‘ಶಾಕುಂತಲಂ’ ಚಿತ್ರದ ರಿಲೀಸ್ ಡೇಟ್ 3ನೇ ಸಲ ಘೋಷಣೆ – ಸಮಂತಾ ಚಿತ್ರ ಯಾವಾಗ ಬಿಡುಗಡೆ..!?

‘ಶಾಕುಂತಲಂ’ ಚಿತ್ರದ ರಿಲೀಸ್ ಡೇಟ್ 3ನೇ ಸಲ ಘೋಷಣೆ – ಸಮಂತಾ ಚಿತ್ರ ಯಾವಾಗ ಬಿಡುಗಡೆ..!?

ನಟಿ ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾದ ರಿಲೀಸ್ ಡೇಟ್ ಪದೇಪದೆ ಮುಂದೂಡಿಕೆಯಾಗ್ತಿದೆ. ಈಗಾಗ್ಲೇ ಎರಡು ಸಲ ಚಿತ್ರದ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದ್ದು, ಮೂರನೇ ಬಾರಿಗೆ ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡಿದೆ.

ಪುರಾಣದ ಕಥೆಯುಳ್ಳ ಶಾಕುಂತಲಂ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಗುಣಶೇಖರ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ.

ಪದೇಪದೆ ಶಾಕುಂತಲಂ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗ್ತಿದೆ. ಇದೀಗ ಫೈನಲ್ ಡೇಟ್ ಅನ್ನು ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಘೋಷಿಸಿದ್ದಾರೆ. 3ಡಿ ಮತ್ತು ಗ್ರಾಫಿಕ್ಸ್ ಕೆಲಸಗಳಿಂದಾಗಿ ಮುಂದೂಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಹಿಂದೆ ಶಾಕುಂತಲಂ ಸಿನಿಮಾ ಫೆಬ್ರವರಿ  17ರಂದು ರಿಲೀಸ್ ಆಗಲಿದೆ ಎಂದು ಘೋಷಿಸಿದ್ರು. ಆದ್ರೆ ಚಿತ್ರ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ರಿಲೀಸ್ ಡೇಟ್ ಮುಂದೂಡಿದ್ರು. ಇದೀಗ ಶಾಕುಂತಲಂ ಸಿನಿಮಾ ಫೈನಲ್ ಆಗಿ ಏಪ್ರಿಲ್ 14ಕ್ಕೆ ಬರಲಿದೆ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ.

ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಶಾಕುಂತಲಂ ಸಿನಿಮಾ  ಏಪ್ರಿಲ್  14ಕ್ಕೆ ವಿಶ್ವಾದ್ಯಂತ ರಿಲೀಸ್ ಆಗ್ತಿದೆ. ಶಾಕುಂತಲಂ ಸಿನಿಮಾ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ಮಹಾಕಾವ್ಯ ಆಧರಿಸಿದ್ದು,  ಗುಣ ಶೇಖರ್ ನಿರ್ದೇಶನದ ಪೌರಾಣಿಕ ಪ್ರೇಮ ಕಾವ್ಯವಾಗಿದೆ.

ಮತ್ತೊಂದೆಡೆ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು, ಚಿತ್ರದ ಟ್ರೇಲರ್, ಮಲ್ಲಿಕಾ ಮಲ್ಲಿಕಾ.. ಹಾಡು ಜನರಿಗೆ ಸಖತ್ ಇಷ್ಟವಾಗಿದೆ. ಇದೀಗ ಶಾಕುಂತಲಂನಲ್ಲಿ ಸಮಂತಾ ತೊಟ್ಟ ಬಟ್ಟೆ ಮತ್ತು ಜ್ಯುವೆಲರಿ ಬಗ್ಗೆ ಸಖತ್ ಸುದ್ದಿಯಾಗಿದೆ.

 

ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದಲ್ಲಿ ಸಮಂತಾ ಬ್ಯೂಟಿಫುಲ್ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

suddiyaana