ಹಾಟ್ ​ಲುಕ್​ನಲ್ಲಿ ಕರಾವಳಿ ಬೆಡಗಿ – ಕಪ್ಪು ಬಣ್ಣದ ಕಾಸ್ಟ್ಯೂಮ್  ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ

ಹಾಟ್ ​ಲುಕ್​ನಲ್ಲಿ ಕರಾವಳಿ ಬೆಡಗಿ – ಕಪ್ಪು ಬಣ್ಣದ ಕಾಸ್ಟ್ಯೂಮ್  ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಲವು ದಶಕಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ.  ಚಿತ್ರರಂಗದಲ್ಲಿ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ಇದೀಗ ಕರಾವಳಿ ಬೆಡಗಿ ಕಪ್ಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ.

ಹೌದು, ನಟಿ ಶಿಲ್ಪಾ ಶೆಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ.  ಸದಾ ಫೋಟೋ ಶೂಟ್‌ ಮಾಡಿಸಿಕೊಂಡು ಪೋಸ್ಟ್‌ ಮಾಡುತ್ತಿರುತ್ತಾರೆ. ಈ ಶಿಲ್ಪಾ ಶೆಟ್ಟಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲೂ ಕಪ್ಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಸಿಕೊಂಡಿದ್ದಾರೆ. ಅವರು ಹಾಕಿದ ಕಾಸ್ಟ್ಯೂಮ್ ಡಿಸೈನ್ ಹೊಸ ರೀತಿಯದ್ದಿದೆ.

ಇದನ್ನೂ ಓದಿ:ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ! – ಜೆಡಿಎಸ್‌ ಲೆಕ್ಕಾಚಾರ ಏನು? 

ನೋಡಲು ಒನ್ ಪೀಸ್ ತರಹದ ಡ್ರೆಸ್ ನಲ್ಲಿ ಕಾಣಿಸುತ್ತಿರುವ ಬಟ್ಟೆಯಾದರೂ ವಿಭಿನ್ನ ಸ್ಟೈಲ್ ನಲ್ಲಿದೆ. ಡ್ರೆಸ್ ಮೇಲೆ ಕ್ರಾಪ್ ಟಾಪ್ ಹಾಗೆ ಅದರ ಮುಂದುವರಿದ ಭಾಗವಾಗಿ ಕೆಳಗೆ ಉದ್ದನೆಯ ಲೆಂತೀ ಸ್ಕರ್ಟ್ ಹಾಕಿದ ರೀತಿಯಲ್ಲಿ ಕಾಣಿಸುತ್ತದೆ. ಬ್ಲ್ಯಾಕ್ ಡ್ರೆಸ್ ಗೆ ಮ್ಯಾಚ್‌ ಆಗುವಂತೆ ಚಿಕ್ಕದಾದ ರೌಂಡೆಡ್ ಇಯರಿಂಗ್ ಅನ್ನು ಶಿಲ್ಪಾ ಶೆಟ್ಟಿ ಹಾಕಿಕೊಂಡಿದ್ದಾರೆ.

ರವಿಚಂದ್ರನ್ ಜೊತೆ ಶಿಲ್ಪಾ ಶೆಟ್ಟಿ ನಟಿಸಿದಾಗಿಂದ ಒಂದು ರೀತಿಯಲ್ಲಿ ಅವರು ಕನ್ನಡದ ನಟಿಯೇ ಆಗಿದ್ದಾರೆ. ಆಗಾಗ ಕನ್ನಡದ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ಕನ್ನಡದ ಚಿತ್ರಗಳಲ್ಲಿ ನಟಿಸುತ್ತಾ ತಾವೂ ಕನ್ನಡತಿ ಎನ್ನುವುದನ್ನು ಪದೇ ಪದೇ ಸಾಬೀತು ಪಡಿಸುತ್ತಾರೆ.  ಇತ್ತೀಚೆಗಷ್ಟೇ ‘ಕೆಡಿ’ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿಗೆ ಬಂದಿಳಿದಿದ್ದರು. ಮೈಸೂರು ಸುಪ್ರಸಿದ್ಧ ಮೈಸೂರು ಪಾಕ್ ಅನ್ನು ಶಿಲ್ಪಾ ಸವಿದಿದ್ದರು. ಆ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲೂ ಹಂಚಿಕೊಂಡು ಮೈಸೂರು ಪಾಕ್ ಬಗ್ಗೆ ಮತ್ತಷ್ಟು ಜನರಿಗೆ ತಿಳಿಯುವಂತೆ ಮಾಡಿದ್ದರು.

ಕೆವಿಎನ್‌ ನಿರ್ಮಾಣದ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಷನ್ ಸಿನಿಮಾ ನಾನಾ ಕಾರಣಗಳಿಂದಾಗಿ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ರವಿಚಂದ್ರನ್ ಕೂಡ ಇದ್ದಾರೆ.

ಈ ನಡುವೆ ಶಿಲ್ಪಾ ಶೆಟ್ಟಿ ಕಿರುತೆರೆ ಶೋಗಳಲ್ಲಿ ಅತಿಥಿಯಾಗಿ, ಜಡ್ಜ್ ಆಗಿ ಭಾಗಿ ಆಗುತ್ತಿದ್ದಾರೆ. ಅದರಲ್ಲೂ ಡಾನ್ಸ್ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಇವರು ಖಾಯಂ ಅತಿಥಿ. ವೇದಿಕೆಯ ಮೇಲೆ ಬಳುಕು ಬಳ್ಳಿಯಂತೆ ಡಾನ್ಸ್ ಮಾಡುವುದನ್ನು ನೋಡುವುದೇ ಚಂದ.

Shwetha M