ಮಲಗಿದ್ದ ಗಂಡನನ್ನು 5 ತುಂಡು ಮಾಡಿದಳು – ಕಾಲುವೆ ಬಿಸಾಡಿ ಗಂಡನ ಸ್ನೇಹಿತನ ಮನೆಗೆ ಹೋದಳು..!

ಮಲಗಿದ್ದ ಗಂಡನನ್ನು 5 ತುಂಡು ಮಾಡಿದಳು – ಕಾಲುವೆ ಬಿಸಾಡಿ ಗಂಡನ ಸ್ನೇಹಿತನ ಮನೆಗೆ ಹೋದಳು..!

ಗಂಡನನ್ನು ಪ್ರೀತಿಯಿಂದ, ಜೊತೆಗೆ ಗೌರವದಿಂದ ನೋಡಬೇಕಾದ ಪತ್ನಿಯೊಬ್ಬಳು ತನ್ನ ಕೈಯ್ಯಾರೆ ಭೀಕರವಾಗಿ ಕೊಂದು ಮುಗಿಸಿದ್ದಾಳೆ. ಗಂಡ ಮಲಗಿ ನಿದ್ದೆ ಮಾಡುವಾಗ ಪಾಪಿ ಪತ್ನಿ ಆತನ ಜೀವಕ್ಕೆ ಕಂಟಕವಾಗಿದ್ದಾಳೆ. ಉತ್ತರ ಪ್ರದೇಶದಲ್ಲಿ ನಡೆದ ಈ ಭೀಕರ ಕೊಲೆಯ ವಿಚಾರ ಕೇಳಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಎರಡು ಸಮುದಾಯಗಳ ಮಧ್ಯೆ ಮತ್ತೆ ಗುಂಡಿನ ಕಾಳಗ

ಉತ್ತರ ಪ್ರದೇಶದ ಪಿಲಿಭಿತ್‌ನ ಗಜ್ರೌಲಾ ಪ್ರದೇಶದ ಶಿವನಗರದಲ್ಲಿ ಈ ಭೀಕರ ಕೃತ್ಯ ನಡೆದಿದೆ. 55 ವರ್ಷ ವಯಸ್ಸಿನ ರಾಮ್‌ಪಾಲ್ ಭಾನುವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಆಗ ಪತ್ನಿ ದುಲಾರೋ ದೇವಿ ಗಂಡನನ್ನು ಮಂಚಕ್ಕೆ ಕಟ್ಟಿದ್ದಾಳೆ. ನಂತರ ಗಂಡನನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾಳೆ. ಹತ್ಯೆ ಮಾಡಿದ ಮೇಲೆ ಕೊಡಲಿಯಿಂದ ದೇಹವನ್ನು ಐದು ಭಾಗಗಳನ್ನಾಗಿ ಮಾಡಿದ್ದಾಳೆ. ನಂತರ ಹತ್ತಿರವಿದ್ದ ಕಾಲುವೆಗೆ ಮೃತದೇಹದ ತುಂಡುಗಳನ್ನು ಬಿಸಾಡಿದ್ದಾಳೆ.

ಈ ಪಾಪಿ ಪತ್ನಿ ಒಂದು ತಿಂಗಳಿಂದ ಗಂಡನ ಜೊತೆಯಲ್ಲಿಯೂ ಇರಲಿಲ್ಲ. ಗಂಡನ ಸ್ನೇಹಿತನ ಮನೆಯಲ್ಲಿ ಲವ್ವಿಡವ್ವಿ ಅಂತಾ ಅನೈತಿಕ ಸಂಬಂಧದಲ್ಲಿದ್ದಳು. ಗಂಡನ ಸ್ನೇಹಿತನ ಜೊತೆಯಲ್ಲಿದ್ದರೂ ಆಕೆಗೆ ಒಂಚೂರು ಪಾಪ ಪ್ರಜ್ಞೆಯೂ ಕಾಡಿರಲಿಲ್ಲ. ಇಷ್ಟು ದಿನ ಮಾಡಿದ್ದು ಕೂಡಾ ಅನೈತಿಕ ಕೆಲಸವೇ. ಇದರ ಮೇಲೆ ಗಂಡನನ್ನು ಕೂಡಾ ಕೊಂದು ಮುಗಿಸಿದ್ದಾಳೆ.

ರಾಮ್‌ಪಾಲ್ ಮಗ ಪೊಲೀಸರಿಗೆ, ತಂದೆ ಕಾಣೆಯಾಗಿರುವ ಬಗ್ಗೆ ದೂರು ನೀಡುತ್ತಾನೆ. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವ ವೇಳೆ ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಪತಿ ರಾತ್ರಿ ಮಲಗಿದ್ದಾಗ ಮಂಚಕ್ಕೆ ಕಟ್ಟಿಹಾಕಿ ಕೊಂದು, ಕೊಡಲಿಯಿಂದ ದೇಹದ ಭಾಗಗಳನ್ನ ಕತ್ತರಿಸಿ ಹತ್ತಿರದ ಕಾಲುವೆಯಲ್ಲಿ  ಬಿಸಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪತ್ನಿಯನ್ನ ಬಂಧಿಸಿದ ಪೊಲೀಸರು ರಾಮ್ಪಾಲ್ ದೇಹದ ಭಾಗಗಳನ್ನ ಕಾಲುವೆಯಿಂದ ಹೊರತೆಗೆಯಲು ಕಾರ್ಯಚರಣೆ ನಡೆಸುತ್ತಿದ್ದಾರೆ. ಮೃತರ ರಕ್ತಸಿಕ್ತ ಬಟ್ಟೆ ಹಾಗೂ ಹಾಸಿಗೆ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

suddiyaana