ಧರ್ಮನಿಗೆ ಕೈಕೊಟ್ಟ ಐಶ್ – ಶಿಶಿರ್ ಕಿಸ್ ಗೆ ಸುಂದರಿ ಕ್ಲೀನ್ ಬೌಲ್ಡ್
ಬಿಗ್ ಬಾಸ್ ಕನ್ನಡ ಭಾರಿ ಕುತೂಹಲ ಮೂಡಿಸಿದೆ.. ಆರಂಭದಿಂದಲೂ ಬಿಗ್ ಬಾಸ್ ಮನೆ ಭಾರಿ ಚರ್ಚೆಯಲ್ಲಿದೆ.. ಧರ್ಮ ಹಾಗೂ ಐಶ್ವರ್ಯ ಪ್ರೀತಿಯಲ್ಲಿ ಬಿದ್ದಿದ್ದಾರಾ ಅಂತಾ ಚರ್ಚೆ ಹುಟ್ಟಿಕೊಂಡಿತ್ತು.. ಆದ್ರೀಗ ಐಶ್ವರ್ಯ ಬೇರೆ ಸ್ಪರ್ಧಿಯೊಂದಿಗೆ ಕ್ಲೋಸ್ ಆಗಿದ್ದಾರೆ.. ಅವರ ರೊಮ್ಯಾನ್ಸ್ ದೃಶ್ಯ ಈಗ ಭಾರಿ ವೈರಲ್ ಆಗಿದೆ..
ಇದನ್ನೂ ಓದಿ: ದರ್ಶನ್ ಬೆನ್ನು ನೋವಿನಿಂದ ವಿಲವಿಲ.. – ಕೊನೆಗೂ ಸಿಕ್ತು ಬಿಗ್ ರಿಲೀಫ್
ಐಶ್ವರ್ಯಾ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದಾಗ ಮೊದಲು ಧರ್ಮ ಜೊತೆ ಕ್ಲೋಸ್ ಆಗೋಕೆ ಬಯಿಸಿದ್ದರು. ಆದರೆ, ಇದಕ್ಕೆ ಅನುಷಾ ರೈ ಅವಕಾಶ ನೀಡಿರಲಿಲ್ಲ. ಹೀಗಿರುವಾಗಲೇ ಶಿಶಿರ್ ಹಾಗೂ ಐಶ್ವರ್ಯಾ ಕ್ಲೋಸ್ ಆಗಿದ್ದಾರೆ. ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್ಶೀಟ್ ಹೊತ್ತು ಕುಳಿತಿದ್ದಾರೆ. ಐಶ್ವರ್ಯಾ ಅವರ ಕೈಯಲ್ಲಿ ಕಪ್ ಇತ್ತು. ಅದರಲ್ಲಿ ಇದ್ದ ಬಿಸಿ ಕಾಫಿಯನ್ನು ಒಬ್ಬರಾದ ಬಳಿಕ ಒಬ್ಬರು ಹೀರಿದ್ದಾರೆ. ಅಕ್ಟೋಬರ್ 18ರ ಎಪಿಸೋಡ್ನಲ್ಲಿ ಈ ದೃಶ್ಯಗಳು ಹೈಲೈಟ್ ಆಗಿದೆ.
ಐಶ್ವರ್ಯಾ ಅವರಿಗೆ ಶಿಶಿರ್ ಅಂತರ ಇಟ್ಟುಕೊಂಡು ಕಿಸ್ ಕೊಟ್ಟಿದ್ದಾರೆ. ಇದರಿಂದ ಇವರು ಕ್ಲೋಸ್ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ರಿಯಲ್ ಲೈಫ್ನಲ್ಲಿ ಸಿಂಗಲ್ ಆಗಿದ್ದಾರೆ. ಹೀಗಾಗಿ, ಬಿಗ್ ಬಾಸ್ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಹೈಲೈಟ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವೊಮ್ಮೆ ಲವ್ ನಾಟಕ ಆಡೋದು ಇದೆ. ‘ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿರೋದು ಈಗ ಅಂಥದ್ದೇ ಪ್ರೀತಿಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.