ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಮೊದಲ ಮಾತು – ಆರೋಗ್ಯ ಹೇಗಿದೆ?
ಡಾ. ಶಿವರಾಜ್ ಕುಮಾರ್ ಕಾನ್ಸರ್‌ಗೆ ಅಮೆರಿಕದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ಅಮೆರಿಕದಲ್ಲಿ ಶಿವಣ್ಣ ಹೇಗಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಇದೀಗ ಶಿವಣ್ಣ ಹೆಲ್ತ್ ಅಪ್‌ಡೇಟ್ ಸಿಕ್ಕಿದೆ. ಆಪರೇಷನ್ ಮಾಡಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ತಲೆ ಬೋಳಿಸಿಕೊಂಡ ಚಾರು..! – ರಾಮಚಾರಿ ನಾಯಕಿಗೆ ಏನಾಯ್ತು?
ಸರ್ಜರಿ ಕುರಿತು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ದಂಪತಿ ಮಾತನಾಡಿದ್ದಾರೆ. ವಿಡಿಯೋದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, ಮೊದಲು ಎಲ್ಲ ಕನ್ನಡಿಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ನೀವೆಲ್ಲ ಮಾಡಿದ ಆಶೀರ್ವಾದದಿಂದ ಎಲ್ಲ ರಿಪೋರ್ಟ್ಗಳು ನೆಗೆಟಿವ್ ಬಂದಿವೆ. ಕೊನೆಯಲ್ಲಿ ಪೈಥೋಲಾಜಿ ರಿಪೋರ್ಟ್ ಬಗ್ಗೆ ಕಾಯುತ್ತಿದ್ದೇವು. ಅದು ಕೂಡ ನೆಗೆಟಿವ್ ಬಂದಿದ್ದು ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಫ್ರಿ ಆಗಿದ್ದಾರೆ ಎಂದು ಹೇಳಿದ್ದಾರೆ.
ಆಸ್ಪತ್ರೆಯವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದಕ್ಕೆಲ್ಲ ಕಾರಣ ದೊಡ್ಡವರ ಹಾಗೂ ನಿಮ್ಮೆಲ್ಲರ ಆಶೀರ್ವಾದವಾಗಿದೆ. ನಾನು ಇದನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಅಂತ ಗೀತಾ ಶಿವರಾಜ್ಕುಮಾರ್ ಅವರು ಹೇಳಿದ್ದಾರೆ. ಗೀತಕ್ಕ ಮಾತನಾಡುವಾಗ ಶಿವರಾಜ್ ಕುಮಾರ್ ಅವರು ಪಕ್ಕದಲ್ಲೇ ಕುಳಿತುಕೊಂಡಿದ್ದರು. ಅವರು ಮಾತನಾಡಿ ನಿಮ್ಮ ಆಶೀರ್ವಾದಿಂದ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.