3 ಗಂಟೆ ಆಗಸದಲ್ಲೇ ಗಿರಕಿ ಹೊಡೆದ ವಿಮಾನ – ಏರ್‌ಇಂಡಿಯಾ ವಿಮಾನದಲ್ಲಿ ಆಗಿದ್ದೇನು?

3 ಗಂಟೆ ಆಗಸದಲ್ಲೇ ಗಿರಕಿ ಹೊಡೆದ ವಿಮಾನ – ಏರ್‌ಇಂಡಿಯಾ ವಿಮಾನದಲ್ಲಿ ಆಗಿದ್ದೇನು?

ನಾವು ಹೋಗೋ ಬೈಕ್‌. ಕಾರ್.. ಬಸ್‌ನಲ್ಲಿ ಏನಾದ್ರೂ ತೊಂದ್ರೆಯಾದ್ರೆ ಭಯ ಆಗುತ್ತೆ. ಅಂತಹದ್ರಲ್ಲಿ ಆಕಾಶದಲ್ಲಿ ಹಾರುವ ವಿಮಾನದಲ್ಲಿ ತೊಂದ್ರೆ ಕಾಣಿಸಿಕೊಂಡ್ರೆ ಹೇಗ್ ಆಗಲ್ಲ ಹೇಳಿ.. ಒಮ್ಮೆ ಎಲ್ಲಾ ದೇವರು ನೆನಪಾಗಿ.. ಜೀವವೇ ಹೋಯ್ತು ಅನ್ನೋ ತರ ಆಗುತ್ತೆ.. ಅದರಂತೆ ಭಾರತದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದೊಡ್ಡ ದುರಂತ ಏರ್‌ ಇಂಡಿಯಾ ಪೈಲೆಟ್ ತಪ್ಪಿಸಿದ್ದಾರೆ. 3 ಗಂಟೆಗಳ ಕಾಲ ಆಕಾಶದಲ್ಲಿ ವಿಮಾನ ಗಿರಿಕಿ ಹೊಡೆದಿದ್ದು, 141 ಜನರ ಪ್ರಾಣ ಉಳಿದಿದೆ. ಅಷ್ಟಕ್ಕೂ ಏರ್‌ ಇಂಡಿಯಾ ವಿಮಾನದಲ್ಲಿ ಆಗಿದ್ದೇನು..? ಹೇಗಿತ್ತು ಆ ರೋಚಕ  ಕಾರ್ಯಾಚರಣೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗಿಲ್ಲಿ ಕಿತ್ತೋಗಿರೋ ನಟ – Dolo 650 ಶಶಿರೇಖಾ ಎಡವಟ್ಟು

ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೇ ನಡೆದು ಹೋಯ್ತು ಎನ್ನುವಷ್ಟರಲ್ಲಿ, ಅದೃಷ್ಟದಿಂದ 141ಪ್ರಾಣ ಉಳಿದಿದೆ. ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AXB613ನಲ್ಲಿ ತಾಂತ್ರಿತ ಸಮಸ್ಯೆ ಕಾಣಿಸಿಕೊಂಡಿತ್ತು. 140 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ವಿಮಾನದಲ್ಲಿ ತುರ್ತು ಅಲರಾಮ್‌ ಬಟನ್‌ ಪ್ರೆಸ್‌ ಆಗುತ್ತಿದ್ದಂತೆಯೇ ಪ್ರಯಾಣಿಕರು ಕಂಗಾಲಾಗಿ ಜೋರು ಜೋರಾಗಿ ಕಿರುಚಾಡಲು ಪ್ರಾರಂಭಿಸಿದರು. ವಿಮಾನದಲ್ಲಿದ್ದ ಸಣ್ಣ ಮಕ್ಕಳು ಜೋರಾಗಿ ಅಳಲು ಪ್ರಾರಂಭಿಸಿದರೆ, ದೊಡ್ಡವರು ಆತಂಕದಿಂದ ಕಂಗಾಲಾಗಿದ್ರು. ನಂತ್ರ ತಿರುಚ್ಚಿ ವಿಮಾನ ನಿಲ್ದಾಣದಲ್ಲಿಯೇ ವಿಮಾನವನ್ನು ಲ್ಯಾಂಡ್‌ ಮಾಡುವಂತೆ ಪೈಲಟ್‌ಗೆ ಸೂಚನೆ ನೀಡಲಾಗಿತ್ತು. ವಿಮಾನದಲ್ಲಿರುವ ಹೆಚ್ಚುವರಿ ಇಂಧನವನ್ನು ಸುಡುವ ನಿಟ್ಟಿನಲ್ಲಿ ಹೋಲ್ಡಿಂಗ್‌ ಮಾದರಿಯಲ್ಲಿ ತಿರುಚ್ಚಿಯ ವಾಯುಪ್ರದೇಶದಲ್ಲಿ ಹಾರಾಟ ಮಾಡುವಂತೆ ತಿಳಿಸಲಾಗಿತ್ತು. ರಾತ್ರಿ 7.45ರ ವೇಳೆಗೆ ವಿಮಾನ ನಿಲ್ದಾಣ ಸುರಕ್ಷಿತವಾಗಿ ಸಾಮಾನ್ಯವಾಗಿ ಲ್ಯಾಂಡಿಂಗ್‌ ಆಗಿದ್ದು, ಎಲ್ಲಾ ಪ್ರಯಾಣಿಕರು ಸೇಫ್‌ ಆಗಿದ್ದಾರೆ.

