ಸೋತರೂ ಹೃದಯ ಗೆದ್ದ ಶಶಾಂಕ್ ಸಿಂಗ್ – ಕೊನೇ ಓವರ್.. ಸೋಲು.. ಪಂಜಾಬ್ ನಾಯಕ ಹೇಳಿದ್ದೇನು?

ಸೋತರೂ ಹೃದಯ ಗೆದ್ದ ಶಶಾಂಕ್ ಸಿಂಗ್ – ಕೊನೇ ಓವರ್.. ಸೋಲು.. ಪಂಜಾಬ್ ನಾಯಕ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಟ್ರೋಫಿ ಎತ್ತಿ ಹಿಡಿದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಕಾದಾಟದಲ್ಲಿ ಆರ್​ಸಿಬಿ 6 ರನ್​ಗಳ ಜಯ ಸಾಧಿಸಿದೆ. ಆದರೆ, ಇಲ್ಲಿ ಕೊನೇ ಓವರ್ ನಲ್ಲಿ ಪಂಜಾಬ್ ಟೀಮ್ ನ ಬ್ಯಾಟರ್ ಶಶಾಂಕ್ ಸಿಂಗ್ ಕೂಡಾ ಫ್ಯಾನ್ಸ್ ಕಣ್ಣಿಗೆ ಹೀರೋ ಆಗಿ ಕಂಡಿದ್ದಾರೆ.

ಇದನ್ನೂ ಓದಿ:ಕಪ್ ಗೆದ್ದು ಕೊಹ್ಲಿ ಕಣ್ಣೀರ ಅಭಿಷೇಕ.. ಸಾಲ್ಟ್ ಕ್ಯಾಚ್.. ಕೃನಾಲ್ ಹೀರೋ -18ರ ನಂಟು.. ಹೇಗಿತ್ತು RCB ಗೇಮ್?

ಆರ್‌ಸಿಬಿ ಎರಡು ಬಾಲ್ ಇದ್ದಾಗಲೇ ಗೆಲುವಿನ ಸಂಭ್ರಮದಲ್ಲಿದ್ರೆ, ಇತ್ತ ಶಶಾಂಕ್ ಸಿಂಗ್ ಸಿಡಿಸಿರೋ ಸಿಕ್ಸ್ ಗಳು ಮನ ಗೆದ್ದಿದೆ. ಲಾಸ್ಟ್ ಮ್ಯಾಚ್‌ನಲ್ಲಿ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಶಶಾಂಕ್ ಸಿಂಗ್‌ಗೆ ಗ್ರೌಂಡ್‌ನಲ್ಲೇ ಕ್ಲಾಸ್ ತಗೊಂಡಿದ್ರು. ಇದೀಗ ಇದೇ ಶಶಾಂಕ್ ಸಿಂಗ್ ಕೊನೇ ತನಕ ತಂಡದ ಗೆಲುವಿಗಾಗಿ ಶ್ರಮಿಸಿದ್ರು. ಕೊನೇ ಓವರ್‌ನಲ್ಲಂತೂ ಶಶಾಂಕ್ ಸಿಂಗ್ ಬ್ಯಾಟಿಂಗ್ ಗೆ ಪಂಜಾಬ್ ತಂಡವೇ ಬೆರಗಾಗಿತ್ತು. ಪಂಜಾಬ್ ಸಹ ಮಾಲಕಿ ಪ್ರೀತಿ ಝಿಂಟಾ ಕೂಡಾ ಶಶಾಂಕ್ ಸಿಂಗ್‌ಗೆ ಶಹಬ್ಬಾಸ್ ಹೇಳಿ ಪ್ರೀತಿಯಿಂದ ಅಪ್ಪುಗೆ ನೀಡಿದ್ರು.

ಇನ್ನು ಆರ್‌ಸಿಬಿ ಪಂದ್ಯದ ಗೆಲುವಿನ ರೂವಾರಿಯೇ ಕೃನಾಲ್ ಪಾಂಡ್ಯ. ಫೈನಲ್‌ ಸೋತ ಬಳಿಕ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್ ಕೂಡಾ ಕೃನಾಲ್ ಪಾಂಡ್ಯ ಅವರ ಆಟವನ್ನ ಮೆಚ್ಚಿಕೊಂಡು ಮಾತಾಡಿದ್ದಾರೆ. ಸೋತ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್‌ನ ಹೋರಾಟಕ್ಕೆ ತಡೆಗೋಡೆಯಾಗಿ ನಿಂತಿದ್ದು ಆರ್‌ಸಿಬಿ ತಂಡದ ಸ್ಪಿನ್ನರ್ ಕೃನಾಲ್ ಪಾಂಡ್ಯ. ಕೃನಾಲ್ ಅವರನ್ನು ಪಂದ್ಯವನ್ನೇ ಬದಲಾಯಿಸಿದ ಆಟಗಾರ ಎಂದು ಬಾಯ್ತುಂಬಾ ಹೊಗಳಿದ್ದಾರೆ.

Sulekha