ಗಳಗಳನೇ ಕಣ್ಣೀರಿಟ್ಟ ಶಿಲ್ಪಾ ಶೆಟ್ಟರ್..! – ಪತ್ನಿಯನ್ನು ಎದೆಗೊರಗಿಸಿಕೊಂಡು ಭಾವುಕರಾದ ಜಗದೀಶ್ ಶೆಟ್ಟರ್..!

ಗಳಗಳನೇ ಕಣ್ಣೀರಿಟ್ಟ ಶಿಲ್ಪಾ ಶೆಟ್ಟರ್..! – ಪತ್ನಿಯನ್ನು ಎದೆಗೊರಗಿಸಿಕೊಂಡು ಭಾವುಕರಾದ ಜಗದೀಶ್ ಶೆಟ್ಟರ್..!

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಗಳಗಳನೆ ಕಣ್ಣೀರು ಸುರಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ತಮ್ಮ ಮನೆಗೆ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಈ ವೇಳೆ ಪತಿಯ ಸ್ವಾಗತಕ್ಕೆ ನಿಂತಿರುವ ಶಿಲ್ಪಾ ಶೆಟ್ಟರ್, ಭಾವುಕರಾದರು. ಜಗದೀಶ್ ಶೆಟ್ಟರ್ ಹತ್ತಿರ ಬರುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರನ್ನು ನೋಡಿ ಜಗದೀಶ್ ಶೆಟ್ಟರ್ ಕೂಡಾ ಭಾವುಕರಾದರು.

ಇದನ್ನೂ ಓದಿ:  ಸರಳ, ಸಜ್ಜನಿಕೆಯ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ – ‘ಕೈ’ ಸೇರ್ಪಡೆ ಹಿಂದಿನ ಲೆಕ್ಕಾಚಾರಗಳೇನು?

ನಿನ್ನೆಯಷ್ಟೇ ಜಗದೀಶ್ ಶೆಟ್ಟರ್ ತಮ್ಮ ಶಾಸಕತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಏಪ್ರಿಲ್ 17ರಂದು ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದಾದ ಬಳಿಕ ಹುಬ್ಬಳ್ಳಿಯಲ್ಲಿರುವ ತಮ್ಮ ಮನೆಗೆ ಆಗಮಿಸಿದರು. ಈ ವೇಳೆ ಅವರ ಸ್ವಾಗತಕ್ಕೆ ನಿಂತಿದ್ದ ಪತ್ನಿ ಶಿಲ್ಪಾ ಶೆಟ್ಟರ್ ಪತಿಯನ್ನು ನೋಡಿ ಭಾವುಕರಾದರು. ಪತಿ ಹತ್ತಿರ ಬರುತ್ತಿದ್ದಂತೆ ಗಳಗಳನೆ ಕಣ್ಣೀರು ಹಾಕಿದ್ರು. ಆಗ ಪತ್ನಿಯನ್ನು ಎದೆಗೆ ಒರಗಿಸಿಕೊಂಡ ಶೆಟ್ಟರ್, ಸಮಾಧಾನ ಮಾಡುತ್ತಲೇ ತಾವೂ ಭಾವುಕರಾದರು. ಈ ವೇಳೆ ಅಲ್ಲಿದ್ದವರು ಶೆಟ್ಟರ್ ದಂಪತಿಯನ್ನು ಸಮಾಧಾನ ಮಾಡಿದ್ರು. ಜೊತೆಯಲ್ಲಿದ್ದ ಮಹಿಳೆಯರು ಕೂಡಾ ಶಿಲ್ಪಾ ಶೆಟ್ಟರ್ ಅವರನ್ನು ಸಂತೈಸಿದರು.

ಈ ವೇಳೆ ಮಾತನಾಡಿದ ಶಿಲ್ಪಾ ಶೆಟ್ಟರ್, ನನ್ನ ಗಂಡ ಸೋಲರಿಯದ ಸರದಾರ, ನನ್ನ ಗಂಡನನ್ನ ಸೋಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಗಂಡ ಬಿಜೆಪಿಗೆ ಬಂದಾಗ ಅದು ಬರಡು ಭೂಮಿಯಾಗಿತ್ತು. ಖಾಲಿ ಜಾಗದಲ್ಲಿ ಮನೆ ಕಟ್ಟೋ ಕೆಲಸ ಅವರು ಮಾಡಿದ್ರು. ಒಂದೊಂದು ಇಟ್ಟಿಗೆಯನ್ನೂ ಜೋಡಿಸಿ ಮನೆ ಕಟ್ಟಿದರು. ಆದ್ರೆ ಇದೀಗ ಆ ಮನೆಯಿಂದ್ಲೇ ಹೊರ ಹೋಗುವಂತೆ ಕೆಲವರು ಮಾಡಿದ್ರು ಅಂತ ಭಾವುಕರಾಗಿ ನುಡಿದರು.

suddiyaana