ಪ್ರಯಾಣಿಕರಿಗೆ ಧೈರ್ಯ ತುಂಬಿದ ಸಿಬ್ಬಂದಿ

ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ವಿಮಾನದ ಪೈಲೆಟ್‌ ಹಾಗೂ ಸಹಾಯಕ ಸಿಬ್ಬಂದಿ ಅಲರ್ಟ್‌ ಆಗಿದ್ದರು. ಕೂಡಲೇ ಅನೌನ್ಸಮೆಂಟ್‌ ನೀಡಿದ್ರು. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆದ್ರೆ ಯಾರೂ ಆತಂಕಕ್ಕೆ ಒಳಗಾಗಬೇಡಿ. ಪೈಲೆಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಬೇಕಾದ ಎಲ್ಲಾ ಕಸರತ್ತು ನಡೆಸುತ್ತಿದ್ದಾರೆ..  ಯಾವುದೇ ಕಾರಣಕ್ಕೂ ವಿಮಾನದ ಪ್ರಯಣಿಕರು ಈ ಟೈಂನಲ್ಲಿ ಭಯಪಡಬೇಡಿ.. ಆತಂಕಕ್ಕೆ ಒಳಗಾಗಬೇಡಿ. ಹಾಗೇ ಯಾರು ಸೀಟ್‌ನಿಂದ ಎದ್ದೇಳ ಬಾರದು. ಹಾಗೇ ದಯವಿಟ್ಟು ಈ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಬಾರದು ಎಂದು ಸೂಚನೆ ನೀಡಿದ್ರು.. ಅಲ್ಲದೇ ವಿಮಾನದ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿ. ಸೀಟ್‌ ಬೆಲ್ಟ್‌ಗಳನ್ನು ಯಾವುದೇ ಕಾರಣಕ್ಕೂ ಕಳಚ ಬೇಡಿ ಎಂದಿದ್ರು..

ಇಂಧನ ಖಾಲಿ ಮಾಡೋದು ಯಾಕೆ ಗೊತ್ತಾ..?

ಒಂದು ವೇಳೆ  ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ಅನಾಹುತದ ಎಚ್ಚರಿಕೆ ಕಂಡು ಬಂದರೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗುತ್ತದೆ. ಆಕಾಶದಲ್ಲಿ ಹಾರಾಟ ಮಾಡುವ ಮೂಲಕ ಇಂಧನವನ್ನು ಖಾಲಿ ಮಾಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಒಂದೊಮ್ಮೆ ತುರ್ತು ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ಎದುರಾಗುವ ಅನಾಹುತವನ್ನು ತಪ್ಪಿಸುವುದು. ಇಂಧನ ಹೆಚ್ಚಾಗಿ ಇದ್ದಾಗ ಬೆಂಕಿ ಅವಘಡ ಸಂಭವಿಸಿದ್ರೆ, ಅದ್ರ ಎಫೆಕ್ಟ್ ಹೆಚ್ಚಾಗುತ್ತೆ. ಹೀಗಾಗಿ ಇದೇ ಕಾರಣಕ್ಕಾಗಿ ಏರ್‌ ಇಂಡಿಯಾ ವಿಮಾನ ಬರೋಬ್ಬರಿ 3 ತಾಸು ಆಕಾಶದಲ್ಲೇ ಹಾರಾಟ ನಡೆಸಿ ಇಂಧನ ಖಾಲಿ ಮಾಡಿ ನಂತ್ರ ಲ್ಯಾಂಡಿಗ್ ಮಾಡಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ವಾಹನಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿತ್ತು.

3 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿತ್ತು ದುರಂತ..!

ಮೂರು ವರ್ಷಗಳ ಹಿಂದೆ ಕೇರಳದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅದು ಸಹ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯ ವಿಮಾನ. ಆ ವಿಮಾನದಲ್ಲಿ 190 ಜನ ಪ್ರಯಾಣಿಕರು ಇದ್ದರು. ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ದುಬೈನಿಂದ ಕೇರಳದ ಕೋಯಿಕೋಡ್ ಬಂದು ಲ್ಯಾಂಡಿಂಗ್‌ ಮಾಡುವಾಗ ಈ ಅವಘಡ ಸಂಭವಿಸಿತ್ತು. 2021ರಲ್ಲಿ ಈ ದುರಂತ ಸಂಭವಿಸಿತ್ತು.  ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲೆಟ್‌ ಹಲವು ನಿಮಿಷಗಳ ಕಾಲ ವಿಮಾನವನ್ನು ಲ್ಯಾಂಡ್‌ ಮಾಡದೆ ಆಕಾಶದಲ್ಲೇ ಹಾರಾಟ ನಡೆಸಿದ್ದರು. ಆದರೆ, ನೂರಾರು ಜನ ಜೀವ ಉಳಿಸಿದ್ದ ಪೈಲೆಟ್‌ ಕೊನೆಗೆ ಉಳಿಯಲಿಲ್ಲ. ಈ ದುರಂತದಲ್ಲಿ   ಪೈಲೆಟ್‌ ಸೇರಿದಂತೆ 21 ಜನ ಮೃತಪಟ್ಟಿದ್ದರು.

Shwetha M

Leave a Reply

Your email address will not be published. Required fields are marked *