‘ಬಾಯ್ಕಾಟ್’ಗೆ ಗೋಲಿ.. ಬಾಕ್ಸಾಫೀಸ್ ಲೂಟಿ – ಗಲ್ಲಾಪೆಟ್ಟಿಗೆಯಲ್ಲಿ ₹542 ಕೋಟಿ ಬಾಚಿದ ‘ಪಠಾಣ್’!

‘ಬಾಯ್ಕಾಟ್’ಗೆ ಗೋಲಿ.. ಬಾಕ್ಸಾಫೀಸ್ ಲೂಟಿ – ಗಲ್ಲಾಪೆಟ್ಟಿಗೆಯಲ್ಲಿ ₹542 ಕೋಟಿ ಬಾಚಿದ ‘ಪಠಾಣ್’!

ಬಾಯ್ಕಾಟ್ ಟ್ರೆಂಡ್​ಗೆ ಗೋಲಿ ಹೊಡೆದು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಚಿತ್ರ ದಾಖಲೆ ಬರೆಯುತ್ತಿದೆ. ರಿಲೀಸ್​ಗೂ ಮುನ್ನವೇ ಭಾರೀ ವಿವಾದ ಸೃಷ್ಟಿಸಿದ್ದ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೀತಿದೆ. ಸಿನಿಮಾ ರಿಲೀಸ್ ಆದ ಐದೇ ದಿನದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 542 ಕೋಟಿ ಬಾಚಿಕೊಂಡಿದೆ. ಬಿಡುಗಡೆಯಾದ ಮೊದಲ ವಾರಕ್ಕೆ ವಿಶ್ವಾದ್ಯಂತ ಬರೋಬ್ಬರಿ 542 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಪಠಾಣ್ ಸಿನಿಮಾದ ಈ ಸಕ್ಸಸ್ ಕಂಗೆಟ್ಟಿದ್ದ ಬಾಲಿವುಡ್​ ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಜನರಿಗೆ ಗಾಯದ ಮೇಲೆ ಮತ್ತೆ ಬರೆ – ಲೀಟರ್‌ಗೆ 262 ರೂಪಾಯಿ ದಾಟಿದ ಡೀಸೆಲ್ ದರ

ನಿನ್ನೆ ಒಂದೇ ದಿನ ಭಾರತದಾದ್ಯಂತ ಪಠಾಣ್ ಸಿನಿಮಾ ₹70ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಹಾಗೇ ಪಠಾಣ್ ಸಿನಿಮಾ ಶಾರುಖ್ ಖಾನ್ ಕೆರಿಯರ್​ನಲ್ಲೇ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಚಿತ್ರ ಅನ್ನೋ ದಾಖಲೆ ಬರೆದಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಅಭಿನಯದ ಚಿತ್ರ ತೆರೆಗೆ ಬಂದಿದ್ದು, ಕಿಂಗ್​ ಖಾನ್​ಗೆ ಕಮ್ ಬ್ಯಾಕ್ ನೀಡಿದೆ.

ಜನವರಿ 25ರಂದು ತೆರೆಗೆ ಅಪ್ಪಳಿಸಿದ್ದ ಈ ಸಿನಿಮಾ ಮೊದಲ ದಿನ 55 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ ಎರಡನೇ ದಿನ 68 ಕೋಟಿ, ಮೂರನೇ ದಿನ 38 ಕೋಟಿ, ನಾಲ್ಕನೇ ದಿನ 51.50 ಕೋಟಿ ಮತ್ತು ಐದನೇ ದಿನ ಅಂದ್ರೆ ಭಾನುವಾರ 58.50 ಕೋಟಿ ಬಾಚಿಕೊಂಡಿದೆ. ಈ ಮೂಲಕ ವಿಶ್ವಾದ್ಯಂತ ಐದೇ ದಿನಕ್ಕೆ 542 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಪಠಾಣ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಆನಂದ್ ಡೈರೆಕ್ಷನ್ ಮಾಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಗೂ ಡಬ್ ಆಗಿರುವ ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

suddiyaana