ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ – ಮದುವೆ ಫೋಟೋಸ್ ವೈರಲ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ – ಮದುವೆ ಫೋಟೋಸ್ ವೈರಲ್

ಭಾರತದ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ತನ್ನ ಗೆಳತಿ ಮಿಥಾಲಿ ಪಾರುಲ್ಕರ್ ಜೊತೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸೋಮವಾರ ಮುಂಬೈನ ಕರ್ಜತ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮದುವೆಯಾಗಿದ್ದಾರೆ. ಮದುವೆಯಲ್ಲಿ ಎರಡೂ ಕುಟುಂಬದ 200 ರಿಂದ 250 ಜನ, ಸ್ನೇಹಿತರು ಆಪ್ತರು ಭಾಗಿಯಾಗಿ ಜೋಡಿಗೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ ಶಾರ್ದೂಲ್ – ಶ್ರೇಯಸ್ ಹಾಡಿಗೆ ನವಜೋಡಿ ಭರ್ಜರಿ ಸ್ಟೆಪ್ಸ್

ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಕೆಲ ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು.  2021 ರಲ್ಲಿ ಇಬ್ಬರೂ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂರ್ವನಿಗದಿತ ವೇಳಾಪಟ್ಟಿಯಂತೆ, T20 ವರ್ಲ್ಡ್ ಕಪ್ ನಂತರ 2022 ರಲ್ಲಿ ಇಬ್ಬರೂ ಮದುವೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಬೇಕಾಯಿತು. ಇದೀಗ ಸೋಮವಾರ ಶಾರ್ದೂಲ್ ಹಾಗೂ ಮಿಥಾಲಿ ಮದುವೆಯಾಗಿದ್ದಾರೆ.

ಶಾರ್ದೂಲ್ ಮತ್ತು ಮಿಥಾಲಿ ಮದುವೆ ನಿಮಿತ್ತ ಸಂಗೀತ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇ ಭಾಗವಹಿಸಿದ್ದರು. ಅಲ್ಲದೆ ಶಾರ್ದೂಲ್ ಅವರ ಬೆಸ್ಟ್ ಫ್ರೆಂಡ್ ಶ್ರೇಯಸ್ ಅಯ್ಯರ್, ಅರ್ಜುನ್ ತೆಂಡೂಲ್ಕರ್, ಹಾರ್ದಿಕ್ ತೋಮರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾರ್ದೂಲ್ ಮಿಥಾಲಿ ಅವರ ಸಂಗೀತ ಕಾರ್ಯಕ್ರಮದ ವಿಡಿಯೋಗಳು ವೈರಲ್ ಆಗುತ್ತಿವೆ. ಇದರಲ್ಲಿ ಇವರಿಬ್ಬರು ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಶಾರ್ದೂಲ್ ಠಾಕೂರ್ ಗಾಗಿ ಶ್ರೇಯಸ್ ಅಯ್ಯರ್ ಕೂಡ ‘ದೋಸ್ತಿ’ ಹಾಡೊಂದನ್ನು ಹಾಡಿದ್ದು, ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

suddiyaana