ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಚೇತರಿಕೆ  – ಮಂತ್ರಾಲಯಕ್ಕೆ ಭೇಟಿ ಕೊಟ್ಟ ಶಿವರಾಜ್‌ ಕುಮಾರ್‌ ಕುಟುಂಬ

ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಚೇತರಿಕೆ  – ಮಂತ್ರಾಲಯಕ್ಕೆ ಭೇಟಿ ಕೊಟ್ಟ ಶಿವರಾಜ್‌ ಕುಮಾರ್‌ ಕುಟುಂಬ

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ವಿಶ್ರಾಂತಿಯಲ್ಲಿರುವ ಶಿವರಾಜ್‌ ಕುಮಾರ್‌ ಕೆಲ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಶಿವಣ್ಣ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿದ ದ್ವಾರಕಾ! ASI ಇಲಾಖೆಗೆ ಸಿಗ್ತಾನಾ ಭಗವಂತ?

ವಿಶ್ರಾಂತಿಯಲ್ಲಿರುವ ಶಿವಣ್ಣ ಸದ್ಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಭಾನುವಾರ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ  ಶಿವಣ್ಣ ಗುರು ರಾಯರ ದರ್ಶನ ಪಡೆದರು. ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಶಿವಣ್ಣ ಚಿತ್ರೀಕರಣಕ್ಕೆ ವಾಪಸ್ಸಾಗಲಿದ್ದು, ಈಗಾಗಲೇ ಬಿರುಸಿನ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಸದ್ಯಕ್ಕೆ 45 ಸಿನಿಮಾ ಕೊನೆಯ ಹಂತದ ಪ್ಯಾಚ್ ವರ್ಕ್​ನಲ್ಲಿದೆ. ಪ್ರಮೋಷನಲ್ ಸಾಂಗ್ ಶೂಟಿಂಗ್​ಗಾಗಿ ಶಿವಣ್ಣ ಉಗಾಂಡಗೆ ತೆರಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಶಿವಣ್ಣಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅಮೆರಿಕಗೆ ತೆರಳಿದ್ದ ಅವರು, ಅಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.

Shwetha M