ಉ*ಗ್ರರ ಕೈಯಲ್ಲಿ ಬಾಂಗ್ಲಾ ಆಡಳಿತ! ಯೂನಸ್ ಅಧಿಕಾರ ಅಂತ್ಯ!
ಬಾಂಗ್ಲಾಕ್ಕೆ ಹಸೀನಾ ವಾಪಸ್!?

ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖರ್ ಹಸೀನಾ ಮತ್ತೆ ಬಾಂಗ್ಲಾ ದೇಶಕ್ಕೆ ಹೋಗುತ್ತೇನೆ ಅನ್ನೋ ಸಂದೇಶವನ್ನ ಸಾರಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಹಂಗಾಮಿ ಸರ್ಕಾರ, ಶೇಖ್ ಹಸೀನಾ ಅವರ ಹಸ್ತಾಂತರ ಪ್ರಕ್ರಿಯೆ ತಮ್ಮ ಸರ್ಕಾರದ ಪ್ರಾಥಮಿಕ ಆದ್ಯತೆ ಎಂದು ಸೂಚ್ಯವಾಗಿ ಹೇಳಿದೆ.
ಸರ್ಕಾರಿ ಹುದ್ದೆಗಳಲ್ಲಿ ನೀಡುವ ಮೀಸಲಾತಿ ವಿಚಾರವಾಗಿ ವಿದ್ಯಾರ್ಥಿಗಳು ಕಳೆದ ವರ್ಷ ದೊಡ್ಡ ಮಟ್ಟದ ಚಳವಳಿ ನಡೆಸಿದ್ದರು. ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಪೊಲೀಸರು ಮೃತಪಟ್ಟಿದ್ದ ನಾಲ್ವರು ಪೊಲೀಸರ ಪತ್ನಿಯರ ಜೊತೆ ಜೂಮ್ ಮೀಟಿಂಗ್‌ನಲ್ಲಿ ಮಾತನಾಡಿದ ಹಸೀನಾ ಅವರು ದೇಶಕ್ಕೆ ಮರಳುವುದಾಗಿ ಹೇಳಿದ್ದಾರೆ.
ಯೂನಸ್ ಸರ್ಕಾರ ಬಾಂಗ್ಲಾವನ್ನ ನಿರ್ನಾಮ ಮಾಡುತ್ತೆ
ಈ ವೇಳೆ ಮತನಾಡುತ್ತಾ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಹಂಗಾಮಿ ಸರ್ಕಾರವನ್ನು ‘ಮಾಫಿಯಾ ಗುಂಪು’ ಎಂದು ಕರೆದಿರುವ ಶೇಖ್ ಹಸೀನಾ.. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಭಯೋತ್ಪಾದಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.. ಮುಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರ, ಬಾಂಗ್ಲಾದೇಶವನ್ನು ನಿರ್ನಾಮ ಮಾಡಲಿದೆ ಎಂದು ಶೇಖ್ ಹಸೀನಾ ತೀವ್ರವಾಗಿ ಕಿಡಿಕಾರಿದ್ದಾರೆ.
ನಾನು ಬಾಂಗ್ಲಾದ ಜನರನ್ನ ರಕ್ಷಣೆ ಮಾಡುತ್ತೇನೆ
“ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಅವರು ರೂಪಿಸಿದ್ದ ಸೂಕ್ಷ್ಮ ಒಳಸಂಚನ್ನು ಬಾಂಗ್ಲಾದೇಶದ ಜನ ಇದೀಗ ಅರ್ಥ ಮಾಡಿಕೊಂಡಿದ್ದಾರೆ. ನಾನು ನನ್ನ ದೇಶಕ್ಕೆ ಹಿಂತಿರುಗಿ ಈ ಅಮಾನವೀಯ ಸರ್ಕಾರದ ದುರಾಡಳಿತದಿಂದ ನನ್ನ ಜನರನ್ನು ರಕ್ಷಿಸುತ್ತೇನೆ..” ವಿದ್ಯಾರ್ಥಿ ದಂಗೆಯಲ್ಲಿ ಹುತಾತ್ಮರಾದ ಪೊಲೀಸರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ..” ಎಂದು ಶೇಖ್ ಹಸೀನಾ ಇದೇ ವೇಳೆ ವಾಗ್ದಾನ ಮಾಡಿದ್ದಾರೆ.
ಭಯೋತ್ಪದಾಕರ’ ಕೈಯಲ್ಲಿ ಸರ್ಕಾರ ನೀಡಿದ್ದಾರೆ
ದೇಶದ ಎಲ್ಲಾ ತನಿಖಾ ಸಮಿತಿಗಳನ್ನು ಮುಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರ ವಿಸರ್ಜಿಸಿದೆ. ಜನರಿಗೆ ನ್ಯಾಯ ದೊರೆಯುವ ಭರವಸೆಯೇ ಹೊರಟು ಹೋಗಿದೆ. ಜನರನ್ನು ಭಯದಲ್ಲಿ ಇಡಲು ಭಯೋತ್ಪಾದಕರಿಗೆ ಮುಕ್ತ ಅವಕಾಶ ಕಲ್ಪಿಸಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ಭಯೋತ್ಪದಾಕರ’ ಕೈಯಲ್ಲಿ ಸರ್ಕಾರ ನೀಡಿದ್ದಾರೆ. ಯೂನುಸ್ ಒಬ್ಬ ದಂಗೆಕೋರ. ನಾನು ವಾಪಸು ಬರುತ್ತೇನೆ. ಭಯೋತ್ಪಾದಕರು ತುಂಬಿರುವ ಈ ಸರ್ಕಾರವನ್ನು ಉರುಳಿಸುತ್ತೇನೆ’ ಎಂದಿದ್ದಾರೆ. ‘ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ಪ್ರಕರಣದ ಸಂಬಂಧ ರೂಪಿಸಲಾಗಿದ್ದ ಎಲ್ಲ ತನಿಖಾ ಸಮಿತಿಗಳನ್ನು ಯೂನುಸ್ ಸರ್ಕಾರ ರದ್ದು ಮಾಡಿದೆ. ನಾನು ದೇಶದ ಬಿಡುವ ಸಂದರ್ಭದಲ್ಲಿ ನನ್ನ ಹತ್ಯೆಗೆ ಸಂಚು ನಡೆದಿತ್ತು. ದೇವರ ದಯೆ, ನಾನು ಬದುಕಿದ್ದೇನೆ’ ಎಂದಿದ್ದಾರೆ.
ತಮ್ಮ ಅವಾಮಿ ಪಕ್ಷದ ಕಾರ್ಯಕರ್ತರೊಂದಿಗೆ ಹಸೀನಾ ಅವರು ನಿರಂತರವಾಗಿ ಆನ್‌ಲೈನ್ ಮೀಟಿಂಗ್‌ಗಳ ಮೂಲಕ ಸಂಪರ್ಕದಲ್ಲಿ ಇರುತ್ತಾರೆ ಅನ್ನೋ ಬಗ್ಗೆ ಕೂಡ ವರದಿಯಾಗಿದೆ. ಬಾಂಗ್ಲಾದಲ್ಲಿ ಆಗುತ್ತಿರೋ ಬೆಳವಣಿಗೆಗಳ ಬಗ್ಗೆ ಭಾರತದಲ್ಲಿ ಕುಳಿತೇ ಹಸೀನಾ ಮಾಹಿತಿ ಪಡೆಯುತ್ತಿದ್ದಾರೆ. ಬಾಂಗ್ಲಾಕ್ಕೆ ಮತ್ತೆ ಮರಳುವುದಕ್ಕೆ ಒಳ್ಳೆಯ ಸಮಯಕ್ಕೆ ಕಾಯುತ್ತಿದ್ದಾರೆ ಅಷ್ಟೇ..
ಇನ್ನು ಹಸೀನಾ ಅವರ ಹೇಳಿಕೆಗೆ ಮಧ್ಯಂತರ ಸರ್ಕಾರ ಪ್ರತಿಕ್ರಿಯಿಸಿದ್ದು, ‘ಹಸೀನಾ ಅವರನ್ನು ವಾಪಸು ದೇಶಕ್ಕೆ ಕರೆಸಿಕೊಳ್ಳುವುದು ಮತ್ತು ಅವರ ಆಡಳಿತ ಅವಧಿಯಲ್ಲಿ ನಡೆದ ಎಲ್ಲ ಅಪರಾಧಗಳ ಬಗ್ಗೆಯೂ ವಿಚಾರಣೆ ನಡೆಸಿ ಹೊಣೆಗಾರರನ್ನಾಗಿಸಲಾಗುವುದು’ ಎಂದು ಮಧ್ಯಂತರ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಅಲಾಂ ಅವರು ಹೇಳಿದ್ದಾರೆ. ‘ಅವಾಮಿ ಲೀಗ್ ಪಕ್ಷವು ದೇಶದ ರಾಜಕಾರಣದಲ್ಲಿ ಉಳಿಯಬೇಕೇ ಬೇಡವೇ ಎನ್ನುವ ಬಗ್ಗೆ ಇಲ್ಲಿನ ಜನರು ಮತ್ತು ಇತರೆ ಪಕ್ಷಗಳು ನಿರ್ಧಾರ ಮಾಡುತ್ತಾರೆ. ಹತ್ಯೆಗಳಿಗೆ ದೇಶದ ಜನರು ಕಣ್ಮರೆಯಾದ ಪ್ರಕರಣಗಳಲ್ಲಿ ಭಾಗಿಯಾದವರು ವಿಚಾರಣೆಯನ್ನು ಎದುರಿಸಲೇಬೇಕು’ ಎಂದಿದ್ದಾರೆ.
ಒಟ್ನಲ್ಲಿ ಬಾಂಗ್ಲಾದ ಯೂನಸ್ ಸರ್ಕಾರದ ಮೇಲೆ ಶೇಕ್ ಹಸೀನಾ ಕಿಡಿ ಕಾರುತ್ತಿದ್ದಾರೆ.. ಮತ್ತೆ ಶೇಕ್ ಹಸೀನಾ ಬಾಂಗ್ಲಾಕ್ಕೆ ಹೋಗ್ತಾರಾ? ಯೂನಸ್ ಸರ್ಕಾರವನ್ನ ಉರುಳಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