ಬ್ಯಾಟಿಂಗ್, ಬೌಲಿಂಗ್ನಲ್ಲೂ ಬಾಸ್ ಕ್ರಿಕೆಟ್‌ನಲ್ಲಿ ಶೈನ್ ಆಗಿದ್ದೇಗೆ ಶೇನ್?
ವ್ಯಾಟ್ಸನ್ V/s ಗಂಭೀರ್.. ತಳ್ಳಿದ್ದೇಕೆ ?

ಶೇನ್ ವ್ಯಾಟ್ಸನ್.. ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ. ಇವರು ಒಬ್ಬ ಬಲಗೈ ಬ್ಯಾಟ್ಸ್ ಮನ್ ಜೊತೆಗೆ ಬಲಗೈ ಮಧ್ಯಮ ವೇಗಿ ಬೌಲರ್ ಕೂಡ ಆಗಿದ್ದಾರೆ. 2002ರಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಪರವಾಗಿ ಮೊದಲ ಪ್ರದರ್ಶನವನ್ನು ನೀಡುವುದರ ಜೊತೆಗೆ, ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ರು. ಏಕದಿನ ತಂಡದಲ್ಲಿ ಒಬ್ಬ ಖಾಯಂ ಸದಸ್ಯನಾದ ನಂತರ, ವ್ಯಾಟ್ಸನ್ ಆಸ್ಟ್ರೇಲಿಯಾ ತಂಡದ ಪರವಾಗಿ ಕೆಲವು ಟೆಸ್ಟ್ ಪಂದ್ಯಗಳನ್ನು ಆಡಿದ್ರು.. ಮೊದಲ ಟೆಸ್ಟ್ ಪಂದ್ಯ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನು ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ 2005ರಲ್ಲಿ ಆಡಿದರು. ಆಸ್ಟ್ರೇಲಿಯಾ ತಂಡದ ಟೆಸ್ಟ್ ಆಲ್ ರೌಂಡರ್ ಎಂದು ಖ್ಯಾತನಾದರೂ, ಟೆಸ್ಟ್ ತಂಡದಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳೋಕೆ ಗಾಯ ಅವರನ್ನ ಸತತವಾಗಿ ಕಾಡ್ತು.. ವ್ಯಾಟ್ಸನ್ ಗೆ 2010ರ ಅಲನ್ ಬಾರ್ಡರ್ ಪದಕ ನೀಡಿ ಗೌರವಿಸಲಾಗಿದೆ. ವ್ಯಾಟ್ಸನ್ ಪತ್ನಿ ಲೀ ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯದ ನಿರೂಪಕಿಯಾಗಿದ್ದಾರೆ.
ವ್ಯಾಟ್ಸನ್, 2003ರ ಆರಂಭದಲ್ಲಿ ಮೂರು ಬಾರಿ ಬೆನ್ನೆಲುಬಿನ ಸಮಸ್ಯೆಗೆ ತುತ್ತಾಗುವ ತನಕ ODI ತಂಡದ ಒಬ್ಬ ಸದಸ್ಯನಾಗಿದ್ದರು. ಗಂಭೀರ ಬೆನ್ನು ನೋವಿನ ಸಮಸ್ಯೆಯಿಂದ 2003ರ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಆಡುವುದು ಕೈ ತಪ್ಪಿ ಹೋಯ್ತು.. ಇವರ ಬದಲಿಗೆ ಇವರ ಸಹ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ವಾಸಿಯಾಗದ ಗಾಯಗಳು ವ್ಯಾಟ್ಸನ್ ರನ್ನು 2003-04ರ ಆಸ್ಟ್ರೇಲಿಯನ್ ಸರಣಿಯ ತನಕವೂ ತಂಡದ ಪರ ಆಡದಂತೆ ಮಾಡಿತ್ತು. ಗಾಯದಿಂದ ಮತ್ತೆ ಚೇತರಿಸಿಕೊಳ್ಳುವವರೆಗೂ ಒಬ್ಬ ಬ್ಯಾಟ್ಸ್ ಮನ್ ಆಗಿ ಸರಣಿಯಲ್ಲಿ ಭಾಗವಹಿಸುತ್ತಿದ್ದರು..ವ್ಯಾಟ್ಸನ್ 2004-05ರ ಸರಣಿಯಲ್ಲಿ ನಿಯಮಿತವಾಗಿ ODI ಪಂದ್ಯಗಳಲ್ಲಿ ಒಬ್ಬ ಬೌಲಿಂಗ್ ಆಲ್ ರೌಂಡರ್ ಆಗಿ ಆಡುವುದರ ಮೂಲಕ ತಂಡಕ್ಕೆ ಹಿಂದಿರುಗಿದರು.
ವ್ಯಾಟ್ಸನ್ 2006ರ ICC ಚ್ಯಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಒಬ್ಬ ಆರಂಭಿಕ ಬ್ಯಾಟ್ಸ್ ಮನ್ ಆಗಿ, ಸಿಮೊನ್ ಕಟಿಚ್ ರ ಬದಲಿಗೆ ವಿಕೆಟ್ ಕೀಪರ್ ಆಡಂ ಗಿಲ್ಕ್ರಿಸ್ಟ್ ಜೊತೆಗೂಡಿ ಪಂದ್ಯದಲ್ಲಿ ಆಡಿದಾಗ ಈ ಅಭಿಪ್ರಾಯಕ್ಕೆ ಮನ್ನಣೆ ದೊರೆಯಿತು. ಪಂದ್ಯದಲ್ಲಿ ಬೌಲಿಂಗ್ ಹಾಗು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು, ಜೊತೆಗೆ ಆಸ್ಟ್ರೇಲಿಯಾ ತಂಡವು ಚ್ಯಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಜಯ ಗಳಿಸಿತು. ಕ್ರೀಡಾ ವಿಮರ್ಶಕರು ಹಾಗು ನಾಯಕ ರಿಕಿ ಪಾಂಟಿಂಗ್ ಅವರ ಉತ್ತಮ ಸ್ಟ್ರೈಕ್ ರೇಟು, ನೇರ ಹೊಡೆತ ಹಾಗು ಅವರ ಬೌಲಿಂಗ್ ಸಾಮರ್ಥ್ಯದಿಂದಾಗಿ ಕಟಿಚ್ ರ ಬದಲಿಗೆ ಆಯ್ಕೆಯಾಗಲು ಕಾರಣಗಳೆಂದು ಉಲ್ಲೇಖಿಸಿದರು. ವೆಸ್ಟ್ ಇಂಡಿಸ್ ಹಾಗು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ನಂತರ, ವ್ಯಾಟ್ಸನ್, ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ 50 ರನ್ನುಗಳನ್ನು ಗಳಿಸಿದರು, ಇದರಿಂದಾಗಿ ತಂಡವು ಸೆಮಿ ಫೈನಲ್ಸ್ ಹಂತ ತಲುಪಲು ಯಶಸ್ವಿಯಾಯಿತು. ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ವ್ಯಾಟ್ಸನ್ ಮತ್ತೊಮ್ಮೆ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ ಶತಕಗಳನ್ನು ಬಾರಿಸಿದರು. ಇದು ಆಸ್ಟ್ರೇಲಿಯಾ ತಂಡಕ್ಕೆ ತಮ್ಮ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಸಹಾಯವಾಯಿತು.
ಸ್ತಿನ ಉಲ್ಲಂಘನೆಯ ಕಾರಣದಿಂದಾಗಿ ಆಸ್ಟ್ರೇಲಿಯನ್ ತಂಡದಿಂದ ಸೈಮಂಡ್ಸ್ ರನ್ನು ಕೈಬಿಟ್ಟಾಗ, ವ್ಯಾಟ್ಸನ್ 2008ರ ಭಾರತದ ಪ್ರವಾಸದಲ್ಲಿ ಆಲ್ ರೌಂಡರ್ ಸ್ಥಾನವನ್ನು ಗಳಿಸಿಕೊಂಡು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ದಿಲ್ಲಿಯಲ್ಲಿ ನಡೆದ ಮೂರನೇ ಟೆಸ್ಟ್ ಸಂದರ್ಭದಲ್ಲಿ, ಇವರು ಭಾರತ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ ರನ್ನು ಸತತವಾಗಿ ಎದುರಿಸಿದರು. ಗೌತನ್ ವ್ಯಾಟ್ಸನ್ ರ ಬೌಲಿಂಗ್ ನಲ್ಲಿ ಮಿಡ್ ವಿಕೆಟ್ ನಲ್ಲಿ ಸಿಕ್ಸರ್ ಬಾರಿಸುವುದರ ಮೂಲಕ ಶತಕವನ್ನು ಬಾರಿಸಿದರು. ಇನ್ನಿಂಗ್ಸ್ ಅವಧಿಯಲ್ಲಿ, ಗಂಭೀರ್ ರನ್ನಿಗಾಗಿ ಓಡುವಾಗ ವ್ಯಾಟ್ಸನ್ ರನ್ನು ಮೊಣಕೈಯಿಂದ ಗೌತಮ್ ತಳ್ಳಿದರು.. ಈ ಘಟನೆ ಆಕಸ್ಮಿತ್ ಆಗಿ ನಡೆದಿದೆ ಅಂದ್ರು ಗಂಭೀರ್ ಅವರನ್ನ ಒಂದು ಪಂದ್ಯಕ್ಕೆ ನಿಷೇಧವನ್ನು ಹೇರಲಾಯಿತು. ಆದ್ರೆ ಇಲ್ಲಿ ವ್ಯಾಟ್ಸನ್ ಮೌನ ವಹಿಸಿದ್ರು.
ಇನ್ನು ಶೇನ್ 59 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 3731 ರನ್ ಗಳಿಸಿದ್ದಾರೆ. ಹಾಗೇ 75 ವಿಕೆಟ್ ತೆಗೆದಿದ್ದಾರೆ. 190 ಏಕದಿನ ಪಂದ್ಯವನ್ನ ಆಡಿರೋ ವ್ಯಾಟ್ಸನ್ 5757 ರನ್ ಗಳಿಸಿದ್ದು, 168 ವಿಕೆಟ್ ತೆೆಗೆದಿದ್ದಾರೆ. ಇನ್ನೂ 58 ಟಿ20 ಪಂದ್ಯದಿಂದ 1462 ರನ್‌ಗಳಿಸಿದ್ದು, 48 ರನ್‌ಗಳಿಸಿದ್ದಾರೆ.

ನೋಡಿರಿ

