ಸೋಮವಾರದ ಪೂಜೆ ನಿಯಮಗಳಾವುವು..?- ಈ ದಿನ ಏನು ಮಾಡಬೇಕು? ಏನು ಮಾಡಬಾರದು?

ಸೋಮವಾರವು ಭಗವಾನ್ ಶಿವನ ದಿನ. ಈ ದಿನದಂದು ಶಿವ ಪೂಜೆ ಮಾಡುವುದರಿಂದ ಭಕ್ತರ ಜೀವನದ ಎಲ್ಲಾ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗೂ ಈ ದಿನದ ಪರಿಹಾರ ಕ್ರಮಗಳಿಂದ ಪೂಜೆಯ ಫಲವು ದುಪ್ಪಟ್ಟಾಗುತ್ತದೆ. ಸೋಮವಾರದ ಪೂಜೆ ನಿಯಮಗಳಾವುವು..? ಸೋಮವಾರ ಪಠಿಸಬೇಕಾದ ಮಂತ್ರಗಳಾವುವು..? ಸೋಮವಾರ ಮರೆಯದೇ ಈ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಿ..
ಸೋಮವಾರದಂದು ಉಪವಾಸವಿದ್ದು, ಶಿವನ ಆರಾಧನೆಯನ್ನು ಮಾಡಬೇಕು ಮತ್ತು ಈ ಸಮಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಭಕ್ತರ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಹಾಗೂ ಅವರ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಅವರು ಸಾವಿನ ನಂತರ ಮೋಕ್ಷವನ್ನು ಪಡೆಯುತ್ತಾರೆ. ಭಕ್ತರು ಶಿವನನ್ನು ಆರಾಧಿಸುವಾಗ ಈ ಪರಿಹಾರವನ್ನು ಮಾಡಬೇಕು. ಈ ಪರಿಹಾರ ಕ್ರಮಗಳಿಂದ ನಾವು ಮಾಡಿದ ಪೂಜೆಯ ಫಲವು ದುಪ್ಪಟ್ಟಾಗುತ್ತದೆ ಎನ್ನುವ ನಂಬಿಕೆಯಿದೆ.

ಸೋಮವಾರ ಏನ್ ಮಾಡಬೇಕು?ಏನು ಮಾಡಬಾರದು?
– ಸೋಮವಾರದಂದು ಪೂಜೆ ಮಾಡುವವರು ಕೇಸರಿ, ಹಳದಿ, ಕೆಂಪು ಬಟ್ಟೆಗಳನ್ನು ಧರಿಸಬಹುದು.
– ಸೋಮವಾರದ ಉಪವಾಸದಲ್ಲಿ ಪೂರ್ಣ ಅಕ್ಷತೆಯನ್ನು ಮಾತ್ರ ಬಳಸಿ, ಅಂದರೆ ದೇವರಿಗೆ ಒಡೆದ ಅಕ್ಷತೆಯನ್ನು ಅರ್ಪಿಸಬೇಡಿ.
– ಸೋಮವಾರದಂದು ಮಾಡುವ ಉಪವಾಸ ಪೂಜೆಯಲ್ಲಿ ಶಿವನಿಗೆ ಬಿಲ್ವದ ಎಲೆಗಳು, ಅಕ್ಷತೆ, ಶ್ರೀಗಂಧ, ಧಾತುರಾ ಮತ್ತು ಎಕ್ಕದ ಹೂವುಗಳನ್ನು ಅರ್ಪಿಸಿ. ಇದರಿಂದ ಶಿವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಮತ್ತು ನಮ್ಮೆಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.
– ಸೋಮವಾರ ಉಪವಾಸ ಮಾಡುವಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ, ಹಾಗೆ ಮಾಡುವುದರಿಂದ ಶಿವನು ಕೋಪಗೊಳ್ಳುತ್ತಾನೆ.
– ಸೋಮವಾರ ಉಪವಾಸದಂದು ಯಾವುದೇ ತಪ್ಪು ಅಥವಾ ಅನೈತಿಕ ಕೆಲಸ ಮಾಡಬೇಡಿ.
– ಸೋಮವಾರದಂದು ಜೂಜು, ಕಳ್ಳತನ ಮತ್ತು ಸುಳ್ಳು ಹೇಳುವುದನ್ನು ತಪ್ಪಿಸಿ.
– ಈ ದಿನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಶಿವನಿಗೆ ಅರ್ಪಿಸಬೇಡಿ.
ವಾರದ ಮೊದಲ ದಿನವಾದ ಸೋಮವಾರವನ್ನು ಭಗವಾನ್ ಶಿವನ ದಿನವೆಂದು ಹೇಳಲಾಗುತ್ತದೆ. ಹಾಗೂ ಈ ದಿನ ಶಿವನನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸಲಾಗುತ್ತದೆ. ಸೋಮವಾರದಂದು ಶಿವ ಮಂತ್ರವನ್ನು ಪಠಿಸುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ನಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಶಿವನ ಅನುಗ್ರಹಕ್ಕೆ ಕೆಲವೊಂದು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೋಮವಾರದಂದು ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದಲೂ ಶಿವನ ಅನುಗ್ರಹವನ್ನು ನಾವು ಪಡೆದುಕೊಳ್ಳಬಹುದು.

ನೋಡಿರಿ

