ಅಧಿವೇಶನದಲ್ಲಿಯೇ ಅಶ್ಲೀಲ ಚಿತ್ರ ವೀಕ್ಷಿಸಿದ ಬಿಜೆಪಿ ಶಾಸಕ – ನೀಲಿಚಿತ್ರ ವೀಕ್ಷಣೆ ವಿಡಿಯೋ ವೈರಲ್!

ಅಧಿವೇಶನದಲ್ಲಿಯೇ ಅಶ್ಲೀಲ ಚಿತ್ರ ವೀಕ್ಷಿಸಿದ ಬಿಜೆಪಿ ಶಾಸಕ – ನೀಲಿಚಿತ್ರ ವೀಕ್ಷಣೆ ವಿಡಿಯೋ ವೈರಲ್!

ತ್ರಿಪುರಾ ರಾಜ್ಯದಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿ ಮತ್ತೆ ಗದ್ದುಗೆ ಏರಿದೆ. ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆಯಾಗಿರುವ ಈ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದೆ. ಆದ್ರೀಗ ಬಿಜೆಪಿ ಶಾಸಕರೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದೂ ಕೂಡ ವಿಧಾನಸಭೆ ಅಧಿವೇಶನದ ವೇಳೆಯೇ ಬಿಜೆಪಿ ಶಾಸಕರೊಬ್ಬರು ಮೊಬೈಲ್​ನಲ್ಲಿ ನೀಲಿ ಚಿತ್ರ ವೀಕ್ಷಿಸಿದ್ದಾರೆ.

ತ್ರಿಪುರಾದ ಬಾಗ್‌ಬಾಸಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ಇಂಥಾದ್ದೊಂದು ಕೆಲಸ ಮಾಡಿದ್ದಾರೆ. ಜದಾಬ್ ಲಾಲ್ ನಾಥ್ ತಮ್ಮ ಸದನದಲ್ಲಿ ಕುರ್ಚಿ ಮೇಲೆ ಕುಳಿತು ಮೊಬೈಲ್​ನಲ್ಲಿ ನೀಲಿಚಿತ್ರ ವೀಕ್ಷಿಸಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿಜೆಪಿ ಶಾಸಕನ ನಡೆ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ :ಗಿಫ್ಟ್ ಕೊಟ್ಟು ಮತಬುಟ್ಟಿಗೆ ‘ಕೈ’ ಹಾಕಿದವ್ರಿಗೆ ಶಾಕ್ – ಹಾಲಿ ಶಾಸಕ ಮತ್ತು ಮಾಜಿ ಶಾಸಕನ ವಿರುದ್ಧ FIR!

ಸಿಪಿಎಂನ ಬಲಿಷ್ಠ ಕೋಟೆಗಳಲ್ಲಿ ಕಣಕ್ಕಿಳಿದಿರುವ ಬಾಗ್​ಬಾಸಾ ವಿಧಾನಸಭಾ ಕ್ಷೇತ್ರದಲ್ಲಿ ಜದಬ್ ಲಾಲ್ ನಾಥ್ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದ್ದರು. 2018ರ ಚುನಾವಣೆಯಲ್ಲೂ ಬಿಜೆಪಿ ಬಾಗ್‌ಬಾಸಾ ವಿಧಾನಸಭಾ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. 2018 ರ ಚುನಾವಣೆಯಲ್ಲಿ ಸಿಪಿಎಂನ ಬಿಜಿತಾ ನಾಥ್ ಅವರು ಬಿಜೆಪಿಯ ಪ್ರದೀಪ್ ಕುಮಾರ್ ನಾಥ್ ಅವರನ್ನು 270 ಮತಗಳಿಂದ ಸೋಲಿಸಿದರು. 2023ರ ಚುನಾವಣೆಯಲ್ಲಿ ಬಿಜೆಪಿ ಜಾದಬ್ ಲಾಲ್ ನಾಥ್ ಮೇಲೆ ಬೆಟ್ಟಿಂಗ್ ನಡೆಸಿತ್ತು. ಜದಬ್ ಲಾಲ್ ನಾಥ್ ಅವರು ಸಿಪಿಎಂನ ಹಾಲಿ ಶಾಸಕ ಬಿಜಿತಾ ನಾಥ್ ಅವರನ್ನು 1400 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನ ಬಿಮಲ್ ನಾಥ್ ತೃತೀಯ ಹಾಗೂ ತಿಪ್ರಾ ಮೋಥಾದ ಕಲ್ಪನಾ ಸಿನ್ಹಾ ನಾಲ್ಕನೇ ಸ್ಥಾನ ಪಡೆದರು.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ. ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆಯಾಗಿರುವ ಈ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿರುವ ಬಿಜೆಪಿ ಶಾಸಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ .

suddiyaana