‘ಪಠಾಣ್ ಸೋತಿದ್ದರೆ ಹೋಟೆಲ್​ನಲ್ಲಿ ಅಡುಗೆ ಮಾಡ್ತಿದ್ದೆ’ – ಶಾರುಖ್ ಖಾನ್ ಮಾಡಿದ್ದ ನಿರ್ಧಾರ ಏನು..?

‘ಪಠಾಣ್ ಸೋತಿದ್ದರೆ ಹೋಟೆಲ್​ನಲ್ಲಿ ಅಡುಗೆ ಮಾಡ್ತಿದ್ದೆ’ – ಶಾರುಖ್ ಖಾನ್ ಮಾಡಿದ್ದ ನಿರ್ಧಾರ ಏನು..?

ಹಿಂದಿ ಚಿತ್ರರಂಗದ ಸಾಲು ಸಾಲು ದಾಖಲೆಗಳನ್ನ ಪುಡಿಪುಡಿ ಮಾಡಿ ‘ಪಠಾಣ್’ ಚಿತ್ರ ಬಾಕ್ಸಾಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್​ಗೂ ಗ್ರೇಟ್ ಕಮ್ ಬ್ಯಾಕ್ ನೀಡಿದೆ. ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಶಾರುಖ್ ಈಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪಠಾಣ್ ಸಿನಿಮಾ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಶಾರುಖ್ ಖಾನ್ ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. ‘ಪಠಾಣ್’ ಸಿನಿಮಾ ಏನಾದ್ರೂ ಸೋತಿದ್ರೆ ತಾನು ಅಡುಗೆ ಭಟ್ಟ ಆಗುತ್ತಿದೆ ಎಂದಿದ್ದಾರೆ. ಯಾಕಂದ್ರೆ ಹೋಟೆಲ್ ಉದ್ಯಮಕ್ಕೆ ಕಾಲಿಡಲು ಪ್ಲ್ಯಾನ್ ಮಾಡಿದ್ದ ಬಗ್ಗೆ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಕೇದಾರನಾಥ ಧಾಮಕ್ಕೆ ಹಿಮದ ಹೊದಿಕೆ – ಕಣ್ಮನ ಸೆಳೆಯುತ್ತಿದೆ ಭಕ್ತಿಯ ತಾಣ

2018ರ ಬಳಿಕ ಶಾರುಖ್ ಖಾನ್​ರ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಪಠಾಣ್ ಸಿನಿಮಾ ಬಗ್ಗೆ ನಿರೀಕ್ಷೆ ಇದ್ದರೂ ಕೂಡ ಸಾಕಷ್ಟು ವಿವಾದಗಳು ಉಂಟಾಗಿತ್ತು. ಹೀಗಾಗಿ ಸ್ವತಃ ಶಾರುಖ್ ಕೂಡ ಆತಂಕದಲ್ಲಿದ್ದರು. ಒಂದು ವೇಳೆ ಪಠಾಣ್ ಸಿನಿಮಾ ಸೋತಿದ್ದರೆ ತಾವು ಹೋಟೆಲ್​ನಲ್ಲಿ ಅಡುಗೆ ಮಾಡಲು ಸಿದ್ಧರಾಗಿದ್ದರಂತೆ. ಅಷ್ಟೇ ಯಾಕೆ ಹೋಟೆಲ್​ನಲ್ಲಿ ಅಡುಗೆ ಮಾಡಲು ತರಬೇತಿಯನ್ನೂ ಕೂಡ ಪಡೆದಿದ್ದರಂತೆ.

ಎಲ್ಲರ ಲೆಕ್ಕಾಚಾರಗಳು ಉಲ್ಟಾ ಆಗುವಂತೆ ಪಠಾಣ್ ಸಿನಿಮಾ ಸಕ್ಸಸ್ ಕಂಡಿದೆ. ಚಿತ್ರ ರಿಲೀಸ್ ಆದ ಒಂದೇ ವಾರದಲ್ಲಿ 600ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಜೊತೆಗೆ ಹಿಂದಿ ಚಿತ್ರರಂಗದಲ್ಲಿ ಸಾಲು ಸಾಲು ದಾಖಲೆ ಮಾಡಿದೆ. ‘ಪಠಾಣ್’ ಸಿನಿಮಾ ಸೃಷ್ಟಿಸಿರುವ ದಾಖಲೆಗಳ ಪಟ್ಟಿ ಇಲ್ಲಿದೆ ಓದಿ.

ಭಾರತದಲ್ಲಿ ಅತ್ಯಂತ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಹಿಂದಿ ಸಿನಿಮಾ

ಓಪನಿಂಗ್ ಡೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ (₹55 ಕೋಟಿ )

ರಜೆಯಿಲ್ಲದ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ

ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ (₹68 ಕೋಟಿ)

ಓವರ್‌ಸೀಸ್‌ನಲ್ಲಿ ಅತೀ ಹೆಚ್ಚು ಓಪನ್ನಿಂಗ್ ಪಡೆದ ಹಿಂದಿ ಸಿನಿಮಾ (₹36.69 ಕೋಟಿ)

ಭಾರತದಲ್ಲಿ ಅತ್ಯಂತ ವೇಗವಾಗಿ 200 ಕೋಟಿ ಕ್ಲಬ್ ಸೇರಿದ ಹಿಂದಿ ಸಿನಿಮಾ (4 ದಿನ)

ಅತೀ ಹೆಚ್ಚು ವೀಕೆಂಡ್ ಕಲೆಕ್ಷನ್ ಮಾಡಿದ ಭಾರತೀಯ ಚಿತ್ರ (₹280.50 ಕೋಟಿ )

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ.

suddiyaana