‘ಶಾಕುಂತಲಂ’ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ – ಸಮಂತಾ ಚಿತ್ರಕ್ಕೆ ಅಡ್ಡಿಯಾಗ್ತಿರೋದೇನು..!?

‘ಶಾಕುಂತಲಂ’ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ – ಸಮಂತಾ ಚಿತ್ರಕ್ಕೆ ಅಡ್ಡಿಯಾಗ್ತಿರೋದೇನು..!?

ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ಇತ್ತೀಚೆಗೆ ನಾನಾ ಕಾರಣಗಳಿಂದ ಸುದ್ದಿಯಾಗ್ತಿದ್ದಾರೆ. ಸಿನಿಮಾ, ವೈಯಕ್ತಿಕ ಜೀವನ, ಅನಾರೋಗ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಆಗ್ತಾನೇ ಇದೆ. ಸದ್ಯ ಸಮಂತಾ ಅಭಿನಯದ ‘ಶಾಕುಂತಲಂ’ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ.

ಇದನ್ನೂ ಓದಿ : ನಿನ್ನನ್ನೇ ಮದುವೆಯಾಗುವೆ ಎಂದ ದೈವ ನರ್ತಕ  – ಎರಡೇ ದಿನದಲ್ಲಿ ಅದೇ ಮಹಿಳೆ ಜೊತೆ ಪಾತ್ರಿ ಪರಾರಿ!

ಇದೇ ತಿಂಗಳು ಅಂದ್ರೆ ಫೆ.17ಕ್ಕೆ ‘ಶಾಕುಂತಲಂ’ ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿತ್ತು. ಆದ್ರೆ ಸಿನಿಮಾ ರಿಲೀಸ್​ಗೆ 10 ದಿನ ಇರುವಾಗ ಬಿಡುಗಡೆ ದಿನಾಂಕ ಮುಂದೂಡಲಾಗಿದೆ

ಇದನ್ನೂ ಓದಿ :

ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಕಳೆದ ವರ್ಷ ನವೆಂಬರ್​ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಈ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲ್ಪಟ್ಟಿದೆ.

‘ಶಾಕುಂತಲಂ’ ಸಿನಿಮಾ ಫೆ.17ಕ್ಕೆ ಬಿಡುಗಡೆ ಆಗುತ್ತಿಲ್ಲ. ಹಾಗಂತ ಇದು ಗಾಸಿಪ್ ಕೂಡ ಅಲ್ಲ. ಚಿತ್ರತಂಡದವರೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ರಿಲೀಸ್ ಡೇಟ್ ಪದೇಪದೆ ಮುಂದೂಡಿಕೆ ಆಗ್ತಿರೋದಕ್ಕೆ ಸಮಂತಾ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ಅದ್ಧೂರಿ ಬಜೆಟ್​ನಲ್ಲಿ ಮೂಡಿಬಂದಿದೆ. ಬೃಹತ್​ ಸೆಟ್​ಗಳು ಟ್ರೇಲರ್​ನಲ್ಲಿ ಗಮನ ಸೆಳೆದಿದ್ದವು. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನದಲ್ಲಿ ಸಿನಿಮಾ ಮೂಡಿಬಂದಿದೆ.

‘ಶಾಕುಂತಲಂ’ ಸಿನಿಮಾ ಬಿಡುಗಡೆ ಮುಂದೂಡಿಕೆಗೆ ಕಾರಣ ಏನು ಎಂಬುದು ರಿವೀಲ್ ಆಗಿಲ್ಲ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವ ಕಾರಣ ಚಿತ್ರದ ಬಿಡುಗಡೆ ವಿಳಂಬ ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಿಲೀಸ್ ದಿನಾಂಕವನ್ನ ಚಿತ್ರತಂಡ ಮತ್ತೊಮ್ಮೆ ಘೋಷಣೆ ಮಾಡಲಿದೆ.

suddiyaana