ಹೆಂಡತಿ ಫೋಟೋ ತೆಗೆಯಲು ಬಂದವರ ಮೇಲೆ ಕೋಪಗೊಂಡ ನಟ ಶಾಹಿದ್‌ ಕಪೂರ್‌!

ಹೆಂಡತಿ ಫೋಟೋ ತೆಗೆಯಲು ಬಂದವರ ಮೇಲೆ ಕೋಪಗೊಂಡ ನಟ ಶಾಹಿದ್‌ ಕಪೂರ್‌!

ಸೆಲೆಬ್ರಿಟಿಗಳು ಅಂದಮೇಲೆ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇರೋದು ಕಾಮನ್‌. ಹೋದಲ್ಲಿ ಬಂದಲ್ಲಿ ಮುಗಿಬೀಳುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಅವರ ಮೇಲೆ ಪತ್ರಕರ್ತರು, ಪಾಪರಾಜಿಗಳು ಕಣ್ಣಿಟ್ಟಿರುತ್ತಾರೆ. ಮನೆಯಿಂದ ಹೊರಬರುತ್ತಿದ್ದಂತೆ ಮುತ್ತಿಗೆ ಹಾಕಿಬಿಡುತ್ತಾರೆ.. ಇದು ಕೆಲ ನಟರಿಗೆ ಕಿರಿಕಿರಿ ಅನ್ನಿಸುವುದು ಕಾಮನ್‌. ಈಗ ಶಾಹಿದ್‌ ಕಪೂರ್‌ಗೂ ಅದೇ ರೀತಿ ಆಗಿದೆ. ಶಾಹಿದ್​ ಕಪೂರ್​ ಅವರು ಪಾಪರಾಜಿಗಳ ಮೇಲೆ ಗರಂ ಆಗಿದ್ದಾರೆ.

ಇದನ್ನೂ ಓದಿ: ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಸಿಎಸ್‌ಕೆ – ತವರಿನಲ್ಲೇ ಭರ್ಜರಿ ಆಟದ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ನಟ ಶಾಹಿದ್‌ ಕಪೂರ್‌ ಪಕ್ಕಾ ಫ್ಯಾಮಿಲಿ ಮ್ಯಾನ್​. ಪತ್ನಿ ಮತ್ತು ಮಕ್ಕಳ ಜೊತೆ ಅವರು ಹೆಚ್ಚು ಕಾಲ ಕಳೆಯುತ್ತಾರೆ. ಇದೀಗ ಪತ್ನಿ ಮೀರಾ ರಜಪೂತ್ ಜೊತೆ ಬಂದ ಶಾಹಿದ್​ ಕಪೂರ್​ ಅವರ ಮೇಲೆ ಪಾಪರಾಜಿಗಳ ಮುಗಿಬಿದ್ದಿದ್ದಾರೆ. ಈ ವೇಳೆ ಶಾಹಿದ್‌ ಫುಲ್‌ ಗರಂ ಆಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಶಾಹಿದ್​ ಕಪೂರ್ ಮತ್ತು ಮೀರಾ ರಜಪೂತ್​ ಅವರು ರೆಸ್ಟೋರೆಂಟ್​ವೊಂದರಿಂದ ಹೊರಗೆ ಬರುವಾಗ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಆಗ ಶಾಹಿದ್​ ಕಪೂರ್​ ಅವರಿಗೆ ಸಖತ್​ ಕೋಪ ಬಂದಿದೆ. ಪಾಪರಾಜಿಗಳ ಮೇಲೆ ಅವರು ಕಿಡಿಕಾರಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಶಾಹಿದ್​ ಕಪೂರ್​ ಪರ ಕಮೆಂಟ್​ ಮಾಡಿದ್ದು, ಇನ್ನೂ ಕೆಲವರು ಪಾಪರಾಜಿಗಳಿಗೆ ಸಪೋರ್ಟ್​ ಮಾಡಿದ್ದಾರೆ.

ಪತ್ನಿಯ ಫೋಟೋ ತೆಗೆಯಲು ಬಂದ ಪಾಪರಾಜಿಗಳ ಮೇಲೆ ಶಾಹಿದ್​ ಕಪೂರ್​ ಕೂಗಾಡಿದ್ದಾರೆ. ‘ನೀವು ಇದನ್ನು ನಿಲ್ಲಿಸುತ್ತೀರಾ? ದಯವಿಟ್ಟು ಸರಿಯಾಗಿ ನಡೆದುಕೊಳ್ಳಿ’ ಎಂದು ಶಾಹಿದ್​ ಕಪೂರ್​ ಹೇಳಿದ್ದಾರೆ. ‘ಯಶಸ್ಸು ಸಿಕ್ಕ ಬಳಿಕ ಶಾಹಿದ್​ ಕಪೂರ್​ಗೆ ಆ್ಯಟಿಟ್ಯೂಡ್​ ಬಂದಿದೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ‘ನಿಜ ಜೀವನದಲ್ಲೂ ಕಬೀರ್​ ಸಿಂಗ್​ ಪಾತ್ರದ ರೀತಿ ಮಾಡುತ್ತಿದ್ದಾರೆ’ ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *