ಶಿವನಿಗೆ ಕಣ್ಣು ಕೊಟ್ಟು ಭಕ್ತಿ ಮೆರೆದ ಬೇಡರ ಕಣ್ಣಪ್ಪನಂತೆ ನಾನು ತಲೆಯನ್ನೇ ಕೊಡುತ್ತೇನೆ – ದೇಗುಲದಲ್ಲಿ ತಲೆ ಕತ್ತರಿಸಿಕೊಂಡ ಶಿವಭಕ್ತ..!

ಶಿವನಿಗೆ ಕಣ್ಣು ಕೊಟ್ಟು ಭಕ್ತಿ ಮೆರೆದ ಬೇಡರ ಕಣ್ಣಪ್ಪನಂತೆ ನಾನು ತಲೆಯನ್ನೇ ಕೊಡುತ್ತೇನೆ – ದೇಗುಲದಲ್ಲಿ ತಲೆ ಕತ್ತರಿಸಿಕೊಂಡ ಶಿವಭಕ್ತ..!

ಬೇಡರ ಕಣ್ಣಪ್ಪ ಯಾರಿಗೆ ಗೊತ್ತಿಲ್ಲ ಹೇಳಿ. ಅಪ್ಪಟಶಿವಭಕ್ತ. ಶಿವನಿಗೆ ತನ್ನ ಮುಗ್ಧಭಕ್ತಿಯಿಂದ ಕಣ್ಣುಗಳನ್ನೇ ಅರ್ಪಿಸಿದ ಭಕ್ತ. ಇದರ ಬಗ್ಗೆ ಓದಿದ್ದೇವೆ. ತಿಳಿದುಕೊಂಡಿದ್ದೇವೆ. ಆದರೆ, ಇಲ್ಲೊಬ್ಬ ಭಕ್ತ  ಬೇಡರ ಕಣ್ಣಪ್ಪ ಕಣ್ಣು ಕೊಟ್ಟಿದ್ದಾನೆ. ನಾನು ಶಿವನಿಗೆ ತಲೆಯನ್ನೇ ಕೊಡುತ್ತೇನೆ ಎಂದು ಯಾವಾಗಲೂ ಹೇಳುತ್ತಿದ್ದ. ಕೊನೆಗೂ ಹೇಳಿದ ರೀತಿಯೇ ಮಾಡಲು ಹೋಗಿದ್ದಾನೆ.

ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ದೇವಸ್ಥಾನಕ್ಕೆ ಹೋದ ಮಹಿಳೆಗೆ ಪೂಜಾರಿ ಮೇಲೆ ಲವ್ – ಅರ್ಚಕನ ಜೊತೆ ಓಡಿಹೋದವಳು ಅರೆಸ್ಟ್..!

ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ರಘುನಾಥಪುರ ಗ್ರಾಮದ ನಿವಾಸಿ 28 ವರ್ಷದ ದೀಪಕ್ ಕುಶ್ವಾಹ ಶಿವನ ಪರಮಭಕ್ತ. ಕೂಲಿ ಕೆಲಸ ಮಾಡಿಕೊಂಡಿರುವ ದೀಪಕ್ ಊಟ ಬಿಟ್ಟರೂ ಶಿವನ ಪೂಜೆ ಮಾಡುವದನ್ನು ಬಿಡುವುದಿಲ್ಲ. ಅಷ್ಟೊಂದು ಭಕ್ತಿ ಶಿವನ ಮೇಲೆ. ಆಗಸ್ಟ್ 15ರಂದು ದೇಶದೆಲ್ಲೆಡೆ ಜನರು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರೆ, ದೀಪಕ್ ಮಾತ್ರ ಶಿವನ ಭಕ್ತಿಯಲ್ಲಿ ತಲ್ಲೀನರಾಗಿದ್ದರು. ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಮಂಗಳವಾರ ಮುಂಜಾನೆ 4 ಗಂಟೆ ವೇಳೆ ಅವರು ಸ್ನಾನ ಮುಗಿಸಿ ಎದ್ದು ಶಿವನ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ನಡೆಯುತ್ತಿದ್ದ ವೇಳೆ ದೇವರಿಗೆ ನನ್ನ ತಲೆಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು. ಅತ್ತ ಅರ್ಚಕರು ಶಿವನ ಪೂಜೆ ಮಾಡುತ್ತಾ ಮಂತ್ರ ಪಠಿಸುತ್ತಿದ್ದರೆ ಇತ್ತ ದೀಪಕ್,  ಮರ ಕತ್ತರಿಸುವ ಯಂತ್ರವನ್ನು ತೆಗೆದುಕೊಂಡು ದೇವಸ್ಥಾನದ ಮುಂದೆಯೇ ತಲೆಯನ್ನು ಕತ್ತರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡು ಸುತ್ತಮುತ್ತ ಇದ್ದವರು ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಕ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ದೀಪಕ್ ತಂದೆ ಪಾಲ್ತೂರಾಮ್, ದೀಪಕ್ ಶಿವನ ಆರಾಧಕನಾಗಿದ್ದ. ಶ್ರದ್ಧೆ ಭಕ್ತಿಯಿಂದ ಪ್ರತಿದಿನ ಶಿವನನ್ನು ಪೂಜಿಸುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ಶಿವನಿಗೆ ತನ್ನ ತಲೆಯನ್ನು ಅರ್ಪಿಸಬೇಕೆಂಬ ಆಸೆಯನ್ನ ಹೇಳಿಕೊಳ್ಳುತ್ತಿದ್ದ. ಇದನ್ನೇ ನೋಟ್ ಬುಕ್‌ವೊಂದರಲ್ಲಿ ಬರೆದುಕೊಂಡಿದ್ದ. ಆದರೆ ಇದನ್ನೂ ನೋಡಿ ತನ್ನನ್ನು ತಾನೂ ದೇವರಿಗೆ ಈ ರೀತಿ ಅರ್ಪಿಸಿಕೊಳ್ಳುವುದು ಮೂರ್ಖತನ ಎಂದು ನಾನು ಹೇಳಿದ್ದೆ. ಇದನ್ನ ಆತ ಕಳೆದ ತಿಂಗಳೇ ಮಾಡಲು ಬಯಸಿದ್ದ ಎಂದು ತಿಳಿಸಿದ್ದಾರೆ. ಯುವಕನ ಅಣ್ಣ ದೇವರಾಜ್ ಕುಶ್ವಾಹ ತಮ್ಮನ ಬಗ್ಗೆ ಮಾತನಾಡಿದ್ದು, ಸಹೋದರ ಸ್ನಾನ ಮುಗಿಸಿ ಪೂಜೆಗೆಂದು ದೇವಸ್ಥಾನಕ್ಕೆ ಬಂದಾಗ ಈ ಘಟನೆ ನಡೆದಿದೆ. ಅಲ್ಲಿ ಆತನ ಯಂತ್ರವನ್ನು ಸ್ಟಾರ್ಟ್ ಮಾಡಿ ಕುತ್ತಿಗೆ ಹಿಡಿದಿದ್ದಾನೆ, ತಕ್ಷಣ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಆತನ ಸ್ಥಿತಿ ಗಂಭೀರವಾಗಿದೆ ಎಂದು ಸಹೋದರ ತಿಳಿಸಿದ್ದಾರೆ.

ದೇವರ ಮೇಲೆ ಭಕ್ತಿ ಇರಬೇಕು ನಿಜ. ಆದರೆ, ಪ್ರಾಣವನ್ನೇ ಬಲಿಕೊಡುವಷ್ಟು ಅಂಧಭಕ್ತಿ ಇದ್ದರೆ ಹೇಗೆ. ಈ ಯುವಕ ಭಕ್ತಿಯ ಹೆಸರಲ್ಲಿ ಶಿವನಿಗೆ ಜೀವ ನೀಡಲು ಮುಂದಾಗಿದ್ದಾನೆ. ಆದರೆ, ಈತನನ್ನೇ ನಂಬಿದ ಹೆತ್ತವರಿಗೆ, ಕುಟುಂಬಕ್ಕೆ ಯಾರು ದಿಕ್ಕು. ಈಗಿನ ಕಾಲದಲ್ಲಿ ಶಿವ ಪ್ರತ್ಯಕ್ಷನಾಗಿ ಇವನ ಭಕ್ತಿಗೆ ಮೆಚ್ಚಿ ವರಕೊಡಲು ಸಾಧ್ಯವೇ.. ಗಂಭೀರ ಪರಿಸ್ಥಿತಿಯಲ್ಲಿರುವ ದೀಪಕ್ ಜೀವ ಉಳಿಯುವುದು ಕೂಡಾ ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ.

suddiyaana