ಗಂಡ ಬೌಲರ್‌.. ಹೆಂಡ್ತಿ ಬೇಕರಿ ಉದ್ಯಮ! – ಲವ್‌ ಜೊತೆ ಲೈಫ್‌ ಗೆದ್ದ ಮಿತಾಲಿ
ಶಾರ್ದುಲ್‌ ಠಾಕೂರ್‌ಗೆ ಪತ್ನಿ ಪವರ್

ಗಂಡ ಬೌಲರ್‌.. ಹೆಂಡ್ತಿ ಬೇಕರಿ ಉದ್ಯಮ! – ಲವ್‌ ಜೊತೆ ಲೈಫ್‌ ಗೆದ್ದ ಮಿತಾಲಿಶಾರ್ದುಲ್‌ ಠಾಕೂರ್‌ಗೆ ಪತ್ನಿ ಪವರ್

ಸಕ್ಸಸ್‌ಫುಲ್‌ ಗಂಡಿನ ಹಿಂದೆ ಒಬ್ಬಳು ಹೆಣ್ಣಿರುತ್ತಾಳೆ ಅಂತಾರೆ.. ಆದ್ರೆ ಇದು, ಗಂಡನ ಸಕ್ಸಸ್‌ ಜೊತೆಗೆ ಹೆಂಡತಿಯೂ ಸಕ್ಸಸ್‌ ಪಡೆದಿರುವ ಇಂಟ್ರೆಸ್ಟಿಂಗ್‌ ಸ್ಟೋರಿ.. ಗಂಡ ಮೈದಾನದಲ್ಲಿ ಬೆವರು ಸುರಿಸುತ್ತಿದ್ದರೆ, ಹೆಂಡತಿ ಬೇಕರಿಯಲ್ಲಿ ಬೆವರು ಹರಿಸುತ್ತಿದ್ದರು.. ಇವರಿಬ್ಬರ ಪರಿಶ್ರಮದಿಂದಲೇ ಈಗ ಕೋಟಿಗಟ್ಟಲೆ ಸಂಪಾದನೆ ಮಾಡ್ತಿದ್ದಾರೆ.. ಅಷ್ಟಕ್ಕೂ ಶಾರ್ದುಲ್‌ ಹೆಂಡತಿ ಮಿತಾಲಿ ಬುಸಿನೆಸ್‌ ಏನು? ವರ್ಷಕ್ಕೆ ಇವರು ಎಷ್ಟು ದುಡಿತಾರೆ.. ಕಡಿಮೆ ಸಮಯದಲ್ಲಿ ಇಷ್ಟೊಂದು ಸಕ್ಸಸ್‌ ಕಂಡಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 70 ವರ್ಷ ಮೆಲ್ಪಟ್ಟವರಿಗೆ ‘ಆಯುಷ್ಮಾನ್ ಭಾರತ್’ – ರೂಲ್ಸ್ ಏನು..? ಕಾರ್ಡ್‌ಗೆ ಅಪ್ಲೈ ಮಾಡೋದ್ ಹೇಗೆ?

ಇದು ಶಾರ್ದುಲ್‌ ಠಾಕೂರ್‌ ಹೆಂಡತಿ ಮಿತಾಲಿಯವರ ಕತೆ..  ಶಾರ್ದುಲ್‌ ಹಾಗೂ ಮಿತಾಲಿ ಜೋಡಿ ಹಸೆಮಣೆ ಏರಿದ್ದು 2023ರಲ್ಲಿ.. ಅದಕ್ಕೂ ಮೊದಲು ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದರು.. ಮಿತಾಲಿ ಹಾಗೂ ಶಾರ್ದುಲ್‌ ಬಾಲ್ಯ ಸ್ನೇಹಿತರು. ನಂತರ ಅವರ ಸ್ನೇಹ ಪ್ರೀತಿಗೆ ಪರಿವರ್ತನೆಗೊಂಡಿತ್ತು.. ಅಷ್ಟೊತ್ತಿಗಾಗಲೇ ಶಾರ್ದುಲ್‌ ಠಾಕೂರ್‌ ಕ್ರಿಕೆಟ್‌ನಲ್ಲಿ ಒಳ್ಳೆಯ ಹೆಸರು ಮಾಡಲು ಆರಂಭಿಸಿದ್ದರು.. ಗಂಡ ವೇಗದ ಬೌಲರ್‌.. ಕ್ರಿಕೆಟ್‌ ನಿಂದಲೇ ಕೋಟಿ ಕೋಟಿ ದುಡ್ಡು ಬರುತ್ತೆ.. ಇದ್ರಲ್ಲೇ ಮಿತಾಲಿ ಆರಾಮವಾಗಿ  ಜೀವನ ಮಾಡ್ಬೋದಿತ್ತು.. ಆದ್ರೆ ಮಿತಾಲಿ ಎಲ್ಲರಂತಲ್ಲ.. ಮಿತಾಲಿ ತನ್ನ ಜೀವನ ರೂಪಿಸುವ ವಿಚಾರದಲ್ಲಿ ಕೇವಲ ತನ್ನ ಹುಡುಗನನ್ನು ನೋಡಿ ಸುಮ್ಮನೆ ಕೂರಲಿಲ್ಲ.. ಬದಲಿಗೆ ತನ್ನ ಕೆರಿಯರ್‌ ಅನ್ನು ತಾನೇ ರೂಪಿಸುವ ಕಡೆಗೂ ಗಮನಹರಿಸಿದ್ರು.. ಬಿಕಾಂ ಪದವಿ ಮುಗಿಸಿದ ನಂತರ ಕಂಪನಿ ಸೆಕ್ರೆಟರಿ ಕೋರ್ಸ್‌ ಮಾಡಿದ್ರು.  ಈ ಮೂಲಕ ಬ್ಯುಸಿನೆಸ್‌ ಕಡೆಗೆ ಹೆಚ್ಚು ಫೋಕಸ್‌ ಮಾಡಿದ ಮಿತಾಲಿ ಪರುಲ್ಕರ್‌, ಕೆಲ ಸಮಯ ಕಾರ್ಪೋರೇಟ್‌ ಕಂಪನಿಯಲ್ಲಿ ಕೆಲಸ ಮಾಡಿದ್ದರು.. ನಂತರ ಸ್ವಂತ ಉದ್ದಿಮೆಯ ಕಡೆಗೆ  ಗಮನಹರಿಸಿದ್ರು ಮಿತಾಲಿ.. ಹೀಗಾಗಿ ಆಕೆ ಆಯ್ಕೆ ಮಾಡಿಕೊಂಡಿದ್ದು ತನ್ನ ಆಸಕ್ತಿಯ ಬೇಕಿಂಗ್‌ ಕ್ಷೇತ್ರವನ್ನು.. ಅಡುಗೆ ಮತ್ತು ಬೇಕಿಂಗ್‌ ಕೆಲಸವನ್ನು ಇಷ್ಟ ಪಡುತ್ತಿದ್ದ ಮಿಥಾಲಿ, ಮುಂಬೈ ಸಮೀಪದ ಥಾಣೆಯಲ್ಲಿ All JAZZ Backeryಯನ್ನು ಶುರು ಮಾಡಿದ್ರು.. ಹಾಗಂತ ಅವರ ಹಾದಿಯೇನೂ ಸುಲಭದ್ದಾಗಿರಲಿಲ್ಲ.. ಕೆಲಸದವರ ಜೊತೆಗೆ ಮಾಲೀಕರು ಕೈ ಜೋಡಿಸಿದರೇನೇ ಉದ್ಯಮ ಬೇಗನೆ ಬೆಳೆಯುತ್ತದೆ.. ಅದೇ ಕೆಲಸವನ್ನು ಮಿತಾಲಿ ಮಾಡಿದ್ರು..

