ರಾಹುಲ್‌ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ! – ಆದರೆ ಒಂದು ಕಂಡೀಷನ್‌ ಇದೆ ಎಂದ ಖ್ಯಾತ ನಟಿ!

ರಾಹುಲ್‌ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ! – ಆದರೆ ಒಂದು ಕಂಡೀಷನ್‌ ಇದೆ ಎಂದ ಖ್ಯಾತ ನಟಿ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮದುವೆ ವಿಚಾರ ಆಗಾಗ ಪ್ರಸ್ತಾಪವಾಗುತ್ತಲೇ ಇದೆ. ದೇಶದ ಜನರೂ ಕೂಡ ರಾಹುಲ್‌ ಗಾಂಧಿ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ. ಅಷೇ ಅಲ್ಲದೇ ಅವರು ಯಾರನ್ನು ಮದುವೆ ಆಗುತ್ತಾರೆ ಎಂಬ ಕುತೂಹಲ ಕೂಡ ಎಲ್ಲರಲ್ಲಿ ಇದೆ. ಇದೀಗ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ ಅಂತಾ ಹೇಳಿ ನೀಡಿದ್ದಾರೆ.

ಅಭಿಮಾನಿಗಳು ಮತ್ತು ಪಾಪಾರಾಜಿಗಳ ಜತೆ ಶೆರ್ಲಿನ್​ ಆತ್ಮೀಯ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಒಂದು ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಮದುವೆ ಆಗುವ ಅವಕಾಶ ಸಿಕ್ಕರೆ ಆಗುತ್ತೀರಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿದ ಶೆರ್ಲಿನ್​ ನಾನು ರಾಹುಲ್‌ ಗಾಂಧಿಯನ್ನು ಮದುವೆಯಾಗಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ. ಆದರೆ ಒಂದು ಷರತ್ತನ್ನು ಕೂಡ ಶೆರ್ಲಿನ್‌  ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಸಿದ್ದವಾಯ್ತು ವಿಶೇಷ ಬೀಗ – 400 ಕೆಜಿ ತೂಕ, 10 ಅಡಿ ಎತ್ತರದ ಬೀಗ ತಯಾರಿಸಿದ ದಂಪತಿ!

ವೈರಲ್‌ ಆದ ವಿಡಿಯೋದಲ್ಲಿ, ಹಾಟ್ ಡ್ರೆಸ್ ಮೂಲಕ ಕಾಣಿಸಿಕೊಂಡ ಶೆರ್ಲಿನ್ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನೀವು ರಾಹುಲ್ ಗಾಂಧಿಯನ್ನು ಮದುವೆಯಾಗುವ ಕುರಿತು ಆಲೋಚಿಸುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಈ ವೇಳೆ ನಾನು ರಾಹುಲ್ ಗಾಂಧಿಯನ್ನು ಮದುವೆಯಾಗಲು ರೆಡಿ ಎಂದಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಮದುವೆಯಾದರೂ ನನ್ನ ಸರ್ನೇಮ್ ಬದಲಿಸುವುದಿಲ್ಲ. ಸರ್ನೇಮ್ ಚೋಪ್ರಾ ಇರಲಿದೆ ಎಂದಿದ್ದಾರೆ. ಈ ಹೇಳಿಕೆಗೆ ಇದೀಗ ಭಾರಿ ವೈರಲ್ ಆಗಿದೆ. ಈ ವಿಡಿಯೋ ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಬಳಿ ಈ ಕುರಿತು ಅಭಿಪ್ರಾಯ ಕೇಳಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದ ಹರಿಯಾಣದ ಮಹಿಳೆಯರು ಬಳಿಯ ಮಾತುಕತೆಯಲ್ಲಿ ರಾಹುಲ್ ಗಾಂಧಿ ಮದುವೆ ವಿಚಾರ ಪ್ರಸ್ತಾಪಿಸಿದ್ದರು. ‘ರಾಹುಲ್‌ಗೆ ಮದುವೆ ಮಾಡಿ’ ಎಂದು ಸೋನಿಯಾಗೆ ಕೇಳಿದರು. ಅದಕ್ಕೆ ಸೋನಿಯಾ, ‘ನೀವೇಕೆ ರಾಹುಲ್‌ಗೆ ಸೂಕ್ತವಾದ ಹುಡುಗಿ ಹುಡುಕಬಾರದು? ಹುಡುಕುತ್ತೀರಾ ತಾನೆ?’ ಎಂದು ತಮಾಷೆಯಾಗೇ ಉತ್ತರಿಸಿದರು. ಇದಕ್ಕೆ ರಾಹುಲ್‌ ಅವರು, ‘ಅದು (ಮದುವೆ) ಆಗುತ್ತೆ’ ಎಂದು ಉತ್ತರಿಸಿದ್ದರು.

suddiyaana