ಶಿಖರ್ ವೃತ್ತಿಬದುಕಿಗೆ ಎದುರಾಯ್ತಾ ಸಂಕಷ್ಟ ? – ಧವನ್ ಸ್ಥಾನಕ್ಕೆ ಹೊಡೆತ ಕೊಟ್ರಾ ಗಿಲ್ ?

ಶಿಖರ್ ವೃತ್ತಿಬದುಕಿಗೆ ಎದುರಾಯ್ತಾ ಸಂಕಷ್ಟ ? – ಧವನ್ ಸ್ಥಾನಕ್ಕೆ ಹೊಡೆತ ಕೊಟ್ರಾ ಗಿಲ್ ?

ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್‌ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಏಕದಿನ ವಿಶ್ವಕಪ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಬೆಳವಣಿಗೆಯಿಂದಾಗಿ ಟೀಮ್ ಇಂಡಿಯಾದ ಮತ್ತೊಬ್ಬ ಆರಂಭಿಕ ಆಟಗಾರನಾಗಿ ಮೆರೆದಿದ್ದ ಶಿಖರ್ ಧವನ್ ತಂಡದಿಂದ ಸ್ಥಾನ ಕಳೆದುಕೊಳ್ಳುತ್ತಾರಾ ಅನ್ನೋ ಅನುಮಾನ ಮೂಡಿದೆ. ಸುಮಾರು ಒಂದು ದಶಕದ ಕಾಲ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಭಾರತದ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರಾಗಿದ್ದ ಧವನ್ ಅವರನ್ನು ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸದಲ್ಲಿ ಏಕದಿನ ಸರಣಿಯಿಂದ ಕೈಬಿಡಲಾಗಿತ್ತು. ಹೀಗಿದ್ದರೂ ಕೂಡಾ ಏಕದಿನ ವಿಶ್ವಕಪ್ ಆಡುವುದು ನನ್ನ ಮಹಾಕನಸು ಎಂದು ಶಿಖರ್ ಧವನ್ ಹೇಳಿಕೊಂಡಿದ್ದರು. ಆದರೆ ಇದೀಗ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಉತ್ತಮ ಜೊತೆಯಾಟ ಆಡುತ್ತಿರುವ ಗಿಲ್, ಶತಕಗಳ ಮೇಲೆ ಶತಕ ಸಿಡಿಸುತ್ತಿದ್ದಾರೆ. ಹೀಗಾಗಿ ಗಿಲ್, ಧವನ್ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇತ್ತ ಕಳಪೆ ಫಾರ್ಮ್​ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಧವನ್ ಮತ್ತೆ ತಂಡಕ್ಕೆ ಎಂಟ್ರಿಕೊಡುವುದೇ ಅನುಮಾನವೇ ಎನ್ನಲಾಗುತ್ತಿದೆ.

ಇದನ್ನೂ ಓದಿ:  ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ – ದ್ವಿಶತಕ ಸಿಡಿಸಿ ಶುಭ್ ಮನ್ ಗಿಲ್ ದಾಖಲೆ!

2023ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಏಕದಿನ ವಿಶ್ವಕಪ್ ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಟೀಂ ಇಂಡಿಯಾ (Team India) ಕೂಡ ಈ ವರ್ಷ ಆಡಿರುವ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ವಿಶೇಷವಾಗಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್‌ (Shubman Gill) ಅದ್ಭುತ ಪ್ರದರ್ಶನದೊಂದಿಗೆ ಏಕದಿನ ವಿಶ್ವಕಪ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಲಂಕಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಗಿಲ್, ಕಿವೀಸ್ ವಿರುದ್ಧ ಆರಂಭವಾಗಿರುವ ಏಕದಿನ ಸರಣಿಯಲ್ಲಿ ದಾಖಲೆಯ ದ್ವಿಶತಕ ಸಿಡಿಸುವುದರೊಂದಿಗೆ ಆರಂಭಿಕ ಸ್ಥಾನಕ್ಕೆ ನಾನೇ ಸೂಕ್ತ ಅನ್ನೋದನ್ನು ಸಾಬೀತು ಪಡಿಸುತ್ತಿದ್ದಾರೆ. ಗಿಲ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಷ್ಟೂ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ವೃತ್ತಿ ಜೀವನಕ್ಕೆ ಹೊಡೆತ ಬೀಳುತ್ತಿದೆ ಎನ್ನಲಾಗುತ್ತಿದೆ.

suddiyaana