ಬೇಕರಿಯ ಕಿಚನ್‌ನಲ್ಲಿ ಅವರೂ ಬೆವರು ಸುರಿಸಿದ್ದರು.. ನೋಡ ನೋಡುತ್ತಿದ್ದಂತೆ ಅದರ ಆಲ್‌ ಜಾಝ್‌ ಬೇಕರಿಯ ಟೇಸ್ಟ್‌ಗೆ ಥಾಣೆಯ ಮಂದಿ ಫಿದಾ ಆದ್ರು.. ಇದೇ ಕಾರಣಕ್ಕಾಗಿ ಅವರು ಸೋಷಿಯಲ್‌ ಮೀಡಿಯಾದಲ್ಲೂ ಆ್ಯಕ್ಟೀವ್‌ ಆಗಿ, ತಮ್ಮ ಬೇಕರಿಯ ಐಟಂಗಳನ್ನು ಪೋಸ್ಟ್‌ ಮಾಡ್ತಿದ್ದರು.. ಇದು ಹೊಸ ಹೊಸ ಗ್ರಾಹಕರನ್ನು ಸೆಳೆಯಲು ನೆರವಾಯಿತು.. ಅವರು ಅನುಸರಿಸಿದ ಸೋಷಿಯಲ್‌ ಮೀಡಿಯ ಮಾರ್ಕೆಟಿಂಗ್‌ ಸ್ಟ್ರಾಟಜಿ ಬೇಗನೆ ಕೈಹಿಡಿಯಿತು.. ಇದರಿಂದಾಗಿ ಥಾಣೆಯಲ್ಲಿ ಒಂದು ಒಳ್ಳೆಯ ಬೇಕರಿ ಎಂಬ ಖ್ಯಾತಿಗೂ ಮಿತಾಲಿಯವರ ಆಲ್‌ ಜಾಝ್‌ ಬೇಕರಿ ಪಾತ್ರವಾಯಿತು.. ಹೆಸರು ಬಂದ್ಮೇಲೆ ದುಡ್ಡು ಬರದೇ ಇರುತ್ತಾ ಹೇಳಿ.. ಈಗ ಮಿತಾಲಿಯವರ ಬೇಕರಿ ಬರೋಬ್ಬರಿ ಎರಡರಿಂದ ಮೂರು ಕೋಟಿ ರುಪಾಯಿಗಳನ್ನು ವಾರ್ಷಿಕವಾಗಿ ಸಂಪಾದನೆ ಮಾಡುತ್ತಿದೆ.. ಖ್ಯಾತ ಕ್ರಿಕೆಟಿಗನ ಪ್ರೇಯಸಿಯಾಗಿ, ಕೇವಲ ಅವರ ಜೊತೆ ಡೇಟಿಂಗ್‌ ಮಾಡ್ತಾ, ತನ್ನ ಹುಡುಗನ ಹಿಂದೆ ಸುತ್ತುತ್ತಾ ಟೈಂ ವೇಸ್ಟ್‌ ಮಾಡಲಿಲ್ಲ.. ಬದಲಿಗೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಹಠ ಅವರಲ್ಲಿತ್ತು.. ಇದರೊಂದಿಗೇ ಈಗ ಇಡೀ ಜಗತ್ತು ತನ್ನೆಡೆಗೆ ಹೆಮ್ಮೆಯಿಂದ ನೋಡುವಂತೆ ಮಾಡಿದ್ದಾರೆ ಶಾರ್ದುಲ್‌ ಠಾಕೂರ್ ಅವರ ಹೆಮ್ಮೆಯ ಮಡದಿ ಮಿತಾಲಿ..

Shwetha M