ಪುನೀತ್ ರಾಜ್ ಕುಮಾರ್ ಜೊತೆ ಹೆಜ್ಜೆ ಹಾಕಿದ್ದ ನಟಿ ಇನ್ನಿಲ್ಲ – ಶೆಫಾಲಿ ಹೃದಯಾಘಾತದಿಂದ ನಿಧನ

ಪುನೀತ್ ರಾಜ್ ಕುಮಾರ್ ಜೊತೆ ಹೆಜ್ಜೆ ಹಾಕಿದ್ದ ನಟಿ ಇನ್ನಿಲ್ಲ – ಶೆಫಾಲಿ ಹೃದಯಾಘಾತದಿಂದ ನಿಧನ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸಿನಿಮಾದ ಹಾಡೊಂದರಲ್ಲಿ ಡ್ಯಾನ್ಸ್‌ ಮಾಡಿದ್ದ ನಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: RCB ವಿಜಯೋತ್ಸವದ ವೇಳೆ ಕಾಲ್ತುಳಿತ – ಮೂವರು IPS ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದರು.

ನಟಿ ಶೆಫಾಲಿ ಪುನೀತ್ ರಾಜ್‌ಕುಮಾರ್ ಜೊತೆ ಹುಡುಗರು ಚಿತ್ರದಲ್ಲಿ ‘ನಾ ಬೋರ್ಡು ಇರದ ಬಸ್ಸನು’ ಹಾಡಿಗೆ ಮಸ್ತ್ ಡ್ಯಾನ್ಸ್‌ ಮಾಡಿದ್ರು. ಹಿಂದಿ ಬಿಗ್ ಬಾಸ್ 13ರಲ್ಲೂ ಶೆಫಾಲಿ ಸ್ಪರ್ಧಿಸಿದ್ರು. ಇದೀಗ ನಟಿ ಬಾರದ ಲೋಕಕ್ಕೆ ತೆರಳಿದ್ದಾರೆ. ಸದ್ಯ ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಕಾಂತಾ ಲಗಾ ಹಾಡಿನ ಮೂಲಕ ನಟಿ ಫೇಮಸ್‌ ಆಗಿದ್ದರು.

Shwetha M