ಶೂಟಿಂಗ್ ವೇಳೆ ಗಾಯಗೊಂಡ ‘ಪಠಾಣ್’ ಹೀರೋ – ಅಮೆರಿಕಾದಲ್ಲಿ ಶಾರುಖ್ ಖಾನ್ ಮೂಗಿಗೆ ಸರ್ಜರಿ
ಶೂಟಿಂಗ್ ವೇಳೆ ಬಾಲಿವುಡ್‌ನ ಕಿಂಗ್‌ಖಾನ್ ಶಾರುಖ್ ಖಾನ್ ಮೂಗಿಗೆ ಗಂಭೀರವಾಗಿ ಗಾಯವಾಗಿದೆ. ಶಾರುಖ್ ಖಾನ್ ಮೂಗಿಗೆ ಗಾಯವಾಗಿದ್ದು ತೀವ್ರ ರಕ್ತಸ್ರಾವ ಆಗಿದೆ. ‘ಪಠಾಣ್’ ಹೀರೋ ಈಗ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ತಸ್ರಾವ ತಡೆಯಲು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಇದನ್ನೂ ಓದಿ: ಶಿವನ ಅವತಾರದಲ್ಲಿ ಬಾಲಿವುಡ್‌ನ ಸ್ಟೈಲ್‌ಕಿಂಗ್ – ಅಕ್ಷಯ್ ಕುಮಾರ್‌ಗೆ ಸಕ್ಸಸ್ ತಂದುಕೊಡುತ್ತಾ ‘ಓಎಂಜಿ 2’ ಸಿನಿಮಾ?
ಶಾರುಖ್ ಖಾನ್ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಶೂಟಿಂಗ್ ಸೆಟ್ ನಲ್ಲೇ ಈ ಅವಘಡ ಸಂಭವಿಸಿದ್ದು ಶಾರುಖ್ ಖಾನ್ ಅವರಿಗೆ ಗಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಕ್ಷಣ ಅವರನ್ನು ಲಾಸ್ ಏಂಜಲೀಸ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವೀಯಾಗಿದ್ದು, ಶಾರುಖ್ ಖಾನ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಸದ್ಯ ಆರಾಮಾಗಿ ಇದ್ದಾರೆ, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಶೂಟಿಂಗ್ ವೇಳೆ ಮುಂಜಾಗೃತೆ ತೆಗೆದುಕೊಂಡ ಹೊರತಾಗಿಯೂ ಪೆಟ್ಟಾಗಿದೆ. ಇನ್ನು ಶಾರುಖ್‌ಖಾನ್ ಗಾಯಗೊಂಡಿರುವ ಕಾರಣ ಶೂಟಿಂಗ್ ಅರ್ಧಕ್ಕೆ ನಿಂತಿದೆ.