ಎರಡನೇ ಮದುವೆಗೆ ರೆಡಿಯಾದ ಗಬ್ಬರ್ – ಸೋಫಿ ಶೈನ್ ಜೊತೆ ಶಿಖರ್ ಧವನ್ ವಿವಾಹ

ಎರಡನೇ ಮದುವೆಗೆ ರೆಡಿಯಾದ ಗಬ್ಬರ್ – ಸೋಫಿ ಶೈನ್ ಜೊತೆ ಶಿಖರ್ ಧವನ್ ವಿವಾಹ

ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಶಿಖರ್ ಧವನ್ ತನ್ನ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡುವ ಉತ್ಸಾಹದಲ್ಲಿದ್ದಾರೆ. ಗಬ್ಬರ್ ಎಂದೇ ಫೇಮಸ್ ಆಗಿರುವ ಶಿಖರ್ ಧವನ್ ಎರಡನೇ ಬಾರಿ ಹಸೆಮಣೆ ಏರಲಿದ್ದಾರೆ. ತಮ್ಮ ಗೆಳತಿ ಸೋಫಿ ಶೈನ್ ಅವರನ್ನು ಮದುವೆಯಾಗಲಿದ್ದಾರೆ.

ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ರವೀಂದ್ರ ಜಡೇಜಾ – ಜಡ್ಡುಗೆ ಪಟ್ಟ ಕಟ್ಟಲು RR ತಯಾರಿ

ಭಾರತದ ಮಾಜಿ ಕ್ರಿಕೆಟರ್ ಶಿಖರ್ ಧವನ್ ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ತನ್ನ ಗೆಳತಿ ಸೋಫಿ ಶೈನ್ ಅವರ ಜೊತೆ ಶಿಖರ್ ಧವನ್ ಹಸೆಮಣೆ ಏರಲಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಫೆಬ್ರವರಿ ಮೂರನೇ ವಾರದಲ್ಲಿ ಶಿಖರ್ ಧವನ್ ಮತ್ತು ಸೋಫಿ ಶೈನ್ ಅವರ ವಿವಾಹ ಸಮಾರಂಭ ನಡೆಯಲಿದೆ.

ಸೋಫಿ ಶೈನ್ ಮೂಲತಃ ಐರ್ಲೆಂಡ್‌ನವರು. ಅವರು ಶಿಖರ್ ಅವರ ವೈಯಕ್ತಿಕ ಜೀವನದ ಭಾಗ ಮಾತ್ರವಲ್ಲ, ಅವರ ವೃತ್ತಿಪರ ಪ್ರಯತ್ನಗಳಲ್ಲಿಯೂ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಸೋಫಿ ಪ್ರಸ್ತುತ ಧವನ್ ಅವರ ಡಾ ಒನ್ ಸ್ಪೋರ್ಟ್ಸ್ ಗುಂಪಿನ ದತ್ತಿ ವಿಭಾಗವಾದ ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಶಿಖರ್ ಮತ್ತು ಸೋಫಿಯ ಪ್ರೇಮಕಥೆ ಶುರುವಾಗಿದ್ದು ದುಬೈನಲ್ಲಿ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸಮಯದಲ್ಲಿ ಸೋಫಿ ಮೊದಲು ಸಾರ್ವಜನಿಕವಾಗಿ ಶಿಖರ್ ಜೊತೆ ಕಾಣಿಸಿಕೊಂಡರು. ಇದು ಅವರ ಸಂಬಂಧದ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ಪಂಜಾಬ್ ಕಿಂಗ್ಸ್ ಪರ ಐಪಿಎಲ್ 2024 ಪಂದ್ಯಗಳನ್ನು ವೀಕ್ಷಿಸಲು ಸೋಫಿ ಮೈದಾನಕ್ಕೆ ಆಗಮಿಸುತ್ತಿದ್ದರು. ಶಿಖರ್ ಅವರಿಗೆ ಬೆಂಬಲ ನೀಡುತ್ತಿದ್ದರು.

ಈ ಹಿಂದೆ  ಶಿಖರ್ ಧವನ್ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ಈ ಜೋಡಿ 2023 ರಲ್ಲಿ ವಿಚ್ಛೇದನ ಪಡೆದರು. ಕಳೆದ ಕೆಲವು ವರ್ಷಗಳಿಂದ ವೈಯಕ್ತಿಕ ಸವಾಲುಗಳನ್ನು ಎದುರಿಸಿದ ನಂತರ, ಶಿಖರ್ ಈಗ ಸೋಫಿಯೊಂದಿಗೆ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

Sulekha