ಮೋದಿ ಸೋಲಿಸಲಷ್ಟೇ INDIA..?- ಉಳಿದಲೆಲ್ಲಾ ಛಿದ್ರ ಛಿದ್ರ..!
ಕೈ ಕೊಟ್ಟಿದ್ದೇಕೆ ಉದ್ಧವ್ ಠಾಕ್ರೆ?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಸ್ವತಂತ್ರವಾಗಿ ಸ್ಪರ್ಧೆ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ಪಷ್ಟ ಪಡಿಸಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ INDIA ಮೈತ್ರಿ ಮತ್ತೆ ಛಿದ್ರವಾಗುವ ಲಕ್ಷಣ ಕಾಣುತ್ತಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪರಸ್ಪರ ಎದುರಾಳಿಗಳಾಗಿವೆ. ಇದ್ರ ಜೊತೆ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿ ಹೋಗಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಎಲ್ಲಾ ಅಯೋಮಯ ಆಗಿ ಹೋಗಿದೆ. ಈ ಚುನಾವಣೆ ಇಂಡಿಯಾ ಪೂರ್ತಿ ಸದ್ದು ಮಾಡಿತ್ತು. ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ಮೈತ್ರಿ ಒಕ್ಕೂಟದ ಹೋರಾಟದ ನಡುವೆ ಕೂಡ ಹೀನಾಯ ಸೋಲು ಕಂಡಿತ್ತು ವಿರೋಧ ಪಕ್ಷಗಳ ಓಕ್ಕೂಟ. ಈ ಸೋಲಿನ ಬಳಿಕ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟ ನಡುಗಿ ಹೋಗಿದೆ
2024ರ ಅಂತ್ಯದಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ 288 ಸ್ಥಾನಗಳ ಪೈಕಿ, ಬಿಜೆಪಿ ನೇತೃತ್ವದಲ್ಲಿ ಭರ್ಜರಿ ಬಹುಮತ ಗಳಿಸಿ ಮೈತ್ರಿ ಪಕ್ಷಗಳು ಅಧಿಕಾರ ಹಿಡಿದಿವೆ. ಇದು ಕಾಂಗ್ರೆಸ್, ಶಿವಸೇನೆ & ಎನ್‌ಸಿಪಿ ಮೈತ್ರಿಕೂಟದ ‘ಮಹಾ ವಿಕಾಸ್ ಅಘಾಡಿ’ ಬಿರುಕಿಗೆ ಕಾರಣವಾಗಿರುವ ಸಮಯದಲ್ಲೇ ಶಿವಸೇನೆ ಸ್ಫೋಟಕ ಹೆಜ್ಜೆ ಇಟ್ಟಿದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಮಹಾರಾಷ್ಟ್ರದಲ್ಲಿ ಇದೀಗ ದೊಡ್ಡ ಆಘಾತವೇ ಎದುರಾಗಿದೆ.
‘ಇಂಡಿಯಾ’ ಒಕ್ಕೂಟದಲ್ಲೂ ದೊಡ್ಡ ಬಿರುಕು?
ಅಂದಹಾಗೆ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಶಿವಸೇನೆ ಮಹತ್ವದ ನಿರ್ಧಾರ ಪ್ರಕಟಿಸಿದೆ. ಶಿವಸೇನೆ ಉದ್ಧವ್ ಠಾಕ್ರೆ ಬಣದ ನಿರ್ಧಾರದಂತೆ ಈಗ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ ಬಗ್ಗೆ ಇಂದು ಮಹತ್ವದ ಪ್ರಕಟಣೆ ಹೊರಬಿದ್ದಿದೆ. ಈ ಮೂಲಕ ಮತ್ತೊಮ್ಮೆ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಬಗ್ಗೆ ಕೂಡ ದೊಡ್ಡ ಪ್ರಶ್ನೆ ಮೂಡುವಂತೆ ಆಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ರಾಜಕೀಯದಲ್ಲೂ ಅಲ್ಲೋಲ ಕಲ್ಲೋಲ ಏರ್ಪಡುವ ಮುನ್ಸೂಚನೆ ಸಿಕ್ಕಿದೆ. ಶಿವಸೇನೆ ನಾಯಕರು ಹೇಳಿದ್ದು ಏನು? ಮತ್ತೊಂದು ಕಡೆ ಶಿವಸೇನೆ ಉದ್ಧವ್ ಠಾಕ್ರೆ ಬಣ ಈ ರೀತಿ ಸ್ವತಂತ್ರ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಹಲವು ರೀತಿ ಚರ್ಚೆಗಳು ಶುರುವಾಗಿವೆ.
ಈ ಬಗ್ಗೆ, ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವುತ್ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಸಂಘಟನೆ ಮತ್ತಷ್ಟು ಗಟ್ಟಿ ಆಗಬೇಕಿದ್ದು, ಈ ಹಕ್ಕು ನಮಗೆ ಇರುತ್ತದೆ ಎಂದಿದ್ದಾರೆ ಸಂಜಯ್ ರಾವುತ್.
ಅಲ್ಲದೆ ಮೈತ್ರಿಕೂಟದ ಭಾಗವಾಗಿ ನಾವು ಸ್ಪರ್ಧೆಯನ್ನ ಮಾಡಿದ್ರೆ ನಮ್ಮ ಪಕ್ಷದ ಕಾರ್ಯಕರ್ತರ ಅವಕಾಶಗಳು ಕಮ್ಮಿ ಆಗಲಿವೆ. ಈ ಮೂಲಕ ಗೊಂದಲ ಉಂಟಾಗದ ರೀತಿ ಇಂತಹ ನಿರ್ಧಾರ ಕೈಗೊಂಡು ಮುನ್ನುಗ್ಗಲಿದ್ದೇವೆ ಎಂದಿದ್ದಾರೆ ರಾವುತ್. ಇದು ಶಿವಸೇನೆಯ ಸ್ಪಷ್ಟನೆಯಾಗಿದ್ದು, ಇದರಿಂದ ಹೊಸ ತಲ್ಲಣವೇ ಎದ್ದಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ & ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರ ನಡೆ ಈಗ ಕುತೂಹಲ ಕೆರಳಿಸಿದೆ. ಮತ್ತೊಂದು ಕಡೆ ವಿಪಕ್ಷಗಳ ಒಳಗಿನ ಈ ಬಿರುಕು, ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇನ್ನಷ್ಟು ಪ್ಲಸ್ ಪಾಯಿಂಟ್ ಆಗುವ ನಿರೀಕ್ಷೆ ಕೂಡ ಇದೆ.
ಮೋದಿ ಸೋಲಿಸಲಷ್ಟೇ INDIA..?
ಇನ್ನೂ ಇಂಡಿಯಾ ಕೂಟ ಕೇವಲ ಮೋದಿಯನ್ನ ಸೋಲಿಸೋಕ್ಕೆ ಮಾತ್ರ ಮಾಡಿದ್ದ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಇಂಡಿಯಾ ಕೂಟ ಒಟ್ಟಾಗಿ ಕೇವಲ ಲೋಕಸಭಾ ಎಲೆಕ್ಷನ್‌ನಲ್ಲಿ ಮಾತ್ರ ಒಗ್ಗಟ್ಟನ್ನ ತೋರಿಸುತ್ತಾರೆ. ಆದ್ರೆ ವಿಧಾನಸಭೆ ಆಗಲಿ ಅಥವಾ ಸ್ಥಳೀಯ ಚುನಾವಣೆಯಲ್ಲಿ ಒಗ್ಗಟ್ಟು ಇಲ್ಲ. ಪ್ರತ್ಯೇಕವಾಗಿ ಸ್ವರ್ಧೆ ಮಾಡ್ತಾರೆ.. ಹೀಗಾಗಿ ಇಂಡಿಯಾ ಮೈತ್ರಿಕೂಟ ಕೇವಲ ಮೋದಿಯನ್ನ ಸೋಲಿಸೋಕೆ ಮಾತ್ರನಾ ಅನ್ನೋ ಪ್ರಶ್ನೆ ಎದ್ದಿದೆ.. ಹೀಗಾಗಿ ಎಲ್ಲೋ ಒಂದ್ಕಡೆ ಇದು ಫೆಲ್ಯೂರ್ ಆಗಿ, ಬಿಜೆಪಿಗೆ ಪ್ಲೆಸ್ ಆಗ್ತಾ ಇದ್ಯಾ ಅನ್ನೋ ಪ್ರಶ್ನೆ ಎದ್ದಿದೆ.