“ನಿಮ್ಮ ಕೆಲಸದ ಅವಧಿ ಮುಗಿದಿದೆ, ದಯವಿಟ್ಟು ಮನೆಗೆ ಹೋಗಿ” – ಉದ್ಯೋಗಿಗಳಿಗೆ ಕಂಪನಿ ಹೀಗೇಕೆ ಹೇಳಿದ್ದು?

“ನಿಮ್ಮ ಕೆಲಸದ ಅವಧಿ ಮುಗಿದಿದೆ, ದಯವಿಟ್ಟು ಮನೆಗೆ ಹೋಗಿ” – ಉದ್ಯೋಗಿಗಳಿಗೆ ಕಂಪನಿ ಹೀಗೇಕೆ ಹೇಳಿದ್ದು?

ಭೋಪಾಲ್‌: ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಇವೆರಡನ್ನು ಸರಿದೂಗಿಸಿಕೊಂಡು ಹೋಗಲು ಅನೇಕರು ಸೋಲುತ್ತಾರೆ. ಕೊರೊನಾ ನಂತರವಂತೂ ಇದು ಇನ್ನಷ್ಟು ಹದಗೆಟ್ಟಿದೆ. ಕೆಲ ಕಚೇರಿಗಳಲ್ಲಿ ಉದ್ಯೋಗಿಗಳ ವಜಾದಿಂದಾಗಿ ಪ್ರಸ್ತುತ ಇರುವ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ.  ಇದರಿಂದಾಗಿ ಆಫೀಸಿನಲ್ಲೇ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ವೈಯಕ್ತಿಕ ಬದುಕಿಗೆ ಸಮಯಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯೋಗಿಗಳು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುವಂತೆ ಮಧ್ಯಪ್ರದೇಶ ಕಂಪನಿಯೊಂದು ವಿಶೇಷ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ.

ಇದನ್ನೂ ಓದಿ: ಬೋಳುತಲೆ ಅಂತಾ ಕೆಲಸದಿಂದ ವಜಾಗೊಳಿಸಿದ ಬಾಸ್ – ಉದ್ಯೋಗಿ ಮಾಡಿದ್ದೇನು ಗೊತ್ತಾ?

ಮಧ್ಯಪ್ರದೇಶದ ಐಟಿ ಕಂಪನಿ “ಸಾಫ್ಟ್  ಗ್ರಿಡ್‌’ ಕೆಲವು ವಿಶೇಷ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಕಂಪನಿಯು ಉದ್ಯೋಗಿಗಳು ಬಳಸುವ ಕಂಪ್ಯೂಟರ್‌ಗಳಲ್ಲಿ ವಿಶೇಷ ಸಾಫ್ಟ್ವೇರ್‌ ಅಳವಡಿಸಲಾಗಿದ್ಯಂತೆ. ಒಮ್ಮೆ ಶಿಫ್ಟ್ ಸಮಯ ಪೂರ್ಣಗೊಳ್ಳುತ್ತಿದ್ದಂತೆ ಕಂಪ್ಯೂಟರ್‌ ಸ್ವಯಂಚಾಲಿತವಾಗಿ ಶಟ್‌ ಡೌನ್‌ ಆಗಲಿದೆ. ಶಟ್‌ ಡೌನ್‌ ಆಗಲು 10 ನಿಮಿಷಗಳ ಮುನ್ನ ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ನೆನಪಿನ ಸಂದೇಶ ಮೂಡುತ್ತದೆ. ಅದರಲ್ಲಿ “ನಿಮ್ಮ ಕೆಲಸದ ಅವಧಿ ಮುಗಿದಿದೆ. ಇನ್ನು 10 ನಿಮಿಷಗಳಲ್ಲಿ ನಿಮ್ಮ ಸಿಸ್ಟಮ್‌ ಶಟ್‌ ಡೌನ್‌ ಆಗಲಿದೆ. ದಯವಿಟ್ಟು ನೀವು ಮನೆಗೆ ಹೋಗಿ’ ಎಂಬ ಸಂದೇಶ ಬರುತ್ತದೆ.

‘ಸಾಫ್ಟ್  ಗ್ರಿಡ್‌’ಕಂಪನಿ ಈ ಕ್ರಮದ ಜೊತೆಗೆ ಇನ್ನೂ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಉದ್ಯೋಗಿಗಳ ಶಿಫ್ಟ್ ಮುಗಿದ ಮೇಲೆ ಕಚೇರಿ ವಿಚಾರವಾಗಿ ಬಾಸ್ ಉದ್ಯೋಗಿಗಳಿಗೆ ಫೋನ್ ಕಾಲ್, ಇಮೇಲ್, ಮೆಸೇಜ್ ಮಾಡುವಂತಿಲ್ಲ.  ಎಂದು ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ‘ಸಾಫ್ಟ್  ಗ್ರಿಡ್‌’ ಕಂಪ್ಯೂಟರ್ ಹೆಚ್‌ಆರ್‌ ತನ್ವಿ ಖಂಡೇಲ್ವಾಲ್‌, ‘ನಮ್ಮ ಕಂಪನಿ ಉದ್ಯೋಗಿ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ. ಕೊವಿಡ್ ನಂತರ ಕೆಲ ಕಂಪನಿಗಳು ಉದ್ಯೋಗಿಗಳ   ಕೆಲಸದ ಅವಧಿಯನ್ನು ಹೆಚ್ಚಿಸಿದೆ.  ಇದರಿಂದಾಗಿ ಉದ್ಯೋಗಿಗಳ ವೈಯಕ್ತಿಕ ಬದುಕಿಗೆ ಸಮಯಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮ್ಮ ಕಂಪನಿಯಲ್ಲಿ ಇಂತಹ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

suddiyaana