ಶಿಶಿರ್- ಐಶ್ವರ್ಯಾ ಪ್ರೀತಿಗೆ ನಿಶ್ಚಿತಾರ್ಥದ ಸಂಭ್ರಮ – ಶೀಘ್ರದಲ್ಲೇ ಮದುವೆ ಎಂದ ಪ್ರೇಮ ಪಕ್ಷಿಗಳು

ಶಿಶಿರ್- ಐಶ್ವರ್ಯಾ ಪ್ರೀತಿಗೆ ನಿಶ್ಚಿತಾರ್ಥದ ಸಂಭ್ರಮ – ಶೀಘ್ರದಲ್ಲೇ ಮದುವೆ ಎಂದ ಪ್ರೇಮ ಪಕ್ಷಿಗಳು

ಬಿಗ್‌ಬಾಸ್ ಖ್ಯಾತಿಯ ಜೋಡಿ ಶಿಶಿರ್ ಶಾಸ್ತ್ರಿ – ಐಶ್ವರ್ಯಾ ಶಿಂಧೋಗಿ ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಪ್ರೀತಿ ವಿಷಯ ರಿವೀಲ್ ಮಾಡಿದ ಈ ಜೋಡಿ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಈ ವಾರ ಶಾಸ್ತ್ರಿ ಹೊರ ಹೋಗೋದು ಗ್ಯಾರಂಟಿ – ಕಿರಣ್ ಈ ಮಟ್ಟಕ್ಕೆ ಇಳಿಯಬಾರದಿತ್ತು..!

ಬಿಗ್‌ಬಾಸ್ ಮನೆಯಲ್ಲಿ ಜೊತೆಯಾಗಿದ್ದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಶಿಂಧೋಗಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಬಿಗ್‌ಬಾಸ್ ಶೋ ಮುಗಿದ ಮೇಲೂ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಇವರಿಬ್ಬರ ನಡುವೆ ಪ್ರೀತಿನಾ, ಸ್ನೇಹನಾ ಏನಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳು ಕೇಳಿಬಂದಿದಿತ್ತು. ಕೊನೆಗೂ ಈ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ತಮ್ಮ ನಡುವಿನ ಪ್ರೀತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಕಿರುತೆರೆಯ ಈ ಸೆಲೆಬ್ರಿಟಿ ಜೋಡಿ, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇಬ್ಬರ ಕುಟುಂಬದ ಹಿರಿಯರು ಹಾಗೂ ಆಪ್ತ ಗೆಳೆಯರ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದೆ.

ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಈ ಜೋಡಿ, ಜನರು ನಮ್ಮನ್ನ ಅಣ್ಣ-ತಂಗಿ, ಲವರ್ಸ್, ಫ್ರೆಂಡ್ಸ್ ಅಥವಾ ಸಿಚುಯೇಷನ್‌ಶಿಪ್‌ನಲ್ಲಿದ್ದಾರೆ ಎಂದುಕೊಂಡಿದ್ದರು. ಆದರೆ, ನಾವು ಯಾವುದೇ ಶಿಪ್‌ನಲ್ಲಿ ಇಲ್ಲ, ಬದಲಾಗಿ ಜೀವನ ಎಂಬ ಶಿಪ್ ಅನ್ನು ಒಟ್ಟಿಗೆ ಏರುತ್ತಿದ್ದೇವೆ. ಇನ್ಮುಂದೆ ಈ ‘AISHIR’ ಬರಿ ಹ್ಯಾಶ್‌ಟ್ಯಾಗ್ ಅಷ್ಟೇ ಅಲ್ಲ. ನಾವಿಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದೇವೆ.. ಎಂದು ಸ್ಪಷ್ಟಪಡಿಸಿದ್ದಾರೆ. ಶಿಶಿರ್‌ ಸದ್ಯ ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಐಶ್ವರ್ಯ ಕೂಡಾ ತಮ್ಮದೇ ಆದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

Sulekha

Leave a Reply

Your email address will not be published. Required fields are marked *