಂಪತ್ಯಕ್ಕೆ ಕಾಲಿಡ್ತಾರೆ. ಅವರ ಮದುವೆಯು ಧಾರ್ಮಿಕ ಭಿನ್ನಾಭಿಪ್ರಾಯವನ್ನು ಮೀರಿದ ಸಾಂಸ್ಕೃತಿಕ ಶ್ರೀಮಂತಿಗೆ ಸಾಕ್ಷಿಯಾಗಿದೆ.

ಅಂಜುಂ ಖಾನ್ ಉತ್ತರ ಪ್ರದೇಶ ಮೂಲದವರು. ವೃತ್ತಿಪರ ಮಾಡೆಲ್ ಆಗಿದ್ದವರು. ಕಿರುತೆರೆಯಲ್ಲೂ  ನಟಿಸಿ ಜನಮನ ಗೆದ್ದವರು. ಅಂಜುಂ ಖಾನ್ ಕೆಲವು ಮ್ಯೂಸಿಕ್ ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದರು. ಶಿವಂ ದುಬೆ ಜೊತೆಗೆ ಮದುವೆಯಾದ ಸುಮಾರು ಒಂದು ವರ್ಷದ ನಂತರ ಶಿವಂ ದುಬೆ ಮತ್ತು ಅಂಜುಮ್ ಖಾನ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ರು. ಧರ್ಮ ಬೇರೆ ಬೇರೆಯಾದರೂ ಪ್ರೀತಿಗೆ ಯಾವುದೂ ಅಡ್ಡಿಯಾಗಲೇ ಇಲ್ಲ. ದಂಪತಿಯ ಸುಖ ಸಂಸಾರಕ್ಕೆ ಹೆತ್ತವರ ಆಶೀರ್ವಾದವೂ ಕಾರಣ. ಈಗ ಶಿವಂ ದುಬೆ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುತ್ತಿದ್ದರೆ, ಪತ್ನಿ ಅಂಜುಂ ಖಾನ್ ಗಂಡನ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಇನ್ನು ಶಿವಂ ದುಬೆ ಬಗ್ಗೆ ಫ್ಯಾನ್ಸ್ ಕ್ರೇಜ್ ಕೂಡಾ ಜಾಸ್ತಿಯಾಗ್ತಿದೆ. ಗುಜರಾತ್ ಟೈಟಾನ್ಸ್ ಮತ್ತು ಆರ್‌ಸಿಬಿ ತಂಡಗಳ ಎದುರು ಶಿವಂ ದುಬೆ ತನ್ನ ಬ್ಯಾಟ್ ಮೂಲಕವೇ ಅಬ್ಬರಿಸಿದ್ದಾರೆ. ತಾನೊಬ್ಬ ಟೀಮ್ ಇಂಡಿಯಾದ ಫ್ಯೂಚರ್ ಕ್ರಿಕೆಟರ್ ಎಂಬುದನ್ನ ಸಾಬೀತು ಮಾಡಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಜಾಗಕ್ಕೆ ತಾನೇ ಬೆಸ್ಟ್ ಅನ್ನೋದನ್ನ ತನ್ನ ಫರ್ಫಾಮೆನ್ಸ್ ಮೂಲಕವೇ ತೋರಿಸಿಕೊಡ್ತಿದ್ದಾರೆ. ಹೀಗಾಗಿ ಶಿವಂ ದುಬೆ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಟೀಮ್ ಸೇರಿದ್ರೂ ಅಚ್ಚರಿಯೇನಿಲ್ಲ.

Sulekha