ಉಗ್ರ ನೋಟ, ದಪ್ಪ ಮೀಸೆ..  ರಗಡ್ ಲುಕ್‌ನಲ್ಲಿ ಶಿವಣ್ಣ – ಪೆದ್ದಿ ಚಿತ್ರದ ಶಿವರಾಜ್‌ ಕುಮಾರ್‌ ಲುಕ್ ಔಟ್!

ಉಗ್ರ ನೋಟ, ದಪ್ಪ ಮೀಸೆ..  ರಗಡ್ ಲುಕ್‌ನಲ್ಲಿ ಶಿವಣ್ಣ – ಪೆದ್ದಿ ಚಿತ್ರದ ಶಿವರಾಜ್‌ ಕುಮಾರ್‌ ಲುಕ್ ಔಟ್!

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ಶಿವಣ್ಣನ ಹುಟ್ಟುಹಬ್ಬಕ್ಕೆ ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಲುಕ್‌ ರಿಲೀಸ್ ಮಾಡಿ ಬರ್ತ್‌ಡೇ ವಿಶ್‌ ಮಾಡಿದೆ. ಗೌರ್ ನಾಯ್ಡುʼ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ನಟಿಸುತ್ತಿದ್ದು, ಉಗ್ರ ನೋಟ, ದಪ್ಪ ಮೀಸೆ ಮತ್ತು ರಗಡ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.‌

ಇದನ್ನೂ ಓದಿ:ಬಿರಿಯಾನಿ ಎಲೆ ಎಂದು ನೀಲಗಿರಿ ಎಲೆ ಮಾರಾಟ! – ರಾಜ್ಯದಲ್ಲಿ ಬಯಲಾಯ್ತು ಮತ್ತೊಂದು ದಂಧೆ!

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸುತ್ತಿರುವ ಪೆದ್ದಿ ಸಿನಿಮಾದಲ್ಲಿ ಶಿವರಾಜ್ ಕುಮಾರ್  ಸಹ ಪವರ್ ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ಪೆದ್ದಿ ಸ್ಫೋರ್ಟ್ ಆಕ್ಷನ್ ಡ್ರಾಮಾ ಕಥಾಹಂದರವೊಂದಿದೆ. ರಾಮ್ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದು, ವೆಂಕಟ ಸತೀಶ್ ಕಿಲಾರು ಹಣ ಹಾಕುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ನಿರ್ಮಾಣದಲ್ಲಿ ಸಾಥ್ ನೀಡಿದೆ. ಆರ್. ರತ್ನವೇಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ರಾಮ್ ಚರಣ್ ಹುಟ್ಟುಹಬ್ಬ ಅಂಗವಾಗಿ ಅಂದರೆ ಮಾರ್ಚ್ 27, 2026 ರಂದು ಬಹುಭಾಷಾಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Shwetha M