ಏಷ್ಯನ್ ಗೇಮ್ಸ್ಗೆ ತಂಡದಲ್ಲಿ ಸಿಗದ ಅವಕಾಶ – ಮೊದಲ ಬಾರಿ ಮೌನ ಮುರಿದ ಶಿಖರ್ ಧವನ್..!
ಏಷ್ಯನ್ ಗೇಮ್ಸ್ ತಂಡದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದ ಶಿಖರ್ ಧವನ್ ನಿರಾಶೆ ಅನುಭವಿಸಿದ್ದಾರೆ. ಈ ವಿಚಾರದ ಬಗ್ಗೆ ಕೊನೆಗೂ ಶಿಖರ್ ಧವನ್ ಮೌನ ಮುರಿದಿದ್ದಾರೆ. ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ 15 ಸದಸ್ಯರ ಟೀಂ ಇಂಡಿಯಾವನ್ನು ಜುಲೈ 14 ರಂದು ಬಿಸಿಸಿಐ ಪ್ರಕಟಿಸಿತ್ತು. ಆದರೆ, ಟೀಮ್ನಲ್ಲಿ ಶಿಖರ್ ಧವನ್ ಹೆಸರು ಇರಲಿಲ್ಲ.
ಇದನ್ನೂ ಓದಿ: ಅಪಘಾತದ ಬಳಿಕ ಸತತ ಅಭ್ಯಾಸದಲ್ಲಿ ನಿರತರಾದ ರಿಷಭ್ – ವೇಗದ ಬಾಲ್ಗೆ ಪಂತ್ ಬ್ಯಾಟಿಂಗ್
ತಿಂಗಳುಗಳ ಅಂತರದಲ್ಲಿ ಏಷ್ಯಾಕಪ್ ಹಾಗೂ ವಿಶ್ವಕಪ್ ನಡೆಯುವುದರಿಂದ ಭಾರತ ಬಿ ತಂಡವನ್ನು ಏಷ್ಯನ್ ಗೇಮ್ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿತ್ತು. ಅದರಂತೆ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಗೆ ತಂಡದ ನಾಯಕತ್ವ ನೀಡಲಾಗಿದೆ. ಹಾಗೆಯೇ ತಂಡದಲ್ಲಿ ಹಲವು ಯುವ ಆಟಗಾರರೂ ಆಯ್ಕೆಯಾಗಿದ್ದಾರೆ. ಆದರೆ ಏಷ್ಯನ್ ಗೇಮ್ ತಂಡದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಅನುಭವಿ ಶಿಖರ್ ಧವನ್ ಇದ್ದರು. ಇದೀಗ ತಂಡದಲ್ಲಿ ಆಯ್ಕೆಯಾಗದಿರುವ ಬಗ್ಗೆ ಮೊದಲ ಬಾರಿಗೆ ಶಿಖರ್ ಧವನ್ ಮೌನ ಮುರಿದಿದ್ದಾರೆ. ವಾಸ್ತವವಾಗಿ ಏಷ್ಯನ್ ಗೇಮ್ಸ್ಗೆ ತಂಡವನ್ನು ಪ್ರಕಟಿಸುವ ಮುನ್ನ ಈ ಪಂದ್ಯಾವಳಿಗೆ ಟೀಂ ಇಂಡಿಯಾದ ನಾಯಕತ್ವವನ್ನು ಶಿಖರ್ ಧವನ್ಗೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ರುತುರಾಜ್ಗೆ ಆದ್ಯತೆ ನೀಡಿದೆ. ಇದೀಗ ಆ ಬಗ್ಗೆ ಮಾತನಾಡಿರುವ ಧವನ್, ಏಷ್ಯನ್ ಕ್ರೀಡಾಕೂಟಕ್ಕೆ ತಂಡದಲ್ಲಿ ಆಯ್ಕೆಯಾಗದಿರುವುದು ಆಘಾತ ತಂದಿದೆ. ಆದರೆ, ನಾನು ಬಲಿಷ್ಠ ಪುನರಾಗಮನ ಮಾಡುವ ವಿಶ್ವಾಸವಿದೆ ಎಂದಿದ್ದಾರೆ. ಏಷ್ಯನ್ ಗೇಮ್ಸ್ಗೆ ನಾನು ಆಯ್ಕೆಯಾಗದಿದ್ದಾಗ ಆಘಾತವಾಯಿತು. ಆದರೆ ಆಯ್ಕೆ ಸಮಿತಿಯು ವಿಭಿನ್ನ ಆಟದ ಯೋಜನೆಯನ್ನು ಹೊಂದಿದ್ದರೆ, ಅದನ್ನು ನಾವು ಒಪ್ಪಿಕೊಳ್ಳಬೇಕು. ರುತುರಾಜ್ ಗಾಯಕ್ವಾಡ್ ಟೀಂ ಇಂಡಿಯಾ ನಾಯಕತ್ವ ವಹಿಸಿರುವುದು ಸಂತಸ ತಂದಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಹಲವು ಯುವಕರು ಆಡಲಿದ್ದಾರೆ. ಈ ಹೊಸ ಹುಡುಗರು ಖಂಡಿತವಾಗಿಯೂ ಅಬ್ಬರದ ಪ್ರದರ್ಶನ ನೀಡುತ್ತಾರೆ,” ಎಂದು ಧವನ್ ಹೇಳಿಕೊಂಡಿದ್ದಾರೆ. “ನಾನು ಪುನರಾಗಮನಕ್ಕೆ ಸಂಪೂರ್ಣವಾಗಿ ಸಿದ್ಧನಿದ್ದೇನೆ. ಪುನರಾಗಮನ ಮಾಡಲು ನಾನು ನನ್ನನ್ನು ಫಿಟ್ ಆಗಿ ಇಡಲು ಶ್ರಮಿಸುತ್ತೆದ್ದೇನೆ. ಪುನರಾಗಮನಕ್ಕೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಸಿದ್ಧ,” ಎಂದು ಗಬ್ಬರ್ ಹೇಳಿದ್ದಾರೆ